ಫೇಸ್ ಬುಕ್ ನಿಂದ 5 ಮಿಲಿಯನ್ ಜನರಿಗೆ ಡಿಜಿಟಲ್ ಸ್ಕಿಲ್ ತರಬೇತಿ
0
ನವೆಂಬರ್ 25, 2018
ನವದೆಹಲಿ: 2021ರ ವೇಳೆಗೆ ಐದು ಮಿಲಿಯನ್ ಜನರಿಗೆ ಡಿಜಿಟಲ್ ಸ್ಕಿಲ್ ತರಬೇತಿ ನೀಡುವ ಗುರಿ ಹೊಂದಲಾಗಿದೆ ಎಂದು ಸಾಮಾಜಿಕ ಜಾಲತಾಣದ ದಿಗ್ಗಜ ಫೇಸ್ ?ಬುಕ್ ಶನಿವಾರ ಹೇಳಿದೆ.
ವ್ಯವಹಾರ ವಿಸ್ತರಿಸಲು ಮತ್ತು ಜಾಗತಿಕ ಮಾರುಕಟ್ಟೆಯನ್ನು ಪ್ರವೇಶಿಸಲು ಸಹಕಾರಿಯಾಗುವ ನಿಟ್ಟಿನಲ್ಲಿ ಡಿಜಿಟಲ್ ಮಾಧ್ಯಮದ ಬಗ್ಗೆ ತರಬೇತಿ ನೀಡಲಾಗುವುದು ಎಂದು ಅಮೆರಿಕ ಮೂಲಕ ಕಂಪನಿ ಹೇಳಿಕೊಂಡಿದೆ. ಅಲ್ಲದೆ ಅತಿ ದೊಡ್ಡ ಮಾರುಕಟ್ಟೆಯನ್ನು ಹೊಂದಿರುವ ಭಾರತದಲ್ಲಿ ಈಗಾಗಲೇ ಒಂದು ಮಿಲಿಯನ್ ಜನರಿಗೆ ಡಿಜಿಟಲ್ ಸ್ಕಿಲ್ ತರಬೇತಿ ನೀಡಿರುವುದಾಗಿ ತಿಳಿಸಿದೆ.
ಒಂದು ಸಣ್ಣ ಬ್ಯುಸಿನೆಸ್ ಅನ್ನು ಸಹ ಜಾಗತಿಕ ಮಟ್ಟಕ್ಕೆ ಕೊಂಡೊಯ್ಯಲು ಫೇಸ್ ಬುಕ್ ಬದ್ಧವಾಗಿದೆ. ಈ ಸಂಬಂಧ ನಾವು ವಿವಿಧ ಸಂಸ್ಥೆಗಳ ಮೂಲಕ ಜನರನ್ನು ತಲುಪುತ್ತಿದ್ದೇವೆ ಎಂದು ಫೇಸ್ ಬುಕ್ ಸಾರ್ವಜನಕಿ ನೀತಿ ನಿದರ್ೇಶಕ ಅಂಖಿ ದಾಸ್ ಅವರು ವರದಿಗಾರರಿಗೆ ತಿಳಿಸಿದ್ದಾರೆ.
50 ಪಾಲುದಾರರ ಸಹಕಾರದೊಂದಿಗೆ ಫೇಸ್ ಬುಕ್ ಈಗಾಗಲೇ ದೇಶದ 150 ನಗರ ಮತ್ತು 48 ಸಾವಿರ ಗ್ರಾಮಗಳಲ್ಲಿ ಒಂದು ಮಿಲಿಯನ್ ಜನರಿಗೆ ತರಬೇತಿ ನೀಡಿದ್ದೇವೆ ಎಂದು ದಾಸ್ ಹೇಳಿದ್ದಾರೆ.
ಇತ್ತೀಚಿಗಷ್ಟೇ ಫೇಸ್ ಬುಕ್ ಕನ್ನಡ ಸೇರಿದಂತೆ ಆರು ಭಾಷೆಗಳಲ್ಲಿ ಡಿಜಿಟಲ್ ಸಾಕ್ಷರತೆಯ ಗ್ರಂಥಾಲಯಕ್ಕೆ ಚಾಲನೆ ನೀಡಿತ್ತು. ಬೆಂಗಾಲಿ, ಹಿಂದಿ, ತಮಿಳು, ತೆಲುಗು ಮಲಯಾಳಂ ಭಾಷೆಗಳ ಕಥಾನಕಗಳ ಸಂಗ್ರಹವನ್ನು ಫೇಸ್ ಬುಕ್ ಪರಿಚಯಿಸಿದೆ.


