ನ.5 ರಂದು ಕಯ್ಯಾರಿನಲ್ಲಿ ಮಂಜೇಶ್ವರ ಉಪಜಿಲ್ಲಾ ವಿದ್ಯಾರಂಗ ಸಾಹಿತ್ಯೋತ್ಸವ
ಉಪ್ಪಳ: ಮಂಜೇಶ್ವರ ಉಪಜಿಲ್ಲಾ ವಿದ್ಯಾರಂಗ ಸಾಹಿತ್ಯೋತ್ಸವ ನ. 5 ರಂದು ಕಯ್ಯಾರು ಡೋನ್ ಬೋಸ್ಕೊ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಯಲಿದೆ.
ಬೆಳಿಗ್ಗೆ 9.30 ಕ್ಕೆ ಶಾಲಾ ಸಭಾಂಗಣದಲ್ಲಿ ನಡೆಯುವ ಸಮಾರಂಭವನ್ನು ಪೈವಳಿಕೆ ಗ್ರಾಮ ಪಂಚಾಯತ್ ಅಧ್ಯಕ್ಷೆ ಭಾರತಿ ಜೆ.ಶೆಟ್ಟಿ ಉದ್ಘಾಟಿಸುವರು. ಪೈವಳಿಕೆ ಗ್ರಾಮ ಪಂಚಾಯತ್ ಸದಸ್ಯೆ ರಾಜೀವಿ ರೈ ಅಧ್ಯಕ್ಷತೆ ವಹಿಸುವರು.
ಮಂಜೇಶ್ವರ ಉಪಜಿಲ್ಲಾ ಶಿಕ್ಷಣಾಧಿಕಾರಿ ದಿನೇಶ್ ಎ. ಪ್ರಾಸ್ತಾವಿಕವಾಗಿ ಮಾತನಾಡುವರು. ಮಂಜೇಶ್ವರ ಬಿ.ಆರ್.ಸಿ.ಯ ಬ್ಲಾಕ್ ಯೋಜನಾಧಿಕಾರಿ ವಿಜಯಕುಮಾರ್, ನಿವೃತ್ತ ಶಿಕ್ಷಕ ಜೋನ್ ಡಿ'ಸೋಜ, ರಕ್ಷಕ - ಶಿಕ್ಷಕ ಸಂಘದ ಅಧ್ಯಕ್ಷ ಸ್ಟೀಫನ್ ಕ್ರಾಸ್ತ, ಮಾತೆಯರ ಸಂಘದ ಅಧ್ಯಕ್ಷ ವಿಲ್ಮಾ ಡಿ'ಸೋಜ ಶುಭಾಶಂಸನೆ ಗೈಯ್ಯುವರು. ಶಾಲಾ ಮುಖ್ಯೋಪಾಧ್ಯಾಯ ಲೂವಿಸ್ ಮೊಂತೇರೊ, ಶಿಕ್ಷಕ ಹರೀಶ್ ಸುಲಾಯ ಉಪಸ್ಥಿತರಿರುವರು. ಸಂಜೆ ಮೂರು ಗಂಟೆಗೆ ಸಮಾರೋಪ ಸಮಾರಂಭ ನಡೆಯಲಿದೆ.