HEALTH TIPS

ಕನರ್ಾಟಕ ಮಂತ್ರಿಗಳೊಂದಿಗೆ ಸಮಾಲೋಚನಾ ಸಭೆ ನಡೆಸಿದ ಕನರ್ಾಟಕ ಎನ್ಆರ್ಐ ಫೋರಂ ಅನಿವಾಸಿ ಭಾರತೀಯರೆಲ್ಲರೂ ಶ್ರೀಮಂತರಲ್ಲ:ಪ್ರವೀಣ್ಶೆಟ್ಟಿ ವಕ್ವಾಡಿ



                       (ಚಿತ್ರ  /  ವರದಿ : ರೋನ್ಸ್ ಬಂಟ್ವಾಳ್)
       ದುಬಾಯಿ (ಅಲ್ ನಾಸರ್): ಯುಎಇನಲ್ಲಿ ನೆಲೆಯಾದ ಕನರ್ಾಟಕದಲ್ಲಿನ ಯಾವುದೇ ಜನರ ಸ್ಪಂದನೆಗೆ ಕೆಎನ್ಆರ್ಐ ಸಂಸ್ಥೆ ತ್ವರಿತವಾಗಿ ಸ್ಪಂದಿಸಿ ಮಾನವೀಯತೆ ಮೆರೆದಿದೆ. ಆದರೆ ವಿದೇಶದಲ್ಲಿನ ಅಥವಾ ಈ ರಾಷ್ಟ್ರದ ಕಾನೂನುಗಳನ್ನು ಪಾಲಿಸುತ್ತಾ ವೀಸಾ ಸಮಸ್ಯೆಗಳನ್ನು ಪರಿಹಾರಿಸಿ ಕೊಂಡಿದ್ದೇವೆ. ಕನರ್ಾಟಕ ರಾಜ್ಯ ಅಥವಾ ಕೇಂದ್ರ ಸರಕಾರಗಳು ನಮ್ಮನ್ನು ಪ್ರೋತ್ಸಹಿಸಿದರೆ ಮತ್ತಷ್ಟು ಸುಲಭವಾಗಿ ಸೇವೆ ಸಲ್ಲಿಸಲು ಅನುಕೂಲಕವಾಗಬಲ್ಲದು. ಅನಿವಾಸಿ ಭಾರತೀಯರೆಲ್ಲರೂ ಶ್ರೀಮಂತರಲ್ಲ ಎಂದು ದುಬಾಯಿಯ ಪ್ರತಿಷ್ಠಿತ ಉದ್ಯಮಿ, ಕನರ್ಾಟಕ ಅನಿವಾಸಿ ಭಾರತೀಯ ಸಮಿತಿ ಯುಎಇ (ಕನರ್ಾಟಕ ಎನ್ಆರ್ಐ ಫೋರಂ-ಯುಎಇ) ಅಧ್ಯಕ್ಷ ಪ್ರವೀಣ್ಕುಮಾರ್ ಶೆಟ್ಟಿ ವಕ್ವಾಡಿ ತಿಳಿಸಿದರು.
                       ಕನರ್ಾಟಕ ಉದ್ಯಮಿಗಳ ಸಾಗರೋತ್ತರ ಸಂಸ್ಥೆಯಲ್ಲೊಂದಾದ ಕನರ್ಾಟಕ ಅನಿವಾಸಿ ಭಾರತೀಯ ಸಮಿತಿ ಯುಎಇ (ಕೆಎನ್ಆರ್ಐ)  ದುಬಾಯಿ  ಫಚರ್ುನ್ ಪ್ಲಾಜ್ಹಾ ಹೊಟೇಲು ಸಭಾಗೃಹದಲ್ಲಿ ಬುಧವಾರ ಆಯೋಜಿಸಿದ್ದ ಕನರ್ಾಟಕ ಮಂತ್ರಿಗಳೊಂದಿಗೆ ಸಮಾಲೋಚನಾ ಸಭೆಯ ಅಧ್ಯಕ್ಷತೆ ವಹಿಸಿ ಪ್ರವೀಣ್ಕುಮಾರ್ ಶೆಟ್ಟಿ  ಮಾತನಾಡಿದರು.
    ವೀಸಾ, ಸಂಬಳ, ಉದ್ಯೋಗದಲ್ಲಿನ ಸಮಸ್ಯೆ, ಹೊಸ ಉದ್ಯಮಕ್ಕೆ ಅವಕಾಶ, ವಿಮಾನ ಯಾದ ದರದಲ್ಲಿನ ತಾರತಮ್ಯತೆ, ಕನರ್ಾಟಕದ ಕೆಲವೊಂದು ಕಡೆ ನೇರ ವಿಮಾನ ಸಂಚಾರ ಇತ್ಯಾದಿ ಸಮಸ್ಯೆಗಳು ಕಾಡುತ್ತಿವೆ. ನಾವು ನಮ್ಮ ಸದಸ್ಯರಿಗೆ ಇದೀಗಲೇ ಕೆಎನ್ಆರ್ಐ ಕಾಡರ್್ಗಳನ್ನು ನೀಡಿದ್ದೇವೆ. ನಾವು ತವರೂರಲ್ಲಿ ಮತ್ತೆ ನಿವೃತ್ತಿ ಜೀವನ ಸಾಗಿಸುವಾಗ ಇರಲಿ, ಆ ಮುನ್ನವಾಗಲಿ ನಮಗೆ ವಾಸ್ತವ್ಯಕ್ಕಾಗಿ ಮನೆ ಕಟ್ಟುವಾಗ ಅಧಿಕಾರಿಗಳ ಸಹಯೋಗ, ಶೀಘ್ರವಾಗಿ ದಾಖಲೆಪತ್ರಗಳ ವಿಲೇವರಿ, ವಿಮಾ ಯೋಜನೆ, ಎಲ್ಲದಕ್ಕೂ ಮುನ್ನ ಎನ್ಆರ್ಐಗಳಿಗೆ ಮತದಾನ ಹಕ್ಕು ಚಲಾವಣೆ ಅವಕಾಶ, ಪ್ರತೀಯೊಂದು ಜಿಲ್ಲಾಧಿಕಾರಿಗಳ ಕಛೇರಿಯಲ್ಲಿ ಎನ್ಆರ್ಐ ಕಛೇರಿ, ಉನ್ನಧಿಕಾರಿಗಳ ನೇಮಕಾತಿ ಬಗ್ಗೆ ಜ್ವಾಲಂತ ಉದಾಹರಣೆಗಳೊಂದಿಗೆ ಸಚಿವರಿಗೆ ತಿಳಿಸಿದರು.
               ಕನರ್ಾಟಕ ರಾಜ್ಯದ ಮಾಜಿ ಮುಖ್ಯಮಂತ್ರಿ , ಹಾಲಿ ಸಂಸದ ಡಾ. ಎಂ.ವೀರಪ್ಪ ಮೊಲಿ, ಕನರ್ಾಟಕದ ನಗರಾಭಿವೃದ್ಧಿ ಮತ್ತು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವರಿ ಸಚಿವ ಯು.ಟಿ ಖಾದರ್, ಕನರ್ಾಟಕದ ಮಹಿಳಾ-ಮಕ್ಕಳ ಕಲ್ಯಾಣ, ಕನ್ನಡ-ಸಂಸ್ಕೃತಿ ಖಾತೆ, ಉಡುಪಿ ಜಿಲ್ಲಾ ಉಸ್ತುವರಿ ಸಚಿವೆ ಡಾ. ಜಯಮಾಲ  ಉಪಸ್ಥಿತರಿದ್ದು, ಕನರ್ಾಟಕ ಎನ್ಆರ್ಐ ಫೋರಂ  ಅಧ್ಯಕ್ಷ ಪ್ರವೀಣ್ಕುಮಾರ್ ಶೆಟ್ಟಿ ವಕ್ವಾಡಿ ಸಚಿವರಿಗೆ ಮನವಿ ಅಪರ್ಿಸಿ ಸಮಸ್ಯೆಗಳ ಪರಿಹಾರಕ್ಕೆ ಕೋರಿದರು.

