ಸಾಲ ಹಿಂತಿರುಗಿಸದಿದ್ದರೆ ಕೆಎಸ್ಆರ್ಟಿಸಿಗೆ ಆಥರ್ಿಕ ಸಹಾಯವಿಲ್ಲ : ಕೇರಳ ಸರಕಾರ
0
ನವೆಂಬರ್ 26, 2018
ತಿರುವನಂತಪುರ: ಕೆಟಿಡಿಎಫ್ಸಿಗೆ ನೀಡಲಿರುವ 480 ಕೋಟಿ ರೂ. ಮರುಪಾವತಿ ಆರಂಭಿಸದಿದ್ದಲ್ಲಿ ಕೆಎಸ್ಆರ್ಟಿಸಿಗೆ ಧನ ಸಹಾಯ ನಿಲುಗಡೆಗೊಳಿಸಲಾಗುವುದು ಎಂದು ಕೇರಳ ಸರಕಾರವು ಸ್ಪಷ್ಟಪಡಿಸಿದೆ. ಪ್ರತಿದಿನ ಆದಾಯದಿಂದ ಸಾಲ ಮರುಪಾತಿಸಲು ಬ್ಯಾಂಕ್ನಲ್ಲಿ ಕ್ರಮೀಕರಣೆ (ಎಸ್ಕ್ರೋ ಅಕೌಂಟ್) ಮಾಡಬೇಕು. ದಿನದಲ್ಲಿ ಒಂದು ಕೋಟಿ ರೂ. ಆದರೂ ಮರುಪಾವತಿ ಮಾಡಬೇಕು. ಈ ಮುಖೇನ ತಿಂಗಳಿಗೆ 30 ಕೋಟಿ ರೂ. ಮರುಪಾವತಿ ಮಾಡುವಂತೆ ಗಡು ವಿಧಿಸಲಾಗಿತ್ತು.
ಇದಕ್ಕಿರುವ ಕ್ರಮಗಳನ್ನು ಕೈಗೊಳ್ಳದಿದ್ದರೆ ಸರಕಾರದ ಆಥರ್ಿಕ ಸಹಾಯವನ್ನು ಮೊಟಕು ಗೊಳಿಸಲಾಗುವುದು ಎಂದು ಸಾರಿಗೆ ಇಲಾಖೆಯ ಪ್ರಿನ್ಸಿಪಲ್ ಕಾರ್ಯದಶರ್ಿ ಕೆಎಸ್ಆರ್ಟಿಸಿ ಎಂಡಿಯವರಿಗೆ ಪತ್ರವೊಂದನ್ನು ರವಾಸಿನಿದ್ದಾರೆ. ನವೆಂಬರ್ 15ರಂದು ಈ ಪತ್ರವನ್ನು ಕಳುಹಿಸಲಾಗಿದೆ.
ನೌಕರರಿಗೆ ವೇತನ ಹಾಗೂ ಇನ್ನಿತರ ಸೌಲಭ್ಯಗಳನ್ನು ಒದಗಿಸಲು ರಾಜ್ಯ ಸರಕಾರದೊಂದಿಗೆ ಆಥರ್ಿಕ ಸಹಾಯ ಆಗ್ರಹಿಸಲಿರುವಂತೆ ಸರಕಾರದ ವತಿಯಿಂದ ಈ ಪತ್ರ ರವಾನೆಯಾಗಿರುವುದು ಕೆಎಸ್ಆರ್ಟಿಸಿಗೆ ಭಾರೀ ಹೊಡೆತ ಬೀಳುವಂತೆ ಮಾಡಿದೆ. ನವೆಂಬರ್ ತಿಂಗಳಲ್ಲಿ 35 ಕೋಟಿ ರೂ. ಸರಕಾರದ ಕಡೆಯಿಂದ ಕೆಎಸ್ಆರ್ಟಿಸಿ ನಿರೀಕ್ಷಿಸಿತ್ತು. ಶಬರಿಮಲೆಗಿರುವ ಸ್ಪೆಷಲ್ ಬಸ್ ಸವರ್ೀಸ್ಗಳು ಕೂಡ ನಷ್ಟದಲ್ಲಿರುವ ಸಂದರ್ಭದಲ್ಲಿ ಸರಕಾರದ ತೀಮರ್ಾನವು ಕೆಎಸ್ಆರ್ಟಿಸಿಗೆ ಇನ್ನಷ್ಟು ಸಮಸ್ಯೆ ತಂದೊಡ್ಡಲಿದೆ ಎಂದು ವಿಶ್ಲೇಷಿಸಲಾಗಿದೆ.

