HEALTH TIPS

ಕನಕದಾಸರ ಹರಿಭಕ್ತಿ ಸಾರ ಸಾರ್ವಕಾಲಿಕ ಮೌಲ್ಯದ್ದು : ಕಲ್ಮಾಡಿ

ಕಾಸರಗೋಡು: ಕನಕದಾಸರ ಹರಿಭಕ್ತಿಸಾರ ಸಾರ್ವಕಾಲಿ ಮೌಲ್ಯದ್ದು. ಅನುಭವದ ಮೂಲಕ ಅದರ ಸಾರವನ್ನು ಸಶಕ್ತವಾದ ರಚನೆಗಳ ಮೂಲಕ ಹಾಡಿ ಜನಜಾಗೃತಿ ಮೂಡಿಸಿದವರು ಕನ್ನಡದ ಹರಿದಾಸರು. ಅವರು ನೀಡಿದ ಸಂದೇಶ ಇಂದಿನ ಮತ್ತು ಮುಂದಿನ ಜನಾಂಗಕ್ಕೆ ಪ್ರಯೋಜನಪ್ರದವಾದುದು ಎಂದು ವಿದ್ವಾನ್ ಕಲ್ಮಾಡಿ ಸದಾಶಿವ ಆಚಾರ್ಯ ಅವರು ಹೇಳಿದರು. ಕೋಟೆಕಣಿಯ ಶ್ರೀ ರಾಮನಾಥ ಸಾಂಸ್ಕೃತಿಕ ಭವನ ಸಮಿತಿ, ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನದ ಜಂಟಿ ಆಶ್ರಯದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಕಾರದೊಂದಿಗೆ ಕೋಟೆಕಣಿಯ ಶ್ರೀ ರಾಮನಾಥ ಸಾಂಸ್ಕೃತಿಕ ಭವನದಲ್ಲಿ ಭಾನುವಾರ ಆಯೋಜಿಸಿದ ಕನಕದಾಸ ಜಯಂತಿ ಕಾರ್ಯಕ್ರಮವನ್ನು ದೀಪ ಪ್ರಜ್ವಲನಗೈದು ಉದ್ಘಾಟಿಸಿ ಅವರು ಮಾತನಾಡಿದರು. ಸರಳ ಹಾಗು ಗಹನ ಸಾಹಿತ್ಯದ ಮೂಲಕ ಸಮಾಜದ ಅಂಕುಡೊಂಕುಗಳನ್ನು ತಿದ್ದಲು ಯತ್ನಿಸಿದ ಸಂತ ಕನಕದಾಸರ ಕೀರ್ತನೆಗಳಲ್ಲಿ ಭಕ್ತಿಯ ಸಾರವನ್ನು ಕಾಣಬಹುದು. ಭಗವಂತನ ಸ್ತುತಿ, ಕೀರ್ತನೆಯಲ್ಲಿ ಮಾತ್ರ ಸುಖ ಕಾಣಬಹುದು ಎಂದು ಜಗತ್ತಿಗೆ ಸಾರಿದ ಸಂತ ಕವಿ ಕನಕದಾಸರು ಭಗವಂತನನ್ನು ಹೊಂದಲು ಇರುವ ಮಾರ್ಗವನ್ನು ತೋರಿಸಿದ್ದಾರೆ ಎಂದರು. ತನ್ನ ಕೃತಿಗಳಲ್ಲಿ ಮಾಮರ್ಿಕವಾಗಿ ಭಗವಂತನನ್ನು ವಣರ್ಿಸಿರುವ ಕನಕದಾಸರು ಕೀರ್ತನೆಯಿಂದ ಭಗವಂತನ ಗುಣಗಾನ ಮಾಡಿ ಮೋಕ್ಷ ಪಡೆಯಬಹುದು ಎಂದು ಸಾರಿದ್ದಾರೆ. ಪ್ರಾಸಬದ್ಧವಾದ ಕೀರ್ತನೆಗಳು ಹಾಡಲು ಸುಲಭವಾಗಿದ್ದು ಈ ಕೀರ್ತನೆಗಳನ್ನು ಪ್ರತಿಯೊಬ್ಬರು ಓದಿಕೊಳ್ಳಬೇಕು. ಕೀರ್ತನೆಗಳಲ್ಲಿರುವ ಸಾರಾಂಶಗಳನ್ನು ಅಥರ್ೈಸಿಕೊಂಡು ಆ ಬಳಿಕ ಹಾಡಬೇಕು ಎಂದು ಕಲ್ಮಾಡಿ ಸದಾಶಿವ ಆಚಾರ್ಯ ಅವರು