ಗೋಸಾಡ ಶ್ರೀಕ್ಷೇತ್ರದಲ್ಲಿ ಜಾತ್ರೋತ್ಸವ ದೈವಕೋಲದೊಂದಿಗೆ ಸಂಪನ್ನ
0
ನವೆಂಬರ್ 25, 2018
ಬದಿಯಡ್ಕ: ಗೋಸಾಡ ಶ್ರೀ ಮಹಿಷಮದರ್ಿನೀ ದೇವಸ್ಥಾನದಲ್ಲಿ ವಾಷರ್ಿಕ ಜಾತ್ರಾ ಮಹೋತ್ಸವದ ಸಂದರ್ಭದಲ್ಲಿ ನಡೆಯುವ ದೈವಗಳ ಕೋಲವು ಶನಿವಾರ ನಡೆಯಿತು. ಬುಧವಾರ ಜಾತ್ರಾ ಮಹೋತ್ಸವ ಆರಂಭವಾಗಿತ್ತು.
ದೈವಕೋಲದ ಅಂಗವಾಗಿ ಶುಕ್ರವಾರ ರಾತ್ರಿ ಮಲ್ಲಮೂಲೆ ತರವಾಡು ಮನೆಯಿಂದ ಶ್ರೀ ಮಹಾವಿಷ್ಣುಮೂತರ್ಿ ದೈವದ ಭಂಡಾರ ಆಗಮಿಸಿತು. ಶ್ರೀ ದೇವಿಗೆ ಕಾತರ್ಿಕ ಪೂಜೆ ಹಾಗೂ ದೈವಗಳಿಗೆ ತೊಡಂಗಲ್ ನಡೆಯಿತು. ಶನಿವಾರ ಬೆಳಗ್ಗೆ ಶ್ರೀ ರಕ್ತೇಶ್ವರಿ ದೈವದ ಕೋಲ, ನಾಗದೇವರಿಗೆ ತಂಬಿಲ ಹಾಗೂ ಮಧ್ಯಾಹ್ನ ಶ್ರೀ ಮಹಾವಿಷ್ಣುಮೂತರ್ಿ ದೈವದ ಕೋಲ ನಡೆಯಿತು. ಮಾಟೆ ಮನೆತನದವರ ವತಿಯಿಂದ ನಡೆದ ದೈವದಕೋಲದ ಸಂದರ್ಭದಲ್ಲಿ ಊರಪರವೂರ ಅನೇಕ ಭಕ್ತಾದಿಗಳು ಪಾಲ್ಗೊಂಡು ಅರಸಿನ ಹುಡಿ ಪ್ರಸಾದವನ್ನು ಸ್ವೀಕರಿಸಿ ಕೃತಾರ್ಥರಾದರು. ಮಧ್ಯಾಹ್ನ ಮಹಾಪೂಜೆಯ ನಂತರ ಶ್ರೀ ಮಹಿಷಮದರ್ಿನೀ ಸೇವಾ ಸಮಿತಿಯ ವತಿಯಿಂದ ಅನ್ನ ಸಂತರ್ಪಣೆ ನಡೆಯಿತು. ಶ್ರೀ ದೈವಗಳ ಭಂಡಾರ ನಿರ್ಗಮನದೊಂದಿಗೆ ಕಾರ್ಯಕ್ರಮಗಳು ಸಂಪನ್ನವಾಯಿತು.