          ವೀರಪ್ಪ ಮೊಲಿ ಮಾತನಾಡಿ ವಿದೇಶಿಗರಿಗೆ ರಾಜ್ಯ ಸರಕಾರದ ಮತ್ತು ಕೇಂದ್ರ ಸರಕಾರಗಳ ಅವಶ್ಯಕತೆಗಳಿದ್ದು ಇವೆರಡೂ ಸರಕಾರಗಳ ಕರ್ತವ್ಯಗಳೇ ವಿಭಿನ್ನವಾಗಿವೆ. ಎನ್ಆರ್ಐಗಳಿಗೆ ಕೇಂದ್ರ ವಿದೇಶಾಂಗದ ಸಹಯೋಗ ಅತ್ಯವಶ್ಯವಾಗಿರುತ್ತದೆ. ತಮ್ಮ ಸಮಸ್ಯೆಗಳಿಗೆ ಸಿಂಗಲ್ವಿಂಡೋ ಪರಿಹಾರಕ್ಕೆ ಶೀಘ್ರವೇ ವ್ಯವಸ್ಥೆ ಮಾಡಿಸುವೆ. ತಮ್ಮತಂಹ ಪರಿಶ್ರಮಜೀವಿಗಳಿಂದ ನಮ್ಮನಾಡು ಪ್ರಗತಿ ಕಂಡಿದೆ. ಕನರ್ಾಟಕವು ಉದ್ಯಮಕ್ಕೆ ಸ್ವಂದಿಸುವ ಪ್ರಥಮ ರಾಜ್ಯವಾಗಿ ಅನುಕೂಲಕರ ವಾತಾವರಣ ನಿಮರ್ಿಸಿದೆ. ಆದ್ದರಿಂದ ಅನಿವಾಸಿ ಭಾರತೀಯರು ತವರೂರಲ್ಲೂ ಉದ್ಯಮ ಕಟ್ಟಿ ಬೆಳೆಸಬೇಕು. ಪ್ರವೀಣ್ಕುಮಾರ್ ಶೆಟ್ಟಿ ಓರ್ವ ಸಾಧನಾಶೀಲ ಯುವೋದ್ಯಮಿಯಾಗಿದ್ದು ಯುವ ಪೀಳಿಗೆಗೆ ಮಾದರಿ ಉದ್ಯಮಿ ಆಗಿದ್ದಾರೆ ಎಂದರು.
                 ಸಚಿವ ಖಾದರ್ ಮಾತನಾಡಿ ನಮ್ಮದು ಎನ್ಆರ್ಐ ಸರಕಾರವಲ್ಲ. ಆದರೆ ವ್ಯಾಪಿಗೆ ಒಳಪಡುವ ಸಮಸ್ಯೆಗಳಿಗೆ ಪರಿಹಾರ ನೀಡುವ ಪ್ರಯತ್ನ ಮಾಡಿದ್ದೇವೆ. ಸಮಸ್ಯೆಗಳು ಎಲ್ಲರನ್ನೂ ಕಾಡುತ್ತವೆ. ಅದನ್ನು ಒಗ್ಗಟ್ಟಿನಿಂದ ಪರಿಹರಿಸಿ ಕೊಳ್ಳಬೇಕು. ತಾವೆಲ್ಲರೂ ಮಾನವೀಯ ದೃಷ್ಟಿಯಿಂದ ಸ್ಪಂದಿಸಿ ಸಹಯೋಗ ನೀಡುತ್ತಿರುವುದು ಶ್ಲಾಘನೀಯ. ಮತ್ತೊಂದು ಸರಕಾರಗಳ ಸ್ಪಂದನೆ ಬಗ್ಗೆ ನಾವೇನನ್ನೂ ಹೇಳಕ್ಕಾಗಲ್ಲ. ಆದರೆ ಮುಂದೆ ತಮ್ಮ ಯೋಗದಾನಕ್ಕೆ ಶಕ್ತಿ ತುಂಬುವ ಕೆಲಸ ಕನರ್ಾಟಕ ಸರಕಾರದಿಂದ ಮಾಡುವ ಪ್ರಯತ್ನ ಮಾಡುವೆ ಎಂದರು.
               ಸರಕಾರ ಎಲ್ಲರ ಸಮಸ್ಯೆಗಳನ್ನು ಅಥರ್ೆಸಿ ಅನುದಾನ ನೀಡುತ್ತದೆ. ಮುಂದಿನ ಪೀಳಿಗೆಗೆ ಮಾದರಿ ಆಗುವ ಮತ್ತು ನಮ್ಮ ಸಂಸ್ಕೃತಿ ಉಳಿಸಿ ಬೆಳೆಸುವುದನ್ನೇ ನಮ್ಮ ಸರಕಾರ ಅಪೇಕ್ಷಿಸುತ್ತದೆ. ಆದರೆ ಎನ್ಆರ್ಐ ಮತ್ತು ನಮ್ಮ ಸರಕಾರದ ಮಧ್ಯೆ ಏನೋ ಸ್ಪಂದನಾ ವ್ಯತ್ಯಾಯ ಆಗಿರಬಹುದು. ವಿದೇಶದಲ್ಲಿನ ನಮ್ಮವರೆಲ್ಲರೂ ಶ್ರೀಮಂತರೆನ್ನುವ ಮನೋಭಾವ ಸಾಮಾನ್ಯವಾದುದು. ಆದರೆ ನಿಮ್ಮೆಲ್ಲರ ಕಷ್ಟಪಾಡು, ಅವಿರತ ಶ್ರಮದ ಬದುಕು ನಾವು ಅರಿತಿದ್ದೇವೆ. ನಿಮ್ಮ ಬೇಡಿಕೆಯಂತೆ ಮತದಾನದ ಹಕ್ಕು ಬಗ್ಗೆ ಮತ್ತೆ ಚಚರ್ಿಸುವೆ. ಮತದಾನ ಮಾಡದ ಮನುಷ್ಯನ ಬದುಕು ಸಾರ್ಥಕವಲ್ಲ ಎಂದು ಸಚಿವೆ ಜಯಮಾಲ ತಿಳಿಸಿದರು.

             ಈ ಸಂದರ್ಭದಲ್ಲಿ ಫೋರಂನ ಉಪಾಧ್ಯಕ್ಷ ಜೋಸೆಫ್ ಮಥಾಯಸ್, ಬಿ.ಕೆ ಗಣೇಶ್ ರೈ, ಡಾ| ಕಾಪು ಮಹ್ಮದ್, ಜೊತೆ ಕೋಶಾಧಿಕಾರಿ ದಯಾ ಕಿರೋಡಿಯನ್, ಜೊತೆ ಕಾರ್ಯದಶರ್ಿ ಎಂ.ಇ ಮುಳೂರು, ನೋವೆಲ್ ಅಲ್ಮೇಡಾ ಸೇರಿದಂತೆ ಕಾರ್ಯಕಾರಿ ಸಮಿತಿ ಸದಸ್ಯರಾದ ಅಬ್ದುಲ್ ಲತೀಫ್ ಮೂಲ್ಕಿ, ಮಲ್ಲಿಕಾಜರ್ುನ್ ಗೌಡ, ಮಹ್ಮದ್ ಆಲಿ ಉಚ್ಚಿಲ್, ಪ್ರಶಾಂತ್ ಆಚಾರ್ಯ ಸೇರಿದಂತೆ ಹಲವಾರು ಸದಸ್ಯರು, ಅಖಿಲಭಾರತ ತುಳು ಒಕ್ಕೂಟ ಅಧ್ಯಕ್ಷ ಧರ್ಮಪಾಲ್ ಯು.ದೇವಾಡಿಗ, ಡಾ| ಯು.ಟಿ ಇಫ್ತಿಕರ್ ಆಲಿ, ನಾರಾಯಣ ದೇವಾಡಿಗ ಕಾಪು (ದುಬಾಯಿ), ಸತೀಶ್ ಶೆಟ್ಟಿ ಪಟ್ಲ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.

ಉಭಯ ರಾಷ್ಟ್ರಗಳ ರಾಷ್ಟ್ರಗೀತೆಯೊಂದಿಗೆ ಸಭೆ ಆದಿಗೊಂಡಿತು. ಜೊತೆ ಕಾರ್ಯದಶರ್ಿ ಶಶಿಧರ್ ನಾಗರಾಜಪ್ಪ ಸ್ವಾಗತಿಸಿದರು. ಪ್ರಧಾನ ಕಾರ್ಯದಶರ್ಿ ಪ್ರಬಾಕರ್ ಅಂಬಲತರೆ ಪ್ರಸ್ತಾವಿಕವಾಗಿ ನುಡಿದು ಸದಸ್ಯರ ಸ್ಪಂದನೆ ಹಾಗೂ ಇಲ್ಲಿನ ಕನ್ನಡಿಗರು ಪಡುವ ಶ್ರಮದ ಬಗ್ಗೆ ವಿವರಿಸಿದರು. ಕಾರ್ಯಕ್ರಮ ನಿರೂಪಿಸಿದರು. ಕೋಶಾಧಿಕಾರಿ ಸದನ್ ದಾಸ್ ವಂದಿಸಿದರು.









ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries