ಧ್ಯಾನಸ್ಥ ಸ್ಥಿತಿಯ, ರವಿಗೆ ಬೆನ್ನು ಹಾಕಿ ಬರೆಯುವ ಕವಿತೆಗಳು ಹುಟ್ಟಬೇಕು-ಡಾ.ರಾಧಾಕೃಷ್ಣ ಬೆಳ್ಳೂರು
0
ನವೆಂಬರ್ 25, 2018
ಮಂಜೇಶ್ವರ: ವ್ಯಕ್ತಿ ಕೇಂದ್ರೀತ ಕವಿತೆಗಳು ಬಯೋಡೇಟಾ ಆಗಬಾರದು, ಹೋರಾಟದ ಕವಿತೆಗಳು ಸ್ಲೋಗನ್ ಗಳಾಗಬಾರದು. ಕಾವ್ಯ ಬರಹ ಮತ್ತು ಆಸ್ವಾದನೆಗೆ ಅದರದೆ ಆದ ಮಹತ್ವವಿದೆ. ರೇಶನ್ ಅಂಗಡಿಯಲ್ಲಿ ಚಿಮೆಣಿ ಎಣ್ಣೆ ಇಲ್ಲ ಅನ್ನಲು ನಿಮ್ಮ ಕವಿತೆಯ ಅಗತ್ಯತೆ ಇಲ್ಲ ಎಂಬುದನ್ನು ಕಾಸರಗೋಡಿನ ಸಾಹಿತಿ ಎ.ಈಶ್ವರಯ್ಯ ಅವರ ಮಾತಾಗಿತ್ತು, ಇದರರ್ಥ ಕವಿತೆ ಬರಹಕ್ಕೂ ಅದರದ್ದೆ ಆದ ವಿಷಯ ಮತ್ತು ಅಂತಸತ್ವ ಇರಬೇಕಿದೆ. ಜಿಲ್ಲೆಯಲ್ಲಿನ ಎಲ್ಲ ಕವಿಗಳು ಒಟ್ಟಿಗೆ ಕುಳಿತು ಪರಸ್ಪರ ಜೊತೆಗೂಡಿ ಕವಿತೆಗಳ ಬಗ್ಗೆ ಸಲಹೆಗಳನ್ನು, ವಿಮಶರ್ೆಗಳನ್ನು ಮಾಡಬೇಕಿದೆ. ಹಿರಿಯ ಕವಿವರ್ಯರು ಹೇಳಿದಂತೆ ಕವಿತೆಗಳು ನಮ್ಮನ್ನು ಎಂದಿಗೂ ಕಾಡಬೇಕಿದೆ, ಕಾಡುತ್ತಲೇ ಇರಬೇಕಿದೆ. ಪುನಃ ಕೇಳಬೇಕೆಂಬ ಆಸ್ವಾದಿಸಬೇಕೆಂಬ ರಸಾಸ್ವಾದವನ್ನು ಸೃಷ್ಠಿಸಬೇಕು, ಹಾಗಿದ್ದಲ್ಲಿ ಮಾತ್ರವೇ ಕವಿತೆಗಳು ನಮ್ಮನ್ನು ಹಿಡಿದಿಟ್ಟುಕೊಳ್ಳಲಿವೆ ಎಂದು ಕಾಸರಗೋಡು ಸರಕಾರಿ ಕಾಲೇಜಿನ ಪ್ರಾಧ್ಯಾಪಕ ಡಾ. ರಾಧಾಕೃಷ್ಣ ಬೆಳ್ಳೂರು ಹೇಳಿದರು.
