HEALTH TIPS

ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿ: ಕೇರಳ ಜೆಡಿಎಸ್ ನಾಯಕನಿಗೆ ದೇವೇಗೌಡ ಸೂಚನೆ

ಬೆಂಗಳೂರು: ಕೇರಳ ನೀರಾವರಿ ಸಂಪನ್ಮೂಲ ಸಚಿವ ಹಾಗೂ ಜೆಡಿಎಸ್ ಶಾಸಕ ಮ್ಯಾಥ್ಯೂ ಟಿ ಥಾಮಸ್ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಜೆಡಿಎಸ್ ವರಿಷ್ಠ ದೇವೇಗೌಡ ಅವರು ಸೂಚನೆ ನೀಡಿದ್ದಾರೆಂದು ತಿಳಿದುಬಂದಿದೆ. ದೇವೇಗೌಡ ಅವರ ಈ ತೀಮರ್ಾನಕ್ಕೆ ಕೇರಳದ ಜೆಡಿಎಸ್ ಪಕ್ಷದಲ್ಲಿರುವ ಹಿರಿಯ ನಾಯಕರು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. ದೇವೇಗೌಡ ಅವರ ನಿಧರ್ಾರ ಆಶ್ಚರ್ಯವನ್ನು ತಂದಿದೆ ಎಂದು ಹೇಳಿದ್ದಾರೆ. ಕಚೇರಿಯಲ್ಲಿ ಸಚಿವರ ಪತ್ನಿ ಸಿಬ್ಬಂದಿಗಳೊಂದಿಗೆ ಜಾತಿವಾದಿ ನಿಂದನೆಗಳನ್ನು ಮಾಡುತ್ತಿರುವ ಹಿನ್ನಲೆಯಲ್ಲಿ ದೇವೇಗೌಡ ಅವರು ಈ ರೀತಿಯ ನಿಧರ್ಾರವನ್ನು ತೆಗೆದುಕೊಂಡಿದ್ದಾರೆಂದು ವರದಿಗಳು ತಿಳಿಸಿವೆ. ರಾಜ್ಯದ ಆಡಳಿತಾರೂಢ ಎಲ್'ಡಿಎಫ್ ಪಕ್ಷದಲ್ಲಿ ಜೆಡಿಎಸ್ ಪಕ್ಷದ ಮೂವರು ಶಾಸಕರಿದ್ದಾರೆ. ಇದರಲ್ಲಿ ಥಾಮಸ್ ಕೂಡ ಒಬ್ಬರಾಗಿದ್ದಾರೆ. ಸಚಿವ ಸ್ಥಾನದಲ್ಲಿರಲು ಥಾಮಸ್ ಅವರಿಗೆ ಅವಕಾಶ ನೀಡಲಾಗಿತ್ತು. ಇದೀಗ ಮತ್ತೊಬ್ಬ ಶಾಸಕರಿಗೆ ಆ ಅವಕಾಶ ನೀಡುವುದು ಸಾಮಾನ್ಯ. ಹೀಗಾಗಿ ಪಕ್ಷ ಮತ್ತೊಬ್ಬ ಶಾಸಕರಿಗೆ ಆ ಅವಕಾಶ ನೀಡುವ ಸಲುವಾಗಿ ಥಾಮಸ್ ಅವರಿಗೆ ರಾಜೀನಾಮೆ ನೀಡುವಂತೆ ಸೂಚಿಸಿದೆ ಎಂದು ಕೇರಳ ಜೆಡಿಎಸ್ ಪಕ್ಷದ ಪ್ರಧಾನ ಕಾರ್ಯದಶರ್ಿ ದಾನಿಶ್ ಅಲಿಯವರು ಹೇಳಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries