ಇನ್ನು ಸ್ಕ್ಯಾನಿಂಗ್ಗೆ ಆಧಾರ್ ಕಡ್ಡಾಯ!
0
ನವೆಂಬರ್ 26, 2018
ಕಾಸರಗೋಡು: ಗಭರ್ಾವಸ್ಥೆಯ ಸ್ಥಿತಿ ಹಾಗೂ ಉದರ, ಗಂಟಲು, ಮೂತ್ರ ಜನಕಾಂಗ ಮೊದಲಾದ ಮಾನವ ದೇಹದ ಆಂತರಿಕ ಅಂಗಾಂಗಗಳ ಸಮಸ್ಯೆ ಮತ್ತು ರೋಗ ಲಕ್ಷಣಗಳ ಪತ್ತೆ ಹಚ್ಚುವಿಕೆಗಾಗಿ ನಡೆಸುವ ಸ್ಕ್ಯಾನಿಂಗ್ಗೆ ಆಧಾರ್ ಕಾಡರ್್ ಕಡ್ಡಾಯಗೊಳಿಲಾಗಿದೆ. ಅದರಂತೆ ಇನ್ನು ಮುಂದೆ ಸ್ಕ್ಯಾನಿಂಗ್ ಸೆಂಟರ್ಗಳಲ್ಲಿ ಆಧಾರ್ ಕಾಡರ್್ ಕಡ್ಡಾಯವಾಗಿ ಬೇಕಾಗಲಿದೆ.
ಕಾಸರಗೋಡು ನಗರದ ಕೆಲವು ಸ್ಕ್ಯಾನಿಂಗ್ ಕೇಂದ್ರಗಳು ಈಗಾಗಲೇ ಆಧಾರ್ ಕಾಡರ್್ ಇಲ್ಲದೆ ಸ್ಕ್ಯಾನ್ ನಡೆಸುತ್ತಿಲ್ಲವೆಂದು ಹೇಳಲಾಗುತ್ತಿದೆ. ಅಪರಾಧವನ್ನು ತಡೆಗಟ್ಟುವುದು ಹಾಗೂ ವೈದ್ಯಕೀಯ ಸೇವೆಯ ಪಾರದರ್ಶಕತೆಗೆ ಸುಗಮ ಹಾದಿ ನೀಡುವತ್ತ ಆಧಾರ್ ಕಾಡರ್್ ಕಡ್ಡಾಯಗೊಳಿಸಲಾಗಿದೆ. ಈ ವ್ಯವಸ್ಥೆಯು ಮುಂದಿನ ದಿನಗಳಲ್ಲಿ ಎಲ್ಲ ಸ್ಕ್ಯಾನಿಂಗ್ ಕೇಂದ್ರಗಳಲ್ಲಿ ಕಡ್ಡಾಯವಾಗಿ ಜಾರಿಗೆ ಬರಲಿದೆ ಎಂದು ಸಂಬಂಧಪಟ್ಟ ವರದಿ ತಿಳಿಸಿದೆ.


