HEALTH TIPS

ಎಚ್1ಎನ್1 ಜ್ವರ ಆತಂಕ ಬೇಡ : ಸಚಿವೆ

ಕಾಸರಗೋಡು: 2009ರಿಂದ ದೇಶದ ಎಲ್ಲ ರಾಜ್ಯಗಳಲ್ಲೂ ಎಚ್1ಎನ್1 ಜ್ವರ ಹರಡಿದೆ. ತಮಿಳುನಾಡು, ಕನರ್ಾಟಕ, ತೆಲಂಗಾಣ ಮೊದಲಾದ ದಕ್ಷಿಣ ಭಾರತದ ರಾಜ್ಯಗಳಿಗೆ ಹೋಲಿಸಿದರೆ ಕೇರಳದಲ್ಲಿ ಈ ಜ್ವರ ಬಾರೀ ಕಡಿಮೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ. 2017ಕ್ಕೆ ಹೋಲಿಸಿದರೆ ಈ ವರ್ಷ ಜ್ವರ ಬಾಧಿತರ ಸಂಖ್ಯೆ ಇಳಿಮುಖವಾಗಿದೆ ಎಂದು ಆರೋಗ್ಯ ಖಾತೆ ಸಚಿವೆ ಕೆ.ಕೆ.ಶೈಲಜಾ ಟೀಚರ್ ತಿರುವನಂತಪುರದಲ್ಲಿ ತಿಳಿಸಿದ್ದಾರೆ. ಸರಿಯಾದ ಚಿಕಿತ್ಸೆ ನೀಡಿದರೆ ರೋಗ ಗುಣವಾಗುವುದರಿಂದ ಯಾವುದೇ ಭೀತಿ ಅಗತ್ಯವಿಲ್ಲವೆಂದು ಅವರು ಹೇಳಿದರು. ರಾಜ್ಯದಲ್ಲಿ ಈ ವರ್ಷ ಹೆಚ್ಚು ಸಂಖ್ಯೆಯಲ್ಲಿ ಎಚ್1ಎನ್1 ವರದಿಯಾಗಿರುವುದು ಕಲ್ಲಿಕೋಟೆ ಜಿಲ್ಲೆಯಲ್ಲಾಗಿದೆ. ತೀವ್ರ ರೀತಿಯ ಗಂಟಲುನೋವು ಸಹಿತ ಜ್ವರ ಕಂಡುಬಂದರೆ ಕೂಡಲೇ ವೈದ್ಯರ ಸಹಾಯ ಪಡೆಯಲು ಸಚಿವೆ ಕೆ.ಕೆ.ಶೈಲಜಾ ಟೀಚರ್ ಸಲಹೆ ನೀಡಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries