ಆವಳ ಮಠದಲ್ಲಿ ಕಾತರ್ಿಕ ಹುಣ್ಣಿಮೆ ಸಂಪನ್ನ
0
ನವೆಂಬರ್ 25, 2018
ಉಪ್ಪಳ: ಕಾತರ್ಿಕ ಹುಣ್ಣಿಮೆ ವಿಶೇಷ ದಿನದಂದು ಆವಳ ಮಠ ಶ್ರೀ ದುಗರ್ಾಪರಮೇಶ್ವರಿ ದೇವಸ್ಥಾನದಲ್ಲಿ ಶುಕ್ರವಾರ ಉತ್ಸವ ಪೂಜಾಚರಣೆ ನಡೆಯಿತು.
ಕಾತರ್ಿಕ ಹುಣ್ಣಿಮೆಯನ್ನು ದೇವ ದೀಪಾವಳಿಯೆಂದು ಕರೆಯಲಾಗುತ್ತಿದ್ದು, ಶುಭ ದಿನದಂದು ದೇವಸ್ಥಾನದಲ್ಲಿ ಬೆಳಿಗ್ಗೆ ವಿಶೇಷ ಪೂಜೆ, ಮಧ್ಯಾಹ್ನ ಪೂಜೆ ಪ್ರಸಾದ ವಿತರಣೆ ಹಾಗೂ ಅನ್ನ ಸಂತರ್ಪನೆ ನಡೆಯಿತು. ಮಧ್ಯಾಹ್ನ ಸಾಂಸ್ಕೃತಿಕ ಕಾರ್ಯಕ್ರಮದ ಭಾಗವಾಗಿ ಭೀಷ್ಮ' ಯಕ್ಷಗಾನ ತಾಳಮದ್ದಳೆ ಏರ್ಪಟ್ಟಿತು. ಭಾಗವತರಾಗಿ ಪ್ರಸಾದ ಬಲಿಪ. ಅರ್ಥಧಾರಿಗಳಾಗಿ ಶಂಭು ಶರ್ಮ ವಿಟ್ಲ, ವಾಸುದೇವ ರಂಗ ಭಟ್ಟ ಮಧೂರು, ಹಿರಣ್ಯ ವೆಂಕಟೇಶ್ವರ ಭಟ್, ಜಯಪ್ರಕಾಶ ಶೆಟ್ಟಿ ಪೆಮರ್ುದೆ ಸಹಕರಿಸಿದರು. ಶುಕ್ರವಾರದಂದು ರಾತ್ರಿ ವಿಶೇಷ ದೀಪೋತ್ಸವ ಕಾರ್ಯಕ್ರಮ ಜರುಗಿತು.



