ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಪ್ರತಿಕೃತಿ ದಹನ
0
ನವೆಂಬರ್ 26, 2018
ಕುಂಬಳೆ: ಬಿಜೆಪಿ ರಾಜ್ಯ ಪ್ರಧಾನ ಕಾರ್ಯದಶರ್ಿ ಸುರೇಂದ್ರನ್ ಅವರ ವಿರುದ್ಧ ನಕಲಿ ಕೇಸು ದಾಖಲಿಸಿ ಜೈಲಿನಲ್ಲಿಟ್ಟಿರುವ ಎಡರಂಗ ಸರಕಾರದ ಗೂಢಾಲೋಚನೆ ವಿರುದ್ಧ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಪ್ರತಿಕೃತಿ ದಹಿಸಿ ಬಂದ್ಯೋಡು ಪೇಟೆಯಲ್ಲಿ ಭಾ ನುವಾರ ರಾತ್ರಿ ಪ್ರತಿಭಟಿಸಲಾಯಿತು.
ಯುವಮೋಚರ್ಾ ರಾಜ್ಯ ಮುಖಂಡ ವಿಜಯ್ ಕುಮಾರ್ ರೈ ಉದ್ಘಾಟಿಸಿ ಮಾತನಾಡಿ ಪಿಣರಾಯಿ ವಿಜಯನ್ ಇಂದು ಬಿಜೆಪಿ ಕಾರ್ಯಕರ್ತರಿಗೆ ಹೆದರಿ ದಾರಿ ಬದಲಿಸಿ ಹೋಗುವ ಪರಿಸ್ಥಿತಿ ಉಂಟಾಗಿದೆ. ಇಂತಹ ಪರಿಸ್ಥಿತಿ ಎಡರಂಗದ ಪ್ರತಿ ಮಂತ್ರಿಗಳಿಗೆ ಬರಲಿದೆ. ಜಿಲ್ಲೆಯಲ್ಲಿ ಮಂತ್ರಿಗಳು ಭಾಗವಹಿಸುವ ಎಲ್ಲ ಕಾರ್ಯಕ್ರಮಗಳಿಗೆ ಯುವಮೋಚರ್ಾ ಪ್ರತಿಭಟಿಸಲಿದೆ ಎಂದು ಎಚ್ಚರಿಕೆ ನೀಡಿದರು.
ಬಿಜೆಪಿ ಮಂಡಲ ಪ್ರಧಾನ ಕಾರ್ಯದಶರ್ಿ ಆದಶರ್್ ಬಿ.ಎಂ.ಮಾತನಾಡಿ ಎಡರಂಗ ಸರಕಾರ ಹಿಂದುಗಳ ಮೇಲೆ ಮಾಡುವ ಅನಾಚಾರ ವಿವರಿಸಿದರು. ದಿನೇಶ್ ಚೆರುಗೋಳಿ ಅಧ್ಯಕ್ಷತೆ ವಹಿಸಿದರು. ಮುಖಂಡರಾದ ರಮೇಶ್ ಭಟ್ ಕುಂಬಳೆ, ಜಯಂತಿ ಶೆಟ್ಟಿ, ಪುಷ್ಪರಾಜ್ ಐಲ, ತಾರಾನಾಥ್ ಹೊಸಂಗಡಿ, ಚರಣ್ ನೇತೃತ್ವ ನೀಡಿದರು. ಶಶಿಕಾಂತ್ ಬಂದ್ಯೋಡು ಸ್ವಾಗತಿಸಿ, ವಂದಿಸಿದರು.