ಅಭಿಪ್ರಾಯಪಟ್ಟರು. ಕೀರ್ತನೆಯ ನೆಲೆಯನ್ನು ಮೀರಿ ಬೆಳೆದ ಕನಕದಾಸರು ಕವಿಯಾಗಿ, ಚಿಂತಕರಾಗಿ, ಸಂತನಾಗಿ, ದಾರ್ಶನಿಕನಾಗಿ ಕಾಣಿಸಿಕೊಳ್ಳುತ್ತಾರೆ. ಅವರ ಕೃತಿಗಳು ಕಾವ್ಯಗುಣ ಪ್ರಾಶಸ್ತ್ಯವನ್ನು ಪಡೆದುಕೊಳ್ಳುತ್ತದೆ. ರಾಜಕೀಯ ವಿಶ್ಲೇಷಕನಾಗಿಯೂ ಕಾಣಿಸಿಕೊಳ್ಳುವ ಕನಕ ದಾರ್ಶನಿಕನಾಗಿ ಸಮಕಾಲೀನರಾಗುತ್ತಾರೆ. ಕಾರ್ಯಕ್ರಮದಲ್ಲಿ ಖ್ಯಾತ ಹರಿದಾಸ ಜಯಾನಂದ ಕುಮಾರ್ ಹೊಸದುರ್ಗ ಅವರು ಕನಕದಾಸರ ಹುಟ್ಟು, ಸಾಧನೆ, ಸಾಹಿತ್ಯ ಕೊಡುಗೆಯ ಬಗ್ಗೆ ಉಪನ್ಯಾಸ ನೀಡಿದರು. ಮುಖ್ಯ ಅತಿಥಿಯಾಗಿ ಭಾಗವಹಿಸಿದ ಡಾ.ಜಯಪ್ರಕಾಶ್ ನಾರಾಯಣ ತೊಟ್ಟೆತ್ತೋಡಿ ಅವರು ಕಾರ್ಯಕ್ರಮಕ್ಕೆ ಶುಭಹಾರೈಸಿದರು. ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನ ಅಧ್ಯಕ್ಷ ಶಿವರಾಮ ಕಾಸರಗೋಡು, ಗಾಯಕಿ ಸ್ಮಿತಾ ಉದಯ ಪ್ರಕಾಶ್ ಮೊದಲಾದವರು ಉಪಸ್ಥಿತರಿದ್ದರು. ರಾಮನಾಥ ಸಾಂಸ್ಕೃತಿಕ ಭವನ ಸಮಿತಿ ಪ್ರಧಾನ ಸಂಚಾಲಕ ಗುರುಪ್ರಸಾದ್ ಕೋಟೆಕಣಿ ಸ್ವಾಗತಿಸಿ, ಕವಿ, ಪತ್ರಕರ್ತ ರಾಧಾಕೃಷ್ಣ ಕೆ.ಉಳಿಯತ್ತಡ್ಕ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಅಧ್ಯಾಪಕಿ ಕಾವ್ಯ ಕುಶಲ ಕಾರ್ಯಕ್ರಮ ನಿರೂಪಿಸಿದರು. ರಾಮನಾಥ ಸಾಂಸ್ಕೃತಿಕ ಭವನ ಸಮಿತಿ ಕೋಶಾಧಿಕಾರಿ ಸಂದೇಶ್ ಕೋಟೆಕಣಿ ವಂದಿಸಿದರು. ಕನಕ ಜಯಂತಿ ಅಂಗವಾಗಿ ನಿತಾ ಮಲ್ಯ, ದಿವಾಕರ ಪಿ.ಅಶೋಕನಗರ, ರಕ್ಷಿತಾ ಮಲ್ಯ, ಪ್ರಕಾಶ್ ಆಚಾರ್ ಕುಂಟಾರು, ಮೋಹನ ಆಚಾರ್, ಕಾವ್ಯಾ ಕುಶಲ ಪಾರೆಕಟ್ಟೆ, ಧ್ರುವರಾಜ್ ಅಮೈ, ವೀಣಾ ಕಾಮತ್, ವರುಣ್ ಮಲ್ಯ, ಸ್ಮಿತಾ ಉದಯ ಪ್ರಕಾಶ್, ಲೀಲಾಧರ ಆಚಾರ್ಯ ಅಶೋಕನಗರ, ಜಯಾನಂದ ಕುಮಾರ್ ಹೊಸದುರ್ಗ ಮೊದಲಾದವರಿಂದ ಕನಕ ಕೀರ್ತನೆ ಗಾಯನ ವಿಭಿನ್ನವಾಗಿ ನಡೆಯಿತು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries