HEALTH TIPS

ರೆಬೆಲ್ ಸ್ಟಾರ್ ಅಂಬರೀಶ್ ವಿಧಿವಶ

ಬೆಂಗಳೂರು: ಸ್ಯಾಂಡಲ್ ವ್ವುಡ್ ರೆಬೆಲ್ ಸ್ಟಾರ್, ಮಾಜಿ ಸಚಿವ ಅಂಬರೀಶ್(66) ಶನಿವಾರರಾತ್ರಿ ನಿಧನರಾದರು. ಉಸಿರಾಟದ ತೊಂದರೆಯ ಕಾರಣ ಶನಿವಾರ ಸಂಜೆ ಬೆಂಗಳೂರಿನ ವಿಕ್ರಮ್ ಆಸ್ಪತ್ರೀಗೆ ದಾಖಲಾಗಿದ್ದ ಅಂಬರೀಶ್ ಚಿಕಿತ್ಸೆ ಫಲಕಾರಿಯಾಗದೆ ಅಸುನೀಗಿದ್ದಾರೆ. 1952ನೇ ಮೇ 25ರ<ದು ಮಂಡ್ಯದ ಮದ್ದೂರು ತಾಲೂಕುಇನ ದೊಡ್ಡರಸಿನಕೆರೆ ಗ್ರಾಮದಲ್ಲಿ ಜನಿಸಿದ್ದ ಮಳವಳ್ಳಿ ಹುಚೇಗೌಡ ಅಮರನಾಥ್ (ಅಂಬರೀಶ್) ಪುಟ್ಟಣ್ಣ ಕಣಗಾಲ್ ನಿದರ್ೇಸನದ "ನಾಗರಹಾವು" ಚಿತ್ರದ ಮೂಲಕ ಚಿತ್ರರಂಗ ಪ್ರವೇಶಿಸಿದ್ದರು. ಇತ್ತೀಚೆಗೆ ಅವರ ಅಭಿನಯದ "ಅಂಬಿ ನಿಂಗ್ ವಯಸ್ಸಾಯ್ತೋ" ಚಿತ್ರ ತೆರೆಕಂಡು ಯಶಸ್ವಿ ಪ್ರದರ್ಶನ ಕಾಣುತ್ತಿತ್ತು. 1952 ಮೇ 29ರಂದು ಮಂಡ್ಯ ಜೆಲ್ಲೆ ಮದ್ದೂರು ತಾಲೂಕಿನ ದೊಡ್ಡರಸನ ಕೆರೆಗ್ರಾಮದಲ್ಲಿ ಹುಚ್ಚೇಗೌಡ, ಪದ್ಮಮ್ಮ ದಂಪತಿಗೆ 6ನೇ ಮಗನಾಗಿ ಜನಿಸಿದ್ದ ಅಂಬರಿಶ್ ಮೊದಲ ಹೆಸರು ಮಳವಳ್ಳಿ ಹುಚ್ಚೇಗೌಡ ಅಮರನಾಥ್. ಖ್ಯಾತ ಪಿಟೀಲು ವಾದಕ ಟಿ.ಚೌಡಯ್ಯರವರ ಮೊಮ್ಮಗನಾಗಿದ್ದ ಅಂಬರೀಶ್ ಮಂಡ್ಯದಲ್ಲಿ ಪ್ರಾಥಮಿಕ ವಿದ್ಯಾಭ್ಯಾಸ ಮುಗಿಸಿದ್ದರು. ಮೈಸೂರಿನಲ್ಲಿ ಪದವಿ ಶಿಕ್ಷಣ ಮಾಡಿದ್ದ ಅಂಬರೀಶ್ 1991ರಲ್ಲಿ ಕನ್ನಡದ ಮೇರು ನಟಿ ಸುಮಲತಾ ಅವರನ್ನು ವಿವಾಹವಾಗಿದ್ದರು. ಅಭಿಷೇಕ್ವರ ಏಕೈಕ ಪುತ್ರ 1972ರಲ್ಲಿ ತೆರೆಕಂಡ ಪುಟ್ಟಣ್ಣ ಕಣಗಾಲ್ ನಿದರ್ೇಶನದ "ನಾಗರಹಾವು" ಚಿತ್ರ ಅಂಬರೀಶ್ ಅವರ ಪ್ರಥಮ ಚಿತ್ರವಾಗಿತ್ತು. ಇದರಲ್ಲಿ ಅವರು ಮಾಡಿದ್ದ "ಜಲೀಲ" ಪಾತ್ರ ಇಂದಿಗೆ ಸಹ ಜನಮಾನಸದಲ್ಲಿ ಅಚ್ಚಳಿಯದೆ ಉಳಿದಿದೆ. ಅಂತ, ಪಡುವಾರಳ್ಳಿ ಪಾಂಡವರು, ಮಸಣದ ಹೂವು, ಶುಭಮಂಗಳ, ರಂಗನಾಯಕಿ, ಶುಭಮಂಗಳ, ಸೇರಿ ಇನ್ನೂರಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ್ದರು. ನಾಯಕನಾಗಿ ಅನೇಕ ಚ್ವಿತ್ರಗಳಲ್ಲಿ ಅಭಿನಯಿಸಿದ್ದ ಅಂಬರೀಶ್ ದಿಗ್ಗಜರು, ಬುಲ್ ಬುಲ್ ಸೇರಿ ಅನೇಕ ಚಿತ್ರಗಳಲ್ಲಿ ವಿಭಿನ್ನ ಶೈಲಿಯ ಫಾತ್ರಗಳಿಂದ ಮನಸೋರೆಗೊಂಡಿದ್ದರು.