HEALTH TIPS

ಪ್ರಾಣಿ ಬೇಟೆಗೆಂದು ಸುರಂಗದೊಳಗೆ ನುಗ್ಗಿದ ಯುವಕ ಮೃತ್ಯು ಕಿರಿದಾದ ಸುರಂಗದ ಎಡೆಯಲ್ಲಿ ದೇಹದ ಮೇಲೆ ಮಣ್ಣು ಜರಿದು ಬಿದ್ದು ಹೊರಬರಲಾರದೆ ಪ್ರಾಣತೆತ್ತ ಗುಂಪೆ ನಿವಾಸಿ ಕೂಲಿ ಕಾಮರ್ಿಕ ರಮೇಶ

                     
       ಉಪ್ಪಳ: ಪ್ರಾಣಿಬೇಟೆಗೆಂದು ಸುರಂಗದೊಳಗೆ ತೆರಳಿದ ಯುವಕ ಹೊರಬರಲಾರದೆ ಮೃತಪಟ್ಟ ಘಟನೆ ಬಾಯಾರುಪದವು ಸಮೀಪದ ಧರ್ಮತ್ತಡ್ಕ ಬಾಳಿಕೆಯಲ್ಲಿ ನಡೆದಿದೆ. ಧರ್ಮತ್ತಡ್ಕ ಗುಂಪೆ ನಿವಾಸಿ ಕೂಲಿ ಕಾಮರ್ಿಕ ರಮೇಶ(35) ಮೃತಪಟ್ಟ ಯುವಕ. ಗುರುವಾರ ಸಾಯಂಕಾಲ ಮುಳ್ಳುಹಂದಿ ಬೇಟೆಗೆಂದು ನಾಲ್ಕು ಮಂದಿ ಸಹವತರ್ಿಗಳ ಜೊತೆ ತೆರಳಿದ್ದ ಯುವಕ ಸುರಂಗದಲ್ಲಿ ಮುನ್ನಡೆದಿದ್ದಾನೆ, ಕಿರಿದಾದ ಸುರಂಗ ಮಾರ್ಗದಿಂದ ಒಂದು ಮುಳ್ಳುಹಂದಿಯನ್ನು ಹಿಡಿದು ತಂದಿದ್ದು, ನಂತರ ಸುರಂಗದೊಳಗೆ ಒಳಹೊಕ್ಕಿ ಮಗಗೊಂದು ಮುಳ್ಳುಹಂದಿಯನ್ನು ಹಿಡಿಯಲು ಸೊಂಟಕ್ಕೆ ಹಗ್ಗಕಟ್ಟಿ ತೆರಳಿದ್ದಾನೆ. ತಾನು ಬರಲಾಗದಿದ್ದರೆ ಸೂಚನೆ ನೀಡುತ್ತೇನೆ, ನಂತರ ಹಗ್ಗದ ಮೂಲಕ ತನ್ನನ್ನು ಹೊರಗೆ ಎಳೆಯಿರಿ ಎಂದು ಹೇಳಿ ಯುವಕ ಒಳಗೆ ಪ್ರವೇಶಿಸಿದ್ದ ಎನ್ನಲಾಗಿದೆ. ಆದರೆ ಬಹಳ ಸಮಯದವರೆಗೆ ಯಾವುದೇ ಸೂಚನೆ ನೀಡದ ರಮೇಶ ಹೊರಬರಲು ಆಗದೆ ಅಸುನೀಗಿದ್ದಾನೆ. ಸ್ನೇಹಿತ ರಮೇಶ ಬಹಳ ಸಮಯದವರೆಗೆ ಬಾರದೆ ಇದ್ದುದನ್ನು ಗಮನಿಸಿದ ಯುವಕರು ಊರ ನಾಗರಿಕರ ಮೂಲಕ ಉಪ್ಪಳ ಅಗ್ನಿಶಾಮಕ ಸಿಬ್ಬಂದಿಗೆ ಕರೆ ಮಾಡಿ ಮಾಹಿತಿ ನೀಡಿದರು. ರಾತ್ರಿ ಸುಮಾರು 8.30 ಯಿಂದ ಅಗ್ನಿಶಾಮಕ ದಳದ ರಕ್ಷಣಾ ಕಾಯರ್ಾಚರಣೆಯ ಮೂಲಕ ರಮೇಶನನ್ನು ಹೊರತೆಗೆಯಲು ಪ್ರಯತ್ನಿಸಿದ್ದು, ತೇವಾಂಶ ಭರಿತ ಮಣ್ಣು ಜರಿದು ಬಿದ್ದ ಪರಿಣಾಮ ರಮೇಶನನ್ನು ಹೊರತರುವ ಶ್ರಮ ವಿಫಲವಾಗಿದೆ. ದೂರ ಸುರಂಗದಲ್ಲಿ ಆಮ್ಲಜನಕ ಕೊರೆತೆ ಇದ್ದ ಕಾರಣ ಆಕ್ಸಿಜನ್ ಸಿಲಿಂಡರ್ ಬಳಸಿ ರಾತ್ರಿ ವೇಳೆ ಕಾಯರ್ಾಚರಣೆ ನಡೆಸಿದ್ದ ಅಗ್ನಿಶಾಮಕ ಸಿಬ್ಬಂದಿ ಮತ್ತು ಊರ ನಾಗರಿಕರು ರಮೇಶನನ್ನು ಹೊರತರಲು ಪ್ರಯತ್ನಿಸಿದ್ದರು. ಸುಮಾರು ಒಟ್ಟು ನಾಲ್ಕು ಗಂಟೆಗಳ ಕಾಲ ಪ್ರಯತ್ನಿಸಿದ್ದ ಅಗ್ನಿಶಾಮಕ ಸಿಬ್ಬಂದಿಗೆ ರಮೇಶನ ದೇಹವನ್ನು ತೊರತರಲು ಸಾಧ್ಯವಾಗಿಲ್ಲ ಎನ್ನಲಾಗಿದೆ. ಕೇವಲ 1.20 ಮೀ. ಅಗಲವಿರುವ ಕಿರಿದಾದ ಸುರಂಗದಲ್ಲಿ ಏಕಕಾಲದಲ್ಲಿ ಒಬ್ಬರು ಅಥವಾ ಇಬ್ಬರಿಗೆ ಮಾತ್ರವೇ ತೆರಳಹುದಾಗಿದ್ದು ರಕ್ಷಣಾ ಕಾಯರ್ಾಚರಣೆಗೆ ಕ್ಲಿಷ್ಟವಾಗಿತ್ತು. ಶುಕ್ರವಾರ ಮುಂಜಾನೆ ಪುನಃ ಕಾಯರ್ಾಚರಣೆ ಆರಂಭಿಸಿದ ಅಗ್ನಿಶಾಮಕ ಸಿಬ್ಬಂದಿ ಮಣ್ಣನ್ನು ಹೊರತೆಗೆಯುವ ಕೆಲಸವನ್ನು ಆರಂಭಿಸಿ, ಮಧ್ಯಾಹ್ನದ ನಂತರ ಮೃತ ರಮೇಶನ ದೇಹವನ್ನು ಹೊರತೆಗೆದಿದ್ದಾರೆ.(ಸಂಜೆ ವೇಳೆಗೆ ಹೊರತೆಗೆಯುವ ನಿರೀಕ್ಷೆ) ಸುರಂಗ ನಿಮರ್ಾಣದ ಅನುಭವವಿರುವ ಊರ ಕಾಮರ್ಿಕರ ಸಹಾಯದಿಂದ ಸುರಂಗದ ಒಳಗಡೆ ಜರಿದು ಬಿದ್ದಿರುವ ಮಣ್ಣನ್ನು ಹೊರ ಹಾಕಿ, ಮೃತದೇಹವನ್ನು ಬರೋಬ್ಬರಿ 12 ಗಂಟೆಗಳ ನಂತರ ಹೊರತೆಗೆಯಲಾಯಿತು. ಮೃತರು ಪತ್ನಿ ಗಾಯತ್ರಿ, ಮಕ್ಕಳಾದ ಚೈತ್ರಾ, ಚೇತನ್, ಪವನ್, ಮೂವರು ಸಹೋದರ, ಇಬ್ಬರು ಸಹೋದರಿಯರನ್ನು ಸಹಿತ ಪಾರ ಬಂಧು ಬಳಗವನ್ನು ಅಗಲಿದ್ದಾರೆ.
