HEALTH TIPS

ವಿಶ್ವ ಬಾಕ್ಸಿಂಗ್ ಚಾಂಪಿಯನ್ ಶಿಪ್: ದಾಖಲೆಯ 6ನೇ ಚಿನ್ನದ ಪದಕ ಗೆದ್ದ ಮೇರಿ ಕೋಮ್

ನವದೆಹಲಿ: ವಿಶ್ವ ಮಹಿಳಾ ಬಾಕ್ಸಿಂಗ್ ಚಾಂಪಿಯನ್ ಶಿಪ್ ನಲ್ಲಿ ಭಾರತದ ಬಾಕ್ಸಿಂಗ್ ತಾರೆ ಎಂ.ಸಿ. ಮೇರಿ ಕೋಮ್ ಅವರು ಶನಿವಾರ ದಾಖಲೆಯ ಆರನೇಯ ಬಾರಿ ಚಿನ್ನದ ಪದಕ ಮುಡಿಗೇರಿಸಿದ್ದಾರೆ. ನಿನ್ನೆ ನಡೆದ 48 ಕೆಜಿ ಲೈಟ್ ಫ್ಲೈವೇಟ್ ವಿಭಾಗದ ಫೈನಲ್ ಹಣಾಹಣಿಯಲ್ಲಿ ಉಕ್ರೇನ್ ನ ಎಚ್ ಓಕೋಟೊ ವಿರುದ್ಧ 5-0 ಅಂತರದ ಗೆಲುವು ಸಾಧಿಸುವ ಮೂಲಕ ಆರು ಬಾರಿ ವಿಶ್ವ ಚಾಂಪಿಯನ್ಶಿಪ್ ಗೆದ್ದ ವಿಶ್ವದ ಮೊದಲ ಬಾಕ್ಸಿಂಗ್ ತಾರೆ ಎಂಬ ಗೌರವಕ್ಕೆ ಪಾತ್ರವಾಗಿದ್ದಾರೆ. ಗುರುವಾರ ಸೆಮಿ ಫೈನಲ್ ನಲ್ಲಿ ಉತ್ತರ ಕೊರಿಯಾದ ಕಿಮ್ ಹ್ಯಾಂಗ್ ಮಿ ಅವರನ್ನು ಪರಾಜಿತಗೊಳಿಸುವ ಮೂಲಕ 35 ವರ್ಷದ ಮೇರಿ ಕೋಮ್ ಫೈನಲ್ಸ್ ಪ್ರವೇಶಿಸಿದ್ದರು. ಮೋರಿ ಕೋಮ್ ಈ ಹಿಂದೆ ಐದು ಚಿನ್ನದ ಪದಕ ಹಾಗೂ ಒಂದು ಬೆಳ್ಳಿ ಪದಕದೊಡನೆ ವಿಶ್ವ ಬಾಕ್ಸಿಂಗ್ ಚಾಂಪಿಯನ್ ಆಗಿ ಮಿಂಚಿದ್ದರು. ಮೋರಿ ಕೋಮ್ 2010ರಲ್ಲಿ ಕೊನೆಯದಾಗಿ ವಿಶ್ವ ಬಾಕ್ಸಿಂಗ್ ಚಾಂಪಿಯನ್ ಶಿಪ್ ನಲ್ಲಿ ಚಿನ್ನ ಗೆದ್ದಿದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries