ಕಯ್ಯಾರು ಕ್ರಿಸ್ತರಾಜ ದೇವಾಲಯದಲ್ಲಿ ಪರಿಸರ ಅಭಿಯಾನ
0
ನವೆಂಬರ್ 26, 2018
ಉಪ್ಪಳ: `ಪರಿಸರ ಸಂರಕ್ಷಣೆ ನನ್ನ ಹೊಣೆ ' ಎಂಬ ಸಂದೇಶದೊಂದಿಗೆ ಮಂಗಳೂರು ಧರ್ಮಪ್ರಾಂತ್ಯ ಹಮ್ಮಿಕೊಂಡಿರುವ ಅಭಿಯಾನಕ್ಕೆ ಕಯ್ಯಾರು ಕ್ರಿಸ್ತರಾಜ ದೇವಾಲಯದ ಪರಿಸರದಲ್ಲಿ ಭಾನುವಾರ ಗಿಡ ನೆಡುವ ಮೂಲಕ ಕಾರ್ಯಕ್ರಮ ನೆರವೇರಿತು.
ಸಿದ್ದಕಟ್ಟೆ ದೇವಾಲಯದ ಸಹಾಯಕ ಧರ್ಮಗುರು ಫಾದರ್ ಜೋಯ್ಸನ್ ವಾಸ್ ಮತ್ತು ಕಯ್ಯಾರು ದೇವಾಲಯದ ಧರ್ಮಗುರು ಫಾದರ್ ವಿಕ್ಟರ್ ಡಿ'ಸೋಜ ಕಾರ್ಯಕ್ರಮ ನೆರವೇರಿಸಿದರು. ಪಾಲನಾ ಸಮಿತಿ ಉಪಾಧ್ಯಕ್ಷ ಜೋನ್ ಡಿ'ಸೋಜ, ಕಾರ್ಯದಶರ್ಿ ರೋಶನ್ ಡಿ'ಸೋಜ, ಕೆಥೋಲಿಕ್ ಸಭಾ ಘಟಕ ಅಧ್ಯಕ್ಷ ರಾಜ್ಕುಮಾರ್ ಡಿ'ಸೋಜ, ಸಿಸ್ಟರ್ ಶಾಂತಿ ಲೋಬೊ ಮೊದಲಾದವರು ಉಪಸ್ಥಿತರಿದ್ದರು.


