ಎಲ್ಲಾ ಜಿಲ್ಲೆಗಳಲ್ಲೂ ಕ್ರೈಮ್ ಬ್ರಾಂಚ್ ವಿಭಾಗ : ಎಸ್.ಪಿ.ಗಳಿಗೆ ಜವಾಬ್ದಾರಿ
0
ನವೆಂಬರ್ 26, 2018
ತಿರುವನಂತಪುರ: ರಾಜ್ಯದ ಎಲ್ಲ ಜಿಲ್ಲೆಗಳಲ್ಲೂ ಇನ್ನು ಮುಂದೆ ಪೊಲೀಸ್ ಕ್ರೈಮ್ ಬ್ರಾಂಚ್ ವಿಭಾಗವನ್ನು ಆರಂಭಿಸಲು ಅಗತ್ಯದ ರೂಪುರೇಷೆ ತಯಾರಿಸಲಾಗುತ್ತಿದೆ. ಇದರ ಹೊಣೆಗಾರಿಕೆಯನ್ನು ಆಯಾ ಜಿಲ್ಲೆಗಳ ಎಸ್ಪಿ (ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ) ಗಳಿಗೆ ವಹಿಸಿಕೊಡಲು ಕೇರಳ ಸರಕಾರವು ತೀಮರ್ಾನಿಸಿದೆ.
ಕ್ರೈಮ್ ಬ್ರಾಂಚ್ ಸಿಐಡಿ ಎಂಬ ಹೆಸರಿನಲ್ಲಿ ಈ ವರೆಗೆ ಕಾರ್ಯವೆಸಗುತ್ತಿದ್ದ ವಿಭಾಗದ ಹೆಸರನ್ನು ಇನ್ನು ಮುಂದೆ ಕ್ರೈಮ್ ಬ್ರಾಂಚ್ ಆಗಿ ಬದಲಾಯಿಸಲು ನಿರ್ಧರಿಸಲಾಗಿದೆ. ಆಥರ್ಿಕ ಅಪರಾಧ, ಪೂರ್ವ ಒಳಸಂಚು ಹೂಡಿ ನಡೆಸಲಾಗುವ ಅಪರಾಧ ಕೃತ್ಯಗಳು, ಕೊಲೆ, ದರೋಡೆ ಇತ್ಯಾದಿಗಳ ಪೈಕಿ ಅತೀ ಗಂಭೀರವಾದ ಪ್ರಕರಣಗಳ ತನಿಖೆಯನ್ನು ಸಾಮಾನ್ಯವಾಗಿ ಕ್ರೈಮ್ ಬ್ರಾಂಚ್ ವಿಭಾಗಗಳಿಗೆ ವಹಿಸಿಕೊಡಲಾಗುತ್ತಿದೆ.
ಕ್ರೈಮ್ ಬ್ರಾಂಚ್ ವಿಭಾಗದ ಎಸ್ಪಿಗಳಿಗೆ ಹಲವು ಜಿಲ್ಲೆಗಳ ಕ್ರೈಮ್ ಬ್ರಾಂಚ್ನ ಹೊಣೆಗಾರಿಕೆಯನ್ನು ನೀಡಲಾಗುತ್ತಿದೆ. ಉದಾಹರಣೆಗೆ ಕಾಸರಗೋಡು ಕ್ರೈಮ್ ಬ್ರಾಂಚ್ ವಿಭಾಗದ ಹೆಚ್ಚುವರಿ ಹೊಣೆಗಾರಿಕೆಯನ್ನು ಕಣ್ಣೂರು ಕ್ರೈಮ್ ಬ್ರಾಂಚ್ ಎಸ್ಪಿ ಹಾಗೂ ಕಲ್ಲಿಕೋಟೆ ಕ್ರೈಮ್ ಬ್ರಾಂಚ್ ಎಸ್ಪಿಯವರು, ವಯನಾಡು ಜಿಲ್ಲೆಯ ಕ್ರೈಮ್ ಬ್ರಾಂಚ್ ವಿಭಾಗದ ಜವಾಬ್ದಾರಿಯನ್ನು ನಿರ್ವಹಿಸುತ್ತಿದ್ದಾರೆ. ಇಂತಹ ಕ್ರೈಮ್ ಬ್ರಾಂಚ್ ಎಸ್ಪಿಗಳಿಗೆ ಒಂದಕ್ಕಿಂತ ಹೆಚ್ಚು ಜಿಲ್ಲೆಗಳ ಹೊಣೆ ವಹಿಸಿಕೊಡಲಾಗುತ್ತಿದೆ.
ಇದರಿಂದಾಗಿ ಹೆಚ್ಚುವರಿ ಹೊರೆ ಹೊರಿಸಿದಂತಾಗುತ್ತಿದೆ. ಜೊತೆಗೆ ಇದರಿಂದ ಹಲವು ರೀತಿಯ ವ್ಯವಹಾರಿಕ ಹಾಗೂ ಔದ್ಯೋಗಿಕ ಸಂಕಷ್ಟಗಳು ಎದುರಾಗುತ್ತಿವೆ. ಅದಕ್ಕೆ ಪರಿಹಾರ ಕಂಡುಕೊಳ್ಳಲು ಆಯಾ ಜಿಲ್ಲೆಗಳ ಕ್ರೈಮ್ ಬ್ರಾಂಚ್ ಹೊಣೆಗಾರಿಕೆಯನ್ನು ಆಯಾ ಜಿಲ್ಲೆಗಳ ಪೊಲೀಸ್ ವರಿಷ್ಠಾಧಿಕಾರಿಯವರಿಗೆ ವಹಿಸಿಕೊಡಲು ಕೇರಳ ಸರಕಾರವು ಯೋಜನೆ ರೂಪಿಸಿದೆ.