ಕಾಸರಗೋಡು ಜಿಲ್ಲಾ ಕನ್ನಡ ಲೇಖಕರ ಸಂಘವು ಮಂಜೇಶ್ವರ ಗೋವಿಂದ ಪೈ ಸ್ಮಾರಕ ಟಸ್ಟ್ ಸಹಯೋಗದೊಂದಿಗೆ ಗಿಳಿವಿಂಡು ಸ್ಮಾರಕದ ಪಾತರ್ಿಸುಬ್ಬ ವೇದಿಕೆಯಲ್ಲಿ ಶನಿವಾರ ಅಪರಾಹ್ನ ಹಮ್ಮಿಕೊಂಡ ಗಡಿನಾಡ ಹಿರಿ-ಕಿರಿಯ ಕವಿಗಳ ಸಮ್ಮಿಲನ ಕಾವ್ಯಾಂಜಲಿ ಕಾರ್ಯಕ್ರಮದಲ್ಲಿ ಕಾವ್ಯಾ ರಸಾಸ್ವಾದನೆ ವಿಷಯದಲ್ಲಿ ವಿಶೇಷ ಉಪನ್ಯಾಸ ನೀಡಿ ಅವರು ಮಾತನಾಡಿದರು.
ಕವಿತೆ ಯಾವಾಗಲೂ ವಾಚ್ಯ ಆಗಬಾರದು. ಕವಿತೆಯ ಒಂದು ಗೆರೆ ಒಂದು ಶಬ್ದ ಮನಸ್ಸಿಗೆ ಯಾವಾಗ ನಾಟುತ್ತದೋ ಅಂದು ಆ ಕವಿತೆ ಚಿರಸ್ಥಾಯಿಯಾಗುತ್ತದೆ ಹಾಗೂ ಎಂದಿಗೂ ಬೆರಗು ಹುಟ್ಟಿಸುತ್ತದೆ ಎಂದು ಅವರು ಹೇಳಿದರು. ಈ ಸಂದರ್ಭ ಸು.ರಂ ಎಕ್ಕುಂಡಿಯವರ ಕವಿತೆಯನ್ನು ಅವರು ವಾಚಿಸಿದರು. ಕುವೆಂಪು ಅಡಿಗರು ಕಾವ್ಯ ರಚನೆಯಲ್ಲಿ ವಿಶೇಷ ಸಾಧನೆಗೈದವರು ಇಂತಹವರ ಕವಿ ಕಾವ್ಯಗಳನ್ನು ಓದದೆ, ಹೊಸತನದ ಸೃಷ್ಠಿ ನಮಗೆ ಸಾಧ್ಯವಾಗದು ಎಂದರು. ಇಂದು ಧ್ಯಾನಸ್ಥ ಸ್ಥಿತಿಯಿಂದ ಹುಟ್ಟುವ, ಪರಿಣಾಮದ ದೃಷ್ಠಿಯಿಂದ ರವಿಗೆ ಬೆನ್ನು ಹಾಕುವ ಕವಿಗಳು ಬೇಕಿದ್ದಾರೆ ಎಂದು ಅವರು ವಿಶ್ಲೇಶಿಸಿದರು. ಗೋವಿಂದ ಪೈ, ಕಯ್ಯಾರ ನಂತರದ ಕಾಸರಗೋಡಿನ ಸಾಹಿತಿ ತಿರುಮಲೇಶ್ ಅವರಂತಹ ವ್ಯಕ್ತಿಗಳನ್ನು ನಾವು ಕವಿತೆ ರಚನೆಗೆ ಮಾದರಿಯನ್ನಾಗಿಸಬೇಕಿದೆ ಎಂದರು. ಕವಿತೆಗಳ ಮೂಲಕ ವ್ಯಕ್ತಿ ಸಾರ್ವತ್ರಿಕವಾಗಿ ಬದುಕಬೇಕು ಎಂದರು.
ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಹಿರಿಯ ವೈದ್ಯ,ಸಾಹಿತಿ, ಜಿಲ್ಲಾ ಲೇಖಕರ ಸಂಘದ ಅಧ್ಯಕ್ಷ ಡಾ.ರಮಾನಂದ ಬನಾರಿ ಅವರು, ಜಿಲ್ಲೆಯಲ್ಲಿ ಬರೆಯದವರು ಬರೆಯಬೇಕು, ಬರೆದವರು ಹೆಚ್ಚು ಬರೆದವರು, ಹೆಚ್ಚು ಬರೆದವರು ಮತ್ತೂ ಹೆಚ್ಚು ಬರೆಯಬೇಕು ಎಂದರು. ಕಾವ್ಯ ಎಂಬುದು ಸಮಗ್ರವಾಗಿ ವಿಸ್ತರಿಸಲ್ಪಡಬೇಕು. ಹಳೆ ತಲೆಮಾರಿನಿಂದ ಹೊಸ ತಲೆಮಾರಿಗೆ ಕವಿತೆಗಳು ನಿರಂತರವಾಗಿ ಮುಂದುವರಿಯಬೇಕು, ಸಾಹಿತಿಕವಾಗಿ ಆರೋಗ್ಯವಂತ ಸಮಾಜ ಸೃಷ್ಠಿಗೆ ನಾಂದಿ ಹಾಡಬೇಕಿದೆ ಎಂದರು.
