ಪಳ್ಳತ್ತಡ್ಕ ಶಾಲೆಯಲ್ಲಿ ಕಲಿಕಾ ಶಿಬಿರ
0
ನವೆಂಬರ್ 26, 2018
ಬದಿಯಡ್ಕ: ಕಲಿಕಾ ಒತ್ತಡದಿಂದ ಸ್ವಲ್ಪ ಹೊರಬಂದು ಪ್ರತಿಯೊಂದು ಮಗುವಿಗೂ ಮುಕ್ತ ಕಲಿಕಾ ವಾತಾವರಣ ಮೂಡಿಸುವ ಕೆಲಸವನ್ನು ಕಲಿಕಾ ಶಿಬಿರಗಳು ಮಾಡುತ್ತವೆ. ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಇದೊಂದು ಉತ್ತಮ ವೇದಿಕೆಯಾಗಿದೆ. ಹೀಗೆ ಆಯೋಜನೆಗೊಳ್ಳುವ ಶಿಬಿರದಲ್ಲಿ ಆಟದ ಮೂಲಕ ಕಲಿಕೆ ನಡೆಯುವಾಗ ಮಕ್ಕಳಲ್ಲಿ ಆಸಕ್ತಿಯು ಮೂಡುತ್ತದೆ .ಉತ್ತಮ ಜೀವನಮೌಲ್ಯಗಳನ್ನು ಕಲಿಸುವಲ್ಲಿ ಕಲಿಕಾ ಶಿಬಿರಗಳು ಪ್ರಧಾನ ಪಾತ್ರ ವಹಿಸುತ್ತದೆ.
ಪಳ್ಳತ್ತಡ್ಕ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸೋಮವಾರ ಒಂದು ದಿನದ ಕಲಿಕಾ ಶಿಬಿರವು ನಡೆಯಿತು. ಶಾಲಾ ಮಾತೃ ಸಂಘದ ಅದ್ಯಕ್ಷೆ ರಜನಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಶ್ಯಾಮಲಾ ಎಸ್ ಎನ್ ಭಟ್ ಶುಭಹಾರೈಸಿದರು. ಸಂಪನ್ಮೂಲ ವ್ಯಕ್ತಿಯಾಗಿ ರಾಜೇಶ್ ಮಾಸ್ಟರ್ ನೇತೃತ್ವ ವಹಿಸಿದರು.
ಏಕಾಗ್ರತೆಗೆ ಸಹಾಯಕವಾಗುವ ಚಪ್ಪಾಳೆ ಆಟಗಳ ಮೂಲಕ ಶಿಬಿರವು ಆರಂಭಗೊಂಡಿತು.ಭಾಷೆಗೆ ಸಂಬಂಧಿಸಿದ ಕಥೆ,ಹಾಡು ಮಕ್ಕಳ ಮನಸೆಳೆಯಿತು. ಗಣಿತದ ವಿವಿಧ ಜಾಣ್ಮೆ ಲೆಕ್ಕಗಳು ಮಕ್ಕಳನ್ನು ಚಿಂತನಾಲೋಕಕ್ಕೆ ಕೊಂಡೊಯ್ದವು. ಆಂಗ್ಲ ಅಕ್ಷರಗಳ ಮೂಲಕ ಹಲವಾರು ಪದಗಳನ್ನು ಆಟದ ಮೂಲಕ ಸುಲಲಿತವಾಗಿ ಕಲಿತರು. ಎರಡು ಗುಂಪುಗಳೊಳಗಿನ ಸ್ಪಧರ್ೆಗಳು ಮಕ್ಕಳಿಗೆ ಹುಮ್ಮಸ್ಸಿನಿಂದ ಆಟವಾಡಲು ಪ್ರೇರೇಪಿಸಿದವು. ವಸ್ತುಗಳ ಭಾರವನ್ನು ಊಹಿಸಿ ಬರೆಯುವ ಚಟುವಟಿಕೆ ಹಾಗು ಕ್ಯಾಲೆಂಡರ್ ಆಟವು ಮಕ್ಕಳಿಗೆ ಹೆಚ್ಚಿನ ಖುಶಿಯನ್ನು ನೀಡಿತು.
ಎಲ್ಲ ವಿಷಯಗಳಿಗೂ ಸಂಬಂಧಿಸಿದ ಚಟುವಟಿಕೆಯನ್ನು ರಸವತ್ತಾಗಿ ನೀಡಿ ಮಕ್ಕಳ ಮನವನ್ನು ಗೆಲ್ಲಲು ಶಿಕ್ಷಕ ರಾಜೇಶ್ ಯಶಸ್ವಿಯಾದರು





