ಯಾವುದೇ ಶೀರ್ಷಿಕೆಯಿಲ್ಲ
0
ನವೆಂಬರ್ 26, 2018
ಜಿಲ್ಲಾ ಶಾಲಾ ಕಲೋತ್ಸವ : ಹೊಸದುರ್ಗಕ್ಕೆ ಪ್ರಶಸ್ತಿ
ಕಾಸರಗೋಡು: ಕುಟ್ಟಮತ್ನಲ್ಲಿ ಜರಗಿದ ಕಾಸರಗೋಡು ಕಂದಾಯ ಜಿಲ್ಲಾ ಶಾಲಾ ಕಲೋತ್ಸವದಲ್ಲಿ ಹೊಸದುರ್ಗ ಉಪಜಿಲ್ಲೆ (760 ಅಂಕ) ಸಮಗ್ರ ಪ್ರಶಸ್ತಿಯನ್ನು ಗೆದ್ದುಕೊಂಡಿದೆ. ಕಾಸರಗೋಡು ಉಪಜಿಲ್ಲೆ (660) ದ್ವಿತೀಯ ಹಾಗೂ ಚೆರ್ವತ್ತೂರು ಉಪಜಿಲ್ಲೆ ತೃತೀಯ ಸ್ಥಾನ ಗಳಿಸಿದೆ. ಸಂಸ್ಕೃತೋತ್ಸವದಲ್ಲಿ ಹೊಸದುರ್ಗ ಪ್ರಥಮ, ಮಂಜೇಶ್ವರ ಉಪಜಿಲ್ಲೆ ದ್ವಿತೀಯ, ಚೆರ್ವತ್ತೂರು ತೃತೀಯ ಮತ್ತು ಅರೇಬಿಕ್ ಕಲೋತ್ಸವದಲ್ಲಿ ಕಾಸರಗೋಡು ಪ್ರಥಮ, ಬೇಕಲ ದ್ವಿತೀಯ, ಹೊಸದುರ್ಗ ಉಪಜಿಲ್ಲೆ ತೃತೀಯ ಸ್ಥಾನ ಪಡೆದಿದೆ.