          ಅಡಿಕೆ ಕೊಯ್ಲು ಮುಗಿಸಿ ಮುಳ್ಳು ಹಂದಿ ಬೇಟೆಗೆ ತೆರಳಿದ್ದ ರಮೇಶ :
  ಗುರುವಾರ ಬೆಳಿಗ್ಗೆ ಸನಿಹದ ತೋಟದಲ್ಲಿ ಅಡಿಕೆ ಕೊಯ್ಲು ಮುಗಿಸಿ ಮಧ್ಯಾಹ್ನ ಮನೆಗೆ ತೆರಳಿದ್ದ ರಮೇಶ ಸಾಯಂಕಾಲ ಸ್ನೇಹಿತರ ಅಣತಿಯಂತೆ ಮುಳ್ಳು ಹಂದಿ ಬೇಟೆಗೆ ಹೊರಟಿದ್ದಾನೆ. ಒಟ್ಟು ಐದು ಮಂದಿಯ ತಂಡ ಸುರಂಗದಲ್ಲಿ ಮುಳ್ಳುಹಂದಿ ಇರುವುದನ್ನು ಮೊದಲೇ ಗೊತ್ತುಪಡಿಸಿದ್ದು, ರಮೇಶನನ್ನು ಸುರಂಗದ ಒಳಕ್ಕೆ ತೆರಳಲು ಸೂಚಿಸಿದ್ದರು. ಇದರಂತೆ ಮೊದಲಿಗೆ ಒಂದು ಮುಳ್ಳು ಹಂದಿಯನ್ನು ಹಿಡಿದು ಹೊರತಂದಿದ್ದ ಎನ್ನಲಾಗಿದೆ. ಸುರಂಗದ ಒಳಗೆ ಮತ್ತೊಂದು ಹಂದಿ ಇರುವುದನ್ನು ಗಮನಿಸಿದ್ದ ರಮೇಶ ಕಿರಿದಾದ ಸುರಂಗದೊಳಗೆ ಬಹಳ ದೂರ ತೆರಳಿದ್ದು, ಸುರಂಗದ ಒಂದು ಪಾಶ್ರ್ವ ಜರಿದು ಮೈಮೇಲೆ ಬಿತ್ತೆನ್ನಲಾಗಿದೆ. ಸುರಂಗದೊಳಗೆ ತೆವಳಿಕೊಂಡು ಹೋಗುವ ಅನಿವಾರ್ಯತೆಯು ಇದ್ದು, ಆಮ್ಲಜನಕದ ಕೊರೆತೆಯು ಬಾಧಿಸಿದ ಪರಿಣಾಮ ರಮೇಶ ಸುರಂಗದೊಳಗೆ ಮೃತಪಟ್ಟಿದ್ದಾನೆಂದು ಪೋಲಿಸರು ತಿಳಿಸಿದ್ದಾರೆ.
            ಕಾಡು ಪ್ರಾಣಿ ಬೇಟೆ ಅಪರಾಧ!
   ಕಾಡು ಹಂದಿ, ಮುಳ್ಳು ಹಂದಿ ಸೇರಿದಂತೆ, ಮೊಲ, ಪಕ್ಷಿಗಳ ಬೇಟೆಯು ಅಪರಾಧ ಕೃತ್ಯವಾಗಿದೆ. ಕಾಡು ಪ್ರಾಣಿಗಳನ್ನು ಕೊಲ್ಲುವುದು, ಮಾಂಸ ತಯಾರಿ ಮತ್ತು ಮಾರಾಟ ಅಕ್ಷಮ್ಯ ಅಪರಾಧವಾಗಿದೆ. ಸಾಮಾನ್ಯವಾಗಿ ಸುರಂಗಗಳನ್ನು, ಗುಹೆಗಳನ್ನು ಆಶ್ರಯಿಸುವ ಮುಳ್ಳು ಹಂದಿ ಬೇಟೆಯು ಇತ್ತೀಚೆಗೆ ಮಂಜೇಶ್ವರ ತಾಲೂಕಿನಲ್ಲಿ ಸವರ್ೇ ಸಾಮಾನ್ಯವೆನ್ನುವಂತಾಗಿದೆ. ವರ್ಷಗಳ ಹಿಂದೆ ಇದೇ ಪರಿಸರದಲ್ಲಿ ಮುಳ್ಳುಹಂದಿ ಬೇಟೆಗೆಂದು ಸುರಂಗದಲ್ಲಿ ಹೊಗೆಯನ್ನು ಹಾಕಿದ ಪರಿಣಾಮ ಇಬ್ಬರು ಅಸುನೀಗಿದ್ದರು. ತಿಂಗಳುಗಳ ಹಿಂದೆ ಆಮೆಯನ್ನು ಅಕ್ರಮವಾಗಿ ಸಾಗಿಸುತ್ತಿದ್ದ ಯುವಕನನ್ನು ಪೋಲಿಸರು ಪೆಮರ್ುದೆಯಲ್ಲಿ ಬಂಧಿಸಿದ್ದರು.
       ಹದಿನೈದು ವರ್ಷಗಳ ಹಿಂದೆಯೂ ಆಗಿತ್ತು ದುರಂತ:
   ಹದಿನೈದು ವರ್ಷಗಳ ಹಿಂದೆಯೂ ಇಂತಹದೇ ಭೀಕರ ದುರಂತ ಇದೇ ಪರಿಸರದಲ್ಲಿ ನಡೆದಿತ್ತು. ಮೇಪ್ಪಾಟು ಎಂಬ ಸ್ಥಳದಲ್ಲಿ ಹದಿನೈದು ವರ್ಷಗಳ ಹಿಂದೆ ಮುಳ್ಳುಹಂದಿ ಬೇಟೆಗೆ ಪ್ರಾಕೃತಿಕ ಸುರಂಗಕ್ಕೆ ತೆರಳಿದ್ದ ಚಂದಪ್ಪ, ಐತ್ತಪ್ಪ, ಹರೀಶ್ ಎಂಬ ಮೂವರು ಅಂದು ದುರ್ಮರಣಕ್ಕೀಡಾಗಿದ್ದರು. 
       ಇಲ್ಲಿ ಇದೆ ಗೌಪ್ಯ ಭೀಕರ ನಿಗೂಢ ಗುಹೆಗಳು:
  ಧರ್ಮತ್ತಡ್ಕ, ಪೆಮರ್ುದೆ, ಸಜಂಕಿಲ, ಕನಿಯಾಲ ಪರಿಸರಗಳು ರಾಷ್ಟ್ರದಲ್ಲೇ ಅತ್ಯಧಿಕ ಸುರಂಗಗಳಿರುವ ಪ್ರದೇಶವಾಗಿ ಗುರುತಿಸಲ್ಪಟ್ಟಿದೆ. ಈ ಪ್ರದೇಶಗಳಲ್ಲಿ ಹೆಜ್ಜೆಗೊಂದರಂತೆ ಸುರಂಗಗಳಿವೆ ಎಂದರೂ ಅತಿಶಯೋಕ್ತಿಯಲ್ಲ. ಇವುಗಳಲ್ಲಿ ಕೆಲವು ಮಾನವ ನಿಮರ್ಿತವಾದರೆ ಹಲವು ಪ್ರಾಕೃತಿಕವಾದವುಗಳು. ಹಲವು ಕಥೆಗಳನ್ನು ಹೇಳುವ ಇಲ್ಲಿಯ ಸುರಂಗಗಳು ಕುತೂಹಲಕರವೂ, ಅಷ್ಟೇ ಅಪಾಯಕಾರಿಯೂ ಹೌದು. ಎಲ್ಲಿಂದಾರಂಭವಾಗುತ್ತದೆ-ಎಲ್ಲಿ ಅಂತ್ಯಗೊಂಡಿದೆ ಎಂಬುದು ಊಹೆಗೂ ನಿಲುಕದ್ದು.ಪಾಂಡವರ ಸುರಂಗ, ದೇವ-ದೈವ ಸುರಂಗ, ವಿಭೂತಿ ಸುರಂಗ ಎಂಬಿತ್ಯಾದಿ ವೈವಿದ್ಯ ಪ್ರತೀತಿಗಳಿಂದ ಹೊಸ ತಲೆಮಾರಿಗೆ ಕುತೂಹಲ ಮೂಡಿಸುತ್ತದೆ. ಯತೇಚ್ಚ ಜಲ ಲಭ್ಯತೆಯಿರುವ ಹಲವು ಸುರಂಗಗಳಾದರೆ ಮತ್ತೆ ಕೆಲವು ಖಾಲಿಯಾಗಿ ಭಯ ಹುಟ್ಟಿಸಿ ನುಗೂಢತೆಯನ್ನು ಬಿಂಬಿಸುತ್ತದೆ. ಕೆಲವು ಸುರಂಗಗಳಲ್ಲಿ ನಿಧಿಯಿದೆಯೆಂಬ ವದಂತಿಯಿಂದ ದಶಕಗಳ ಹಿಂದೆ ತೆಗೆಯುವ ಕುಕೃತ್ಯಗಳ ಪ್ರಯತ್ನ ನಡೆದು ವಿಫಲವಾಗಿರುವುದೂ ಕಂಡುಬಂದಿದೆ.
 




  

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries