ಕುಂಬಳೆ: ಖಾಸಗೀ ಬಸ್ ನಿರ್ವಾಹಕನೋರ್ವನಿಗೆ ಶಾಲಾ ವಿದ್ಯಾಥರ್ಿಗಳು ಹಲ್ಲೆ ನಡೆಸಿರುವುದನ್ನು ಖಂಡಿಸಿ ರಾ.ಹೆದ್ದಾರಿ ತಲಪಾಡಿ-ಕಾಸರಗೋಡು ಸಂಚಾರದ ಖಾಸಗೀ ಬಸ್ ಗಳು ಕುಂಬಳೆಯಲ್ಲಿ ಬುಧವಾರ ಸಂಜೆ ಹಠಾತ್ ಮುಷ್ಕರ ನಡೆಸಿದವು.
ಕಾಸರಗೋಡು-ತಲಪಾಡಿ ಹೆದ್ದಾರಿಯಲ್ಲಿ ಸಂಚರಿಸುವ ಖಾಸಗೀ ಬಸ್ ವಿಜಯ್ ಯ ನಿವರ್ಾಹಕ ನವೀನ್ ಎಂಬವರ ಮೇಲೆ ಬುಧವಾರ ಸಂಜೆ ಬಂದ್ಯೋಡು ಸಮೀಪದ ಮುಟ್ಟಂ ನ ಖಾಸಗೀ ಆಂಗ್ಲ ಮಾಧ್ಯಮ ಶಾಲೆಯೊಂದರ ವಿದ್ಯಾಥರ್ಿಗಳು ಹಲ್ಲೆ ನಡೆಸಿದರು. ಘಟನೆಯನ್ನು ಖಂಡಿಸಿ ಕುಂಬಳೆ ನಿಲ್ದಾಣದಲ್ಲಿ ಖಾಸಗೀ ಬಸ್ ಗಳು ಸಂಚಾರ ನಿಲ್ಲಿಸಿ ಹಠಾತ್ ಮುಷ್ಕರ ನಡೆಸಿ ಅಪರಾಧಿ ವಿದ್ಯಾಥರ್ಿಗಳ ಮೇಲೆ ಪೋಲೀಸರು ತಕ್ಷಣ ಕ್ರಮ ಕೈಗೊಳ್ಳಬೇಕು. ಮುಟ್ಟಂ ಪರಿಸರದ ಖಾಸಗೀ ಆಂಗ್ಲ ಮಾಧ್ಯಮ ಶಾಲೆಯೊಮದರ ವಿದ್ಯಾಥರ್ಿಗಳ ತಮಡವೊಮದು ಪ್ರತಿನಿತ್ಯ ಬಸ್ ನಲ್ಲಿ ದೂಂಡಾವರ್ತನೆಯ ಮೂಲಕ ಅಸಭ್ಯರಾಗಿ ವತರ್ಿಸಿ ಇತರ ಪ್ರಯಾಣಿಕರಿಗೆ ತೀವ್ರ ತೊಂದರೆ ಕೊಡುತ್ತಿದ್ದಾರೆ ಎಂದು ತಿಳಿಸಿದ್ದಾರೆ.
ವಿಷಯ ತಿಳಿದು ಆಗಮಿಸಿದ ಕುಂಬಳೆ ಠಾಣಾ ಪೋಲೀಸ್ ಅಧಿಕೃತರು ಬಸ್ ಕಾಮರ್ಿಕರೊಂದಿಗೆ ಸಂಧಾನ ನಡೆಸಿ ಗುರುವಾರ ಸಂಜೆಯೊಳಗೆ ಅಪರಾಧಿಗಳ ವಿರುದ್ದ ಅಗತ್ಯ ಕ್ರಮ ಕೈಗೊಳ್ಳಲಾಗುವುದೆಂದು ಭರವಸೆ ನೀಡಿದರು. ಒಂದು ಗಂಟೆಗಳಿಗಿಂತಲೂ ಹೆಚ್ಚುಹೊತ್ತು ಬಸ್ ಸಂಚಾರವಿಲ್ಲದೆ ನೂರಾರು ಪ್ರಯಾಣಿಕರು ತೊಂದರೆಗೊಲಗಾದರು. ಪೋಲೀಸರ ಭರವಸೆಯ ಕಾರಣ 6.30ರ ವೇಳೆಗೆ ಮತ್ತೆ ಬಸ್ ಸಂಚಾರ ಆರಂಭಗೊಂಡಿತು.

