HEALTH TIPS

No title

    ಗೋಕರ್ಣ ಮಹಾಬಲೇಶ್ವರ ದೇಗುಲವನ್ನು ಮಠಕ್ಕೆ ವಹಿಸಿ
              ರಾಮಚಂದ್ರಾಪುರ ಮಠದ ಮನವಿ ಎತ್ತಿಹಿಡಿದ ಸುಪ್ರೀಂ ಕೋಟರ್್
    ಹೊಸದಿಲ್ಲಿ: ಗೋಕರ್ಣದ ಮಹಾಬಲೇಶ್ವರ ದೇವಸ್ಥಾನದ ನಿರ್ವಹಣೆಯನ್ನು ಸೋಮವಾರದೊಳಗೆ ರಾಮಚಂದ್ರಾಪುರ ಮಠಕ್ಕೆ ವಹಿಸುವಂತೆ ಸುಪ್ರೀಂ ಕೋಟರ್್ ಸ್ಪಷ್ಟ ಆದೇಶ ನೀಡಿದೆ.
   ರಾಮಚಂದ್ರಾಪುರ ಮಠದ ಆಡಳಿತದಲ್ಲಿದ್ದ ದೇಗುಲವನ್ನು ರಾಜ್ಯ ಸರಕಾರದ ವಶಕ್ಕೆ ಕೊಟ್ಟಿದ್ದ ಸೆ.10ರ ಹೈಕೋಟರ್್ ಆದೇಶ ಪ್ರಶ್ನಿಸಿ ಮಠದ ಪರವಾಗಿ ಸಲ್ಲಿಸಿದ್ದ ಅಜರ್ಿಯ ವಿಚಾರಣೆಯನ್ನು ಗುರುವಾರ ಸುಪ್ರೀಂ ಕೋಟರ್್ ನಡೆಸಿತು.
   ಕಳೆದ ಸೆ.7 ರಂದು ಪ್ರಕರಣದ ವಿಚಾರಣೆ ನಡೆಸಿದ್ದ ಸುಪ್ರೀಂ ಕೋಟರ್್, ಆಗಸ್ಟ್ 10 ರಂದು ರಾಜ್ಯ ಹೈಕೋಟರ್್ ಹೊರಡಿಸಿದ್ದ ಅಂತಿಮ ಆದೇಶದ ನಂತರ ತಾನು ಹೊರಡಿಸಿರುವ ಮಧ್ಯಾಂತರ ತೀಪರ್ು ಮುಂದುವರಿಯಲಿದೆ ಎಂದು ಹೇಳಿತ್ತು.
    ಆದರೆ, ಈ ಆದೇಶವನ್ನು ರಾಜ್ಯ ಸರಕಾರ ಮತ್ತು ರಾಮಚಂದ್ರಾಪುರ ಮಠಗಳು ತಮ್ಮ ತಮ್ಮ ಪರ ವ್ಯಾಖ್ಯಾನಿಸಿ ಮಹಾಬಲೇಶ್ವರದ ದೇವಸ್ಥಾನದ ಆಡಳಿತ ತಮಗೇ ಸಿಕ್ಕಿದೆ ಎಂದು ಹೇಳಿಕೊಂಡಿದ್ದವು. ರಾಜ್ಯ ಸರಕಾರ ದೇವಸ್ಥಾನಕ್ಕೆ ಆಡಳಿತಾಧಿಕಾರಿಯನ್ನೂ ನೇಮಕ ಮಾಡಿತ್ತು. 
    ಈ ಮಧ್ಯೆ ರಾಮಚಂದ್ರಾಪುರ ಮಠವು ರಾಜ್ಯ ಸರಕಾರದ ವಿರುದ್ಧ ನ್ಯಾಯಾಂಗ ನಿಂದನೆ ಅಜರ್ಿ ಸಹ ಸಲ್ಲಿಸಿತ್ತು. ನ್ಯಾಯಾಂಗ ನಿಂದನೆ ಅಜರ್ಿಯ ಕುರಿತು ಕಳೆದ ತಿಂಗಳು 3 ರಂದು ವಿಚಾರಣೆ ನಡೆಸಿದ್ದ ಕೋಟರ್್, ಸೆ.7 ರಂದು ಇದ್ದ ಸ್ಥಿತಿಯೇ ದೇವಸ್ಥಾನದಲ್ಲಿ ಮುಂದುವರಿಯಬೇಕು ಎಂದು ಸ್ಪಷ್ಟಪಡಿಸಿತ್ತು. ಸೆ.7 ರಂದು ದೇವಸ್ಥಾನದ ನಿರ್ವಹಣೆ ರಾಮಚಂದ್ರಾಪುರ ಮಠದ ಆಡಳಿತದಲ್ಲಿತ್ತು.
   ಈ ಎಲ್ಲ ಆದೇಶಗಳಿಂದ ಉಂಟಾಗಿರುವ ಗೊಂದಲವನ್ನು ಬಗೆಹರಿಸುವಂತೆ ರಾಜ್ಯ ಸರಕಾರವೂ ಸುಪ್ರೀಂ ಕೋಟರ್್ ಅನ್ನು ಕೋರಿತ್ತು. ಈ ಹಿನ್ನೆಲೆಯಲ್ಲಿ ನ್ಯಾಯಮೂತರ್ಿಗಳಾದ ಕುರಿಯನ್ ಜೋಸೆಫ್, ಎ.ಎಂ.ಕನ್ವಿಲ್ಕರ್ ಮತ್ತು ಡಿ.ವೈ.ಚಂದ್ರಚೂಡ್ ಅವರಿದ್ದ ನ್ಯಾಯ ಪೀಠವು, ಕೋಟರ್್ನ ಈ ಹಿಂದಿನ ಆದೇಶಗಳಲ್ಲಿ ಯಾವುದೇ ಗೊಂದಲಗಳಿಲ್ಲ. ದೇವಸ್ಥಾನದ ಆಡಳಿತ ನಿರ್ವಹಣೆ ರಾಮಚಂದ್ರಾಪುರ ಮಠಕ್ಕೆ ಸೇರಬೇಕು ಎಂದು ಸ್ಪಷ್ಟವಾಗಿಯೇ ನಾವು ಹೇಳಿದ್ದೇವೆ. ಈಗಲೂ ಅದನ್ನೇ ಹೇಳುತ್ತಿದ್ದೇವೆ. ಸೋಮವಾರದೊಳಗೆ ಮಠಕ್ಕೆ ದೇವಸ್ಥಾನದ ಆಡಳಿತ ವಹಿಸಿಕೊಡಬೇಕು ಎಂದು ರಾಜ್ಯ ಸರಕಾರಕ್ಕೆ ಸೂಚನೆ ನೀಡಿತು.

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries