ಸೋಮಯಾಗಕ್ಕೆ ಕುಕ್ಕೆ ಬುಟ್ಟಿ ತಯಾರಿಯ ಮುಹೂರ್ತ ಮತ್ತು ಚಾಪೆ ಹಣೆಯುವ ಮುಹೂರ್ತ
0
ನವೆಂಬರ್ 26, 2018
ಮಧೂರು: ಕೊಂಡೆವೂರಿನ ಶ್ರೀ ನಿತ್ಯಾನಂದ ಯೋಗಾಶ್ರಮದಲ್ಲಿ 2019ರ ಫೆಬ್ರವರಿ 18 ರಿಂದ 24ರ ವರೆಗೆ ನಡೆಯಲಿರುವ ವಿಶ್ವಜಿತ್ ಅತಿರಾತ್ರ ಸೋಮಯಾಗಕ್ಕೆ ಉಪಯೋಗಿಸುವ ವಿವಿಧ ವಸ್ತುಗಳನ್ನು ಒದಗಿಸಲು ಆಯಾ ಸಮುದಾಯದವರಿಂದಲೇ ಮಾಡಿಸಿ ಆ ವಸ್ತುಗಳನ್ನು ಯಾಗಕ್ಕೆ ಸಮರ್ಪಣೆ ಮಾಡುವ ಉದ್ದೇಶದಿಂದ, ಭಾನುವಾರ ಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿಯವರು ಪುಳ್ಕೂರಿನ ಕೊರಗ ಸಮುದಾಯದ ಕಾಲನಿಗೆ ಭೇಟಿ ನೀಡಿ ಯಾಗಕ್ಕೆ ಬೇಕಾಗುವ ಮತ್ತು ಉಪಯೋಗಿಸಲಾಗುವ ಕುಕ್ಕೆ, ಬುಟ್ಟಿ ಇತ್ಯಾದಿಗಳನ್ನು ತಯಾರಿಸುವ ಕಾರ್ಯಕ್ಕೆ ಚಾಲನೆಯನ್ನು ನೀಡಿದರು. ಅಲ್ಲಿ ಉಪಸ್ಥಿತರಿದ್ದ ಕೊರಗ ಸಮುದಾಯದ ಬಂಧುಗಳೊಂದಿಗೆ ವಿಷ್ಣು ಸಹಸ್ರನಾಮ ಪಾರಾಯಣ, ಪೂಜೆ, ಸತ್ಸಂಗಗಳನ್ನು ನೆರವೇರಿಸಿದರು.
ಕಾರ್ಯಕ್ರಮದಲ್ಲಿ ಮಧೂರು ಗ್ರಾಮ ಪಂಚಾಯತಿ ಅಧ್ಯಕ್ಷ ಮಾಲತಿ ಸುರೇಶ್, ಉಪಾಧ್ಯಕ್ಷ ದಿವಾಕರ ಆಚಾರ್ಯ, ಬಾಬು ಮೂಪಾನ್, ಸಂಜೀವ ಪುಳ್ಕೂರು, ಗ್ರಾಮ ಪಂಚಾಯತಿ ಸದಸ್ಯ ಭಾಸ್ಕರ್, ರವಿ ಪುಳ್ಕೂರು, ಅರವಿಂದ ಪುಳ್ಕೂರು, ಹರೀಶ್ ಮಾಡ, ದಿನಕರ್ ಹೊಸಂಗಡಿ, ರಾಮಚಂದ್ರ ಚೆರುಗೋಳಿ, ಮೋಹನದಾಸ್ ಕೊಂಡೆವೂರು ಮುಂತಾದವರು ಉಪಸ್ಥಿತರಿದ್ದರು.
ಚಾಪೆ ಹೆಣೆಯಲು ಮುಹೂರ್ತ:
ಜೊತೆಗೆ ಈ ಸಂದರ್ಭ ಯಾಗಕ್ಕೆ ಸಮರ್ಪಣೆ ಮಾಡುವ ಚೇನಕ್ಕೋಡಿನಲ್ಲಿರುವ ಶ್ರೀ ಕೋಮರಾಯ ಚಾಮುಂಡೇಶ್ವರೀ ದೈವಸ್ಥಾನದ ಪರಿಸರದಲ್ಲಿರುವ ಮೊಗೇರ ಸಮುದಾಯದ ಕಾಲನಿಗೆ ಭೇಟಿ ನೀಡಿ ಯಾಗದ ಉಪಯೋಗಕ್ಕೆ ಬೇಕಾಗುವ ಚಾಪೆ ಹೆಣೆಯುವ ಕೆಲಸಕ್ಕೆ ಚಾಲನೆಯನ್ನು ನೀಡಿದರು. ಅಲ್ಲಿ ಉಪಸ್ಥಿತರಿದ್ದ ಮೊಗೇರ ಸಮುದಾಯದ ಬಂಧುಗಳೊಂದಿಗೆ ವಿಷ್ಣು ಸಹಸ್ರನಾಮ ಪಾರಾಯಣ, ಪೂಜೆ, ಸತ್ಸಂಗಗಳನ್ನು ನೆರವೇರಿಸಿದರು.
ಕಾರ್ಯಕ್ರಮದಲ್ಲಿ ಶ್ಯಾಮ ಸಿ. ಹೆಚ್., ನಾರಾಯಣ ಮುಳಿಯಾರ್, ಪದ್ಮನಾಭ ಸಿ. ಎಚ್., ಮಧೂರು ಗ್ರಾಮ ಪಂಚಾಯತಿ ಸದಸ್ಯ ಯೋಗೀಶ್ ಅಚಾರ್ಯ, ಹರೀಶ್ ಮಾಡ, ದಿನಕರ್ ಹೊಸಂಗಡಿ, ರಾಮಚಂದ್ರ ಚೆರುಗೋಳಿ, ಮೋಹನದಾಸ್ ಕೊಂಡೆವೂರು ಹಾಗೂ ಮೊಗೇರ ಸಮುದಾಯದ ಬಂಧುಗಳು, ತಾಯಂದಿರು ಉಪಸ್ಥಿತರಿದ್ದರು.



