ಮಥುರಾ: ಭಾರತದಲ್ಲಿಯೇ ಇದೇ ಮೊದಲ ಬಾರಿಗೆ ಆನೆಗಳ ಚಿಕಿತ್ಸೆಗಾಗಿ ವಿಶೇಷ ಆಸ್ಪತ್ರೆಯೊಂದು ಮಥುರಾದಲ್ಲಿ ಆರಂಭವಾಗಿದೆ.
ಉತ್ತರಪ್ರದೇಶದ ಆಗ್ರಾದ ಫರಾಹ್ ಬ್ಲಾಕ್'ನ ಚುಮರ್ುರಾ ಗ್ರಾಮದಲ್ಲಿ ಆಗ್ರಾ ವಿಭಾಗೀಯ ಆಯುಕ್ತ ಅನಿಲ್ ಕುಮಾರ್ ಅವರು ಆಸ್ಪತ್ರೆ ಉದ್ಘಾಟಿಸಿದ್ದಾರೆ.
ಆಸ್ಪತ್ರೆಯಲ್ಲಿ ವೈಯಲರ್ೆಸ್ ಡಿಜಿಟಲ್ ಎಕ್ಸ್-ರೇ, ಲೇಸರ್ ಚಿಕಿತ್ಸೆ, ದಂತ ಎಕ್ಸ್-ರೇ, ಥರ್ಮಲ್ ಇಮೇಜಿಂಗ್, ಅಲ್ಟ್ರಾಸಾನೋಗ್ರಾಫಿ, ಹೈಡ್ರೋಥೆರಪಿ ಮತ್ತು ನಿದ್ರಾಹೀನತೆ ದೂರ ಮಾಡುವ ಚಿಕಿತ್ಸೆ ಸೇರಿ ಹಲವು ಚಿಕಿತ್ಸಾ ವ್ಯವಸ್ಥೆಗಳು ಲಭ್ಯವಿದೆ.
ಆಸ್ಪತ್ರೆಯನ್ನು ಆನೆ ಸಂರಕ್ಷಣಾ ಹಾಗೂ ಕಾಳಜಿ ಕೇಂದ್ರದ ಸಮೀಪವೇ ನಿಮರ್ಿಸಲಾಗಿದ್ದು, ಗಾಯಗೊಂಡ, ಅನಾರೋಗ್ಯ ಪೀಡಿತ ಆನೆಗಳಿಗೆ ಇಲ್ಲಿ ಚಿಕಿತ್ಸೆ ನೀಡಲಾಗುತ್ತದೆ. ಅಲ್ಲದೆ, ತರಬೇತಿ ಸಂದರ್ಭದಲ್ಲಿ ಅವುಗಳನ್ನು ಮೇಲೆತ್ತುವ ವೈದ್ಯಕೀಯ ಸೌಲಭ್ಯಗಳನ್ನು ಆಸ್ಪತ್ರೆ ಒಳಗೊಂಡಿದೆ.
ಪಶುವೈದ್ಯರು ಹಾಗೂ ಪಶು ವೈದ್ಯ ವಿದ್ಯಾಥರ್ಿಗಳು, ತರಬೇತುದಾರರು ಸುರಕ್ಷಿತ ಅಂತರದಿಂದ ಆನೆಗಳ ವರ್ತನೆಯನ್ನು ಗಮನಿಸಿ ಚಿಕಿತ್ಸೆ ಬಗ್ಗೆ ತಿಳಿದುಕೊಳ್ಳುವ ಅವಕಾಶವನ್ನು ಇಲ್ಲಿ ಮಾಡಿಕೊಡಲಾಗಿದೆ.