ಚಿತ್ರರಂಗಕ್ಕೆ ಇವರು ನೀಡಿದ್ದ ಸೇವೆಯನ್ನು ಗ್ಗುರುತಿಸಿ ಅವರಿಗೆ 2013 ರಲ್ಲಿ ಕನರ್ಾಟಕ ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್ ನೀಡಿ ಪುರಸ್ಕರಿಸಿತ್ತು. ಇನ್ನು ಅಂಬರೀಶ್ ಚಿತ್ರರಸಿಕರ ಮನ ತಣಿಸಿದ್ದಷ್ಟೇ ಅಲ್ಲದೆ ರಾಜಕೀಯ ರಂಗದಲ್ಲಿ ಸಹ ಯಶಸ್ವಿ ನಾಯಕರೆನಿಸಿದ್ದರು.ಜನತಾದಳದ ಮೂಲಕ ರಾಜಕೀಯ ರಂಗ ಪ್ರವೇಶಿಸಿದ್ದ ಅಂಬರೀಶ್ ಬಳಿಕ ಕಾಂಗ್ರೆಸ್ ಪಕ್ಷಕ್ಕೆ ಸೇರಿ ಶಾಸಕ, ಸಂಸದ, ರಾಜ್ಯ, ಕೇಂದ್ರದಲ್ಲಿ ಸಚಿವರಾಗಿ ಅಧಿಕಾರ ನಿರ್ವಹಿಸಿದ್ದರು. ಅಸಂಖ್ಯ ಅಭಿಮಾನಿಗಳನ್ನು ಹೊಂದಿದ್ದ ಅಂಬರೀಶ್ ಅವರಿಗೆ ರಾಜಕೀಯದಲ್ಲಿ ಸಹ ಒಳ್ಳೆಯ ಗೌರವವಿತ್ತು. 1998ರಿಂದ 2009ರವರೀಗೆ ಲೋಕಸಭಾ ಸದಸ್ಯರಾಗಿದ್ದ ಅವರು 2006-08ರಲ್ಲಿ ಕನರ್ಾಟಕ ರಾಜ್ಯ ಮಾಹಿತಿ ಮತ್ತು ತಂತ್ರಜ್ಞಾನ ಸಚಿವರಾಗಿ ಸೇವೆ ಸಲ್ಲಿಸಿದ್ದರು.ಕನರ್ಾಟಕ ರಾಜ್ಯ ಪ್ರದೇಶ ಕಾಂಗ್ರೆಸ್ ಪಕ್ಷದ ಉಪಾಧ್ಯಕ್ಷ, ಕನರ್ಾಟಕ ರಾಜ್ಯ ವಸತಿ ಸಚಿವರಾಗಿ ಸಹ ಅಂಬರೀಶ್ ಕಾರ್ಯ ನಿರ್ವಹಿಸಿದ್ದರು. ಚಿತ್ರಜೀವನದಲ್ಲಿ ಇವರ ಯಶಸ್ವಿ ಅಭಿನಯಕ್ಕಾಗಿ ಫಿಲ್ಮ್ ಫೇರ್, ರಾಜ್ಯ ಚಲನಚಿತ್ರ ಪ್ರಶಸ್ತಿಗಳು ಅಂಬರೀಶ್ ಮುಡಿಗೇರಿದ್ದವು. ಅಲ್ಲದೆ ಎನ್.ಟಿ.ಆರ್ ನ್ಯಾಷನಲ್ ಪ್ರಶಸ್ತಿ, ಜೀವಮಾನ ಸಾಧನೆ ಫಿಲ್ಮ್ ಫೇರ್, ಆಂಧ್ರ ಸಕರ್ಾರದ ನಂದಿ ಪುರಸ್ಕಾರ, ಕನರ್ಾಟಕ ಸಕರ್ಾರದ ವಿಷ್ಣುವರ್ಧನ್ ಪ್ರಶಸ್ತಿ,ಗಳು ಸಹ ಇವರಿಗೆ ಸಂದಿದ. ಮಂಡ್ಯ ಬಸ್ ದುರಂತಕ್ಕೆ ಸಂತಾಪ ಸೂಚಿಸಿದ್ರು! ತಾವು ನಿಧನರಾಗುವ ಕೆಲ ಗಂಟೆಗಳ ಮುನ್ನ ಅಂಬರೀಶ್ ಶನಿವಾರ ಬೆಳಿಗ್ಗೆ ಮಂಡ್ಯ ಪಾಂಡವಪುರದಲ್ಲಿ ನಡೆದ ಭೀಕರ ಬಸ್ ಅಪಘಾತದಲ್ಲಿ ಮಡಿದವರ ಪರ ಸಂತಾಪ ಸೂಚಿಸಿದ್ದರು. ಖಾಸಗಿ ವಾಹಿನಿಗಳಲಿ ಅವರ ಸಂತಾಪ ಸೂಚಕ ಮಾತುಗಳು ಪ್ರಸಾರವಾಗಿದ್ದವು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries