ವಿಷ್ಣು ಸಹಸ್ರನಾಮ ಅಭಿಯಾನ ರಥ ಯಾತ್ರೆ ಚಿಗುರುಪಾದೆಯಲ್ಲಿ
0
ನವೆಂಬರ್ 25, 2018
ಉಪ್ಪಳ: ಶ್ರೀ ನಿತ್ಯಾನಂದ ಯೋಗಾಶ್ರಮ ಕೊಂಡೆವೂರಿನಿಂದ ಶ್ರೀ ವಿಷ್ಣು ಸಹಸ್ರನಾಮ ಅಭಿಯಾನದ ರಥ ಯಾತ್ರೆಯು ಶ್ರೀ ಯೋಗಾನಂದ ಸರಸ್ವತಿ ಸ್ವಾಮೀಜಿಗಳ ಮಾರ್ಗದರ್ಶನದಲ್ಲಿ ವೇದಮೂತರ್ಿ ಹರಿನಾರಾಯಣ ಮಯ್ಯ ಕುಂಬಳೆ ಅವರ ನೇತೃತ್ವದಲ್ಲಿ ಚಿಗುರುಪಾದೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಶುಕ್ರವಾರ ಸಂಜೆ ಆಗಮಿಸಿ ಶ್ರೀ ವಿಷ್ಣು ಸಹಸ್ರನಾಮ ಪಾರಾಯಣದೊಂದಿಗೆ ಶ್ರೀ ಕ್ಷೇತ್ರದಲ್ಲಿ ಮಹಾಪೂಜೆಯು ಜರಗಿತು.
ಕೊಂಡೆವೂರು ಸ್ವಾಮೀಜಿಯವರು ಮುಂದೆ ಅಲ್ಲಿ ಜರಗಲಿರುವ ಅತಿರಾತ್ರ ಸೋಮಯಾಗದ ಮಹತ್ವವನ್ನು ವಿವರಿಸಿ ಪ್ರವಚನ ನೀಡಿದರು. ಡಾ.ಶ್ರೀಧರ ಭಟ್ ಉಪ್ಪಳ, ಗಂಗಾಧರ ಕೊಂಡೆವೂರು, ದಿನಕರ ಹೊಸಂಗಡಿ, ಹರೀಶ್ ಶೆಟ್ಟಿ ಮಾಡ ಮುಂತಾದವರು ಉಪಸ್ಥಿತರಿದ್ದ ಕಾರ್ಯಕ್ರಮದಲ್ಲಿ ಡಾ.ಜಯಪ್ರಕಾಶ ನಾರಾಯಣ ತೊಟ್ಟೆತ್ತೋಡಿ ಸ್ವಾಗತಿಸಿದರು. ಸದಾಶಿವ ರಾವ್.ಟಿ.ಡಿ ವಂದಿಸಿದರು. ಕ್ಷೇತ್ರ ಸೇವಾ ಟ್ರಸ್ಟ್ ಅಧ್ಯಕ್ಷ ಪ್ರೇಮಾ.ಕೆ ಭಟ್, ಮೊಕ್ತೇಸರ ವಸಂತ ಭಟ್ ತೊಟ್ಟೆತ್ತೋಡಿ ಕ್ಷೇತ್ರದ ವತಿಯಿಂದ ಸ್ವಾಮೀಜಿಗಳಿಗೆ ಗೌರವಾರ್ಪಣೆ ನೀಡಿದರು.