ಮಂಜೇಶ್ವರ ಗೋವಿಂದ ಪೈ ಸ್ಮಾರಕ ಟ್ರಸ್ಟಿ ಕೆ.ಆರ್ ಜಯಾನಂದ ಮಾತನಾಡಿ ಬಹುಭಾಷಾ ಪಂಡಿತರಾಗಿದ್ದ ಗೋವಿಂದ ಪೈ ಅವರು ನಮ್ಮ ಕಾಸರಗೋಡು ಜಿಲ್ಲೆಯ ಹೆಮ್ಮೆ. ಬಹಳ ಸಮಯದ ನಂತರ ಸ್ಮಾರಕ ಕೇಂದ್ರದಲ್ಲಿ ಸಾಹಿತಿಕವಾಗಿ ಒಂದು ಕಾರ್ಯಕ್ರಮ ಏರ್ಪಡುತ್ತಿರುವುದು ಸಂತಸ ತಂದಿದೆ ಎಂದರು. ಜಿಲ್ಲೆಯಲ್ಲಿ ಕನ್ನಡದ ಅಳಿವು ಉಳಿವಿಗೆ ನಾವೇ ಕಾರಣರಾಗುತ್ತಿದ್ದೇವೆ, ಕನ್ನಡ ಸಂಸ್ಕೃತಿ ಆಚಾರ ವಿಚಾರಗಳ ಉಳಿವಿಗೆ ಎಂದಿಗೂ ಕಂಕಣಬದ್ಧರಾಗಿರಬೇಕೆಂದು ಹೇಳಿದರು. ಕನ್ನಡ ಸಾಹಿತ್ಯ ಪರಿಷತ್ ಗಡಿನಾಡ ಘಟಕದ ಅಧ್ಯಕ್ಷ ಎಸ್.ವಿ ಭಟ್ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಸ್ಮಾರಕ ಟ್ರಸ್ಟ್ ಕೋಶಾಧಿಕಾರಿ ಬಿ.ವಿ ಕಕ್ಕಿಲ್ಲಾಯ ಇದ್ದರು. ನಿವೃತ್ತ ಪ್ರಾಂಶುಪಾಲ ಪಿ.ಎನ್.ಮೂಡಿತ್ತಾಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದರು. ಸ್ಮಾರಕದ ಟ್ರಸ್ಟಿ ಸುಭಾಶ್ಚಂದ್ರ ಕಣ್ವತೀರ್ಥ ಸ್ವಾಗತಿಸಿದರು, ಪ್ರಾರ್ಥನೆ ಹಾಡಿದರು, ಕವಿತಾ ಕೂಡ್ಲು ಕಾರ್ಯಕ್ರಮ ನಿರೂಪಿಸಿದರು. ಬಳಿಕ ನಡೆದ ಕವಿಗೋಷ್ಠಿಯಲ್ಲಿ ಶ್ರೀಕೃಷ್ಣಯ್ಯ ಅನಂತಪುರ, ವಿ.ಬಿ.ಕುಳಮರ್ವ, ಕಾಸರಗೋಡು ಸರಕಾರಿ ಕಾಲೇಜಿನ ಕನ್ನಡ ಉಪನ್ಯಾಸಕ ರತ್ನಾಕರ ಮಲ್ಲಮೂಲೆ, ಕೃಷ್ಣವೇಣಿ ಕಿದೂರು, ಗುಣಾಜೆ ರಾಮಚಂದ್ರ ಭಟ್, ಮೊದಲಾದವರು ಉಪಸ್ಥಿತರಿದ್ದರು.

