HEALTH TIPS

ಆತ್ಮೀಯತೆ ಬೆಳೆಸುವುದರಿಂದ ನೆಮ್ಮದಿ ಕಾಣಲು ಸಾಧ್ಯ : ಸತ್ಯನಾರಾಯಣ ಶರ್ಮ ಪಂಜಿತ್ತಡ್ಕ

ಬದಿಯಡ್ಕ: ಕೌಟುಂಬಿಕ ಸಂಬಂಧಗಳು ಮುರಿದು ಬೀಳುತ್ತಿರುವ ಕಾಲಘಟ್ಟದಲ್ಲಿ ಸಂಬಂಧಗಳ ಮೌಲ್ಯಗಳನ್ನು ತಿಳಿಹೇಳುವ ವಾತ್ಸಲ್ಯದ ಬೆಸುಗೆಯನ್ನು ಗಟ್ಟಿಗೊಳಿಸುವ ಕಾರ್ಯಚಟುವಟಿಕೆಗಳಲ್ಲಿ ಮಕ್ಕಳನ್ನು ತೊಡಗಿಸಿಕೊಳ್ಳುವ ಅನಿವಾರ್ಯತೆ ಇದೆ. ಹಿರಿಯರಲ್ಲಿ, ಬಂಧು-ಮಿತ್ರರಲ್ಲಿ, ಸಮಾಜ ಬಾಂಧವರಲ್ಲಿ ಆತ್ಮೀಯತೆಯನ್ನು ಬೆಳೆಸುವುದರಿಂದ ದ್ವೇಷ, ಅಸೂಯೆಗಳು ಕಮರಿ ಹೋಗಿ ನೆಮ್ಮದಿಯನ್ನು ಕಾಣಲು ಸಾಧ್ಯ ಎಂದು ಬದಿಯಡ್ಕ ಶ್ರೀ ಭಾರತೀ ವಿದ್ಯಾಪೀಠದ ಮುಖ್ಯೋಪಾಧ್ಯಾಯ ಸತ್ಯನಾರಾಯಣ ಶರ್ಮ ಪಂಜಿತ್ತಡ್ಕ ಹೇಳಿದರು. ಕಾತರ್ಿಕ ಮಾಸ ಹುಣ್ಣಿಮೆಯ ವಿಶೇಷ ದಿನದಂದು ಬದಿಯಡ್ಕ ಶ್ರೀ ಭಾರತೀ ವಿದ್ಯಾಪೀಠದಲ್ಲಿ ಶುಕ್ರವಾರ ನಡೆದ `ಬೆಸುಗೆಯ ಒಸಗೆ' ಮಾತೃ ಪೂಜನದ ನೇತೃತ್ವವನ್ನು ವಹಿಸಿ ಮಾತನಾಡಿದರು. ಶಾಲೆಯಲ್ಲಿ ಕಲಿಯುತ್ತಿರುವ ಮಕ್ಕಳಿಗೆ ವಿಷಯಾಧಾರಿತ ಪಠ್ಯ ಪ್ರವಚನಗಳ ಜೊತೆಯಲ್ಲಿ ದೈನಂದಿನ ಜೀವನದಲ್ಲಿ ಅತೀ ಅಗತ್ಯವಾಗಿ ಅನುಸರಿಸಬೇಕಾದ ಶಿಸ್ತುಬದ್ಧ ಜೀವನಕ್ರಮವನ್ನೂ ತಿಳಿಸಿಕೊಡಬೇಕು. ಇದಕ್ಕೆ ಪಾಲಕರನ್ನೂ ಜೊತೆಗೂಡಿಸಿಕೊಂಡು ಉತ್ತಮ ಸಂಸ್ಕಾರಭರಿತ ಕಾರ್ಯಕ್ರಮವಾಗಿ ಹಮ್ಮಿಕೊಂಡಿರುತ್ತೇವೆ ಎಂದರು. ಬಳಿಕ ಮಕ್ಕಳಿಗೆ ಪ್ರತಿಜ್ಞಾವಿಧಿ ಬೋಧಿಸಲಾಯಿತು. ಹೆತ್ತವರು ಭಾವುಕರಾಗಿ ಮಕ್ಕಳನ್ನು ಹರಸಿದ ಸಂದರ್ಭ ಅನಿರ್ವಚನೀಯವಾಗಿತ್ತು. ಶಾಲಾ ಆಡಳಿತ ಮಂಡಳಿ ಸದಸ್ಯರಾದ ಶಾಮ ಭಟ್ ಬೇರ್ಕಡವು ಮಾತನಾಡಿ ಇಂತಹ ಅಪರೂಪದ ಕ್ಷಣದಲ್ಲಿ ಭಾಗಿಯಾಗಿದ್ದು ಮನಸ್ಸಿಗೆ ಮುದನೀಡಿದೆ ಎಂದು ಹೇಳುವುದರೊಂದಿಗೆ ಹೆತ್ತವರಿಗೆ ಹಾಗೂ ಶಾಲೆಗೆ ಕೀತರ್ಿ ತರುವಂತಹ ಕಾರ್ಯಗಳನ್ನು ಮಾಡಬೇಕು ಎಂದರು. ಹತ್ತನೆಯ ತರಗತಿಯ ವಿದ್ಯಾಥರ್ಿಗಳು ಕಾರ್ಯಕ್ರಮವನ್ನು ಸಂಯೋಜಿಸಿದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries