HEALTH TIPS

ಉಕ್ಕಿನಡ್ಕದಲ್ಲಿ ಮುಖ್ಯಮಂತ್ರಿಗಳದ್ದು ನಾಟಕ-ಬಿಜೆಪಿ

ಬದಿಯಡ್ಕ: ತನ್ನ ಮಂತ್ರಿಮಂಡಲದ ಸಚಿವರೋರ್ವರ ಪುತ್ರಿಯ ವಿವಾಹ ಸಮಾರಂಭದಲ್ಲಿ ಪಾಲ್ಗೊಳ್ಳುವ ಸಲುವಾಗಿ ಆಗಮಿಸಿದ ಮುಖ್ಯಮಂತ್ರಿಗಳು ವಿವಾಹದ ನೆಪದಲ್ಲಿ ರಾಜ್ಯದ ಅತೀದೊಡ್ಡ ಯೋಜನೆಯ ಶಿಲಾನ್ಯಾಸಗೈದಿರುವುದು ಕೇವಲ ರಾಜಕೀಯ ಪ್ರಹಸನವಾಗಿದೆ. ಮುಖ್ಯಮಂತ್ರಿ ಪಿಣರಾಯಿ ವಿಜಯನ್ರ ಉಕ್ಕಿನಡ್ಕ ವೈದ್ಯಕೀಯ ಕಾಲೇಜಿನ ಶಂಕುಸ್ಥಾಪನೆ ಕಾರ್ಯಕ್ರಮವು ಕೇವಲ ಚುನಾವಣಾ ಡೊಂಬರಾಟವಾಗಿದೆ. ಕಾಸರಗೋಡು ಮಂಜೇಶ್ವರದ ಜನತೆಯನ್ನು ನಿರಂತರವಾಗಿ ಚಳ್ಳೆಹಣ್ಣು ತಿನ್ನಿಸುತ್ತಾ ಬಂದಿರುವ ಎಡಬಲ ರಂಗಗಳು ಇದೀಗ ಮತ್ತೊಮ್ಮೆ ಜನತೆಯನ್ನು ತಪ್ಪುದಾರಿಗೆಳೆಯುತ್ತಿದ್ದಾರೆ. ಕಳೆದ ಯು.ಡಿ.ಎಫ್. ಸರಕಾರದ ಮುಖ್ಯಮಂತ್ರಿ ಉಮ್ಮನ್ಚಾಂಡಿ ನನ್ನ ಅಧಿಕಾರ ಅವಧಿಯಲ್ಲಿಯೇ ಈ ಆಸ್ಪತ್ರೆಯನ್ನು ಬಡರೋಗಿಗಳ ಸೇವೆಗಾಗಿ ಉದ್ಘಾಟನೆಗೊಳಿಸಲಿದ್ದೇನೆ ಎಂಬುದಾಗಿ ನೀಡಿದ ಭರವಸೆ ಏನಾಯಿತು? ಇದೀಗ ಕೇರಳವು ಇದುವರೆಗೂ ಕಾಣದಂತ ಒಬ್ಬ ಮೋಸಗಾರ ಮುಖ್ಯಮಂತ್ರಿಯಿಂದ ಉಕ್ಕಿನಡ್ಕದಲ್ಲಿ ಕಳೆದ 25ನೇ ತಾರೀಕಿಗೆ ಒಂದು ಡೊಂಬರಾಟವು ನಡೆಯಿತು. ಕಾಸರಗೋಡಿನ ಸಂಸದರಾದ ಪಿ. ಕರುಣಾಕರನ್ರವರು ಉಕ್ಕಿನಡ್ಕದಲ್ಲಿ ವೈದ್ಯಕೀಯ ಕಾಲೇಜ್ನ ಅವಶ್ಯಕತೆಯಿಲ್ಲ ಎಂಬ ಹೇಳಿಕೆಯನ್ನು ನೀಡಿದ ಬೆನ್ನಲ್ಲೇ ಇಂತಹ ಒಂದು ನಾಟಕ ನಡೆದಿದೆ. ಜನತೆಯನ್ನು ವಂಚಿಸಲಿರುವ ಒಂದು ಷಡ್ಯಂತ್ರ ಇದಾಗಿದೆ ಎಂಬುದಾಗಿ ಬಿಜೆಪಿ ಆರೋಪಿಸುತ್ತಿದೆ. ಭಾರತೀಯ ಜನತಾ ಪಾಟರ್ಿಯ ಜಿಲ್ಲಾ ಸಮಿತಿ ನೇತೃತ್ವದಲ್ಲಿ ಈ ವೈದ್ಯಕೀಯ ಕಾಲೇಜ್ಗಾಗಿ ಹಲವಾರು ಹೋರಾಟಗಳನ್ನು ಮಾಡಿರುವ ಹಿನ್ನಲೆಯಲ್ಲಿ ಎರಡು ಕಟ್ಟಡಗಳಾದರೂ ಅಲ್ಲಿ ತಲೆ ಎತ್ತಿವೆ. ಎಂಡೋಸಲ್ಫಾನ್ ಬಾಧಿತರೋಗಿಗಳು ಹೆಚ್ಚಿನ ಸಂಖ್ಯೆಯಲ್ಲಿ ವಾಸವಿರುವ ಬದಿಯಡ್ಕ ಪಂಚಾಯತ್ನ ವ್ಯಾಪ್ತಿಯಲ್ಲಿ ಇರುವಂತಹ ಸಮುದಾಯ ಆರೋಗ್ಯ ಕೇಂದ್ರವನ್ನು ತಾಲೂಕು ಆಸ್ಪತ್ರೆಯಾಗಿ ಭಡ್ತಿಗೊಳಿಸಲಾಗಿತ್ತು. ಇದನ್ನು ಕಮ್ಯೂನಿಸ್ಟ್ ರಾಜಕೀಯ ಷಡ್ಯಂತ್ರದಿಂದಾಗಿ ಪುನಃ ಹಿಂಬಡ್ತಿಗೊಳಿಸಿ ಈ ಭಾಗದ ಬಡರೋಗಿಗಳಿಗೆ ಅನ್ಯಾಯವನ್ನು ಮಾಡಿದ ಎಡರಂಗ ಸರಕಾರದ ಮುಖ್ಯಮಂತ್ರಿ ಉಕ್ಕಿನಡ್ಕದಲ್ಲಿ ಬಂದು ನೇರವೇರಿಸಿದ ಉದ್ಘಾಟನಾ ಕಾರ್ಯಕ್ರಮವು ಕೇವಲ ಲೋಕಸಭಾ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಮಾಡಿದ ರಾಜಕೀಯ ಡೊಂಬರಾಟವೆಂಬುದಾಗಿ ಭಾರತೀಯ ಜನತಾ ಪಾಟರ್ಿ ಕಾಸರಗೋಡು ಮಂಡಲಾಧ್ಯಕ್ಷ ಎಂ. ಸುಧಾಮ ಗೋಸಾಡ ಆರೋಪಿಸಿದ್ದಾರೆ. ಸಿ.ಪಿ.ಎಂ.ಗೆ ಆಗಲಿ ಪಿಣರಾಯಿ ವಿಜಯನ್ ಆಗಲಿ ಈ ಭಾಗದ ಜನತೆಯ ಕ್ಷಮೆಗೂ ಅರ್ಹರಲ್ಲ ಎಂಬುದಾಗಿ ಅವರಿಗೆ ಅರಿವಿರುವುದು ಒಳಿತು ಎಂಬುದಾಗಿ ಅವರು ತನ್ನ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries