ಯಾವುದೇ ಶೀರ್ಷಿಕೆಯಿಲ್ಲ
0
ನವೆಂಬರ್ 10, 2018
ಶೌಚಾಲಯದ ಮಲಿನ ನೀರು ಸಾರ್ವಜನಿಕ ಸ್ಥಳಕ್ಕೆ : ಪಂ. ಅಧಿಕೃತರ ಎಚ್ಚರಿಕೆಯನ್ನು ಗಾಳಿಗೆ ತೂರಿದ ಖಾಸಗಿ ವ್ಯಕ್ತಿ : ಕಾಲನಿವಾಸಿಗಳು ಸಾಂಕ್ರಾಮಿಕ ರೋಗ ಭೀತಿಯಲ್ಲಿ
ಮಂಜೇಶ್ವರ: ಖಾಸಗಿ ವ್ಯಕ್ತಿಯೊಬ್ಬರು ಕಾನೂನನ್ನು ಗಾಳಿಗೆ ತೂರಿ ಮನೆಯ ಶೌಚಾಲಯದ ನೀರನ್ನು ಮನೆಯ ಹೊರಗೆ ಚೇಂಬರ್ ನಿಮರ್ಿಸಿ ಮಣ್ಣಿನ ಅಡಿಭಾಗದಲ್ಲಿ ಪೈಪು ಹಾಕಿ ಸಾರ್ವಜನಿಕ ಸ್ಥಳಕ್ಕೆ ಹರಿಯ ಬಿಡುವುದಾಗಿ ಸ್ಥಳೀಯರು ಆರೋಪಿಸಿದ್ದಾರೆ.
ಮಂಜೇಶ್ವರ ಗ್ರಾ. ಪಂ. ವ್ಯಾಪ್ತಿಯಲ್ಲಿರುವ ದೇರಂಗಡಿ ಪಳ್ಳ ಎಂಬಲ್ಲಿ ಖಾಸಗಿ ವ್ಯಕ್ತಿಯೊಬ್ಬರು ಬಹಿರಂಗವಾಗಿ ಮನೆ ಶೌಚಾಲಯದ ಮಲಿನ ನೀರನ್ನು ಸಾರ್ವಜನಿಕ ಸ್ಥಳಕ್ಕೆ ಹರಿಯಬಿಡುವುದಾಗಿ ಊರವರು ಆರೋಪಿಸುತಿದ್ದಾರೆ.
ಇದರ ಪರಿಸರದಲ್ಲೇ ಅಂಗನವಾಡಿ ಕೂಡಾ ಕಾರ್ಯಚರಿಸುತಿದ್ದು, ದಿನ ನಿತ್ಯ ನೂರಾರು ವಿದ್ಯಾಥರ್ಿಗಳು ನಡೆದು ಹೋಗುತ್ತಿರುವ ದಾರಿಯಾಗಿದೆ. ಪರಿಶಿಷ್ಟ ಜಾತಿ ಹಾಗೂ ವರ್ಗದ ಕುಟುಂಬಗಳು ಸೇರಿದಂತೆ ನೂರಾರು ಕುಟುಂಬಗಳು ವಾಸಿಸುತ್ತಿರುವ ಅಂಬೇಡ್ಕರ ಕಾಲನಿಯನ್ನು ಸಂಪಕರ್ಿಸುವ ಸ್ಥಳದಲ್ಲಿ ಶೌಚಾಲಯದ ನೀರು ಸಾರ್ವಜನಿಕ ಸ್ಥಳದಲ್ಲಿ ಹರಿಯ ಬಿಡುತ್ತಿರುವುದು ಕಾಲನಿವಾಸಿಗಳಲ್ಲಿ ಸಾಂಕ್ರಾಮಿಕ ರೋಗ ಭೀತಿಯನ್ನು ಎದುರಿಸುವಂತಾಗಿದೆ.
ಈ ಬಗ್ಗೆ ಸ್ಥಳೀಯರು ಖಾಸಗಿ ವ್ಯಕ್ತಿಯಲ್ಲಿ ಹಲವಾರು ಬಾರಿ ವಿನಂತಿಸಿಕೊಂಡರೂ ತಾನು ಮಾಡಿದ್ದೇ ಸರಿ ಎಂಬಂತೆ ಯಾವುದೇ ಪ್ರತಿಕ್ರಿಯೆ ನೀಡದೇ ಇರುವ ಹಿನ್ನೆಲೆಯಲ್ಲಿ ಮಂಜೇಶ್ವರ ಗ್ರಾ. ಪಂ. ಗೆ ದೂರು ನೀಡಲಾಗಿತ್ತು. ಇದರಂತೆ ಕೆಲ ದಿನಗಳ ಹಿಂದೆ ಪಂ. ಅಧ್ಯಕ್ಷ, ವಾಡರ್್ ಸದಸ್ಯೆ ಹಾಗೂ ಅಧಿಕಾರಿಗಳು ಆಗಮಿಸಿ ಸಾರ್ವಜನಿಕ ಸ್ಥಳದಲ್ಲಿ ಸ್ಥಾಪಿಸಲಾಗಿರುವ ಚೇಂಬರನ್ನು ತೆಗೆದು ಮಲಿನ ನೀರನ್ನು ಬಿಡಬಾರದಾಗಿ ತಾಕೀತು ನೀಡಿದ್ದರೂ ಈ ತನಕ ಅವರ ಆದೇಶಕ್ಕೆ ಚಿಕ್ಕಾಸಿನ ಬೆಲೆಯನ್ನು ಖಾಸಗಿ ವ್ಯಕ್ತಿ ನೀಡಿಲ್ಲವೆಂಬುದಾಗಿ ಊರವರು ಆರೋಪಿಸುತಿದ್ದಾರೆ. ಕಾಲನಿವಾಸಿಗಳು ಸಾಂಕ್ರಾಮಿಕ ರೋಗಕ್ಕೆ ತುತ್ತಾಗುವುದಕ್ಕಿಂತ ಮೊದಲು ಸಂಬಂಧಪಟ್ಟವರು ಇತ್ತ ಕಡೆ ಗಮನ ಹರಿಸುವಂತೆ ಊರವರು ಆಗ್ರಹಿಸಿದ್ದಾರೆ.




