ಯಕ್ಷ ನುಡಿ ಸರಣಿಯ 9ನೇ ಕಾರ್ಯಕ್ರಮ 22 ರಂದು ಬೇಕೂರಿನಲ್ಲಿ
0
ಡಿಸೆಂಬರ್ 12, 2018
ಉಪ್ಪಳ: ಕಾಸರಗೋಡಿನ ಸಿರಿಚಂದನ ಕನ್ನಡ ಯುವ ಬಳಗದ ಯಕ್ಷನುಡಿ ಸರಣಿ ಮನೆ-ಮನೆ ಅಭಿಯಾನದ 9ನೇ ಕಾರ್ಯಕ್ರಮ ಮತ್ತು ಕನ್ನಡ ಜಾಗೃತಿ ಉಪನ್ಯಾಸ ಡಿ.22 ರಂದು ಅಪರಾಹ್ನ 1.30 ರಿಂದ ಬೇಕೂರು ಸಮೀಪದ ಅಗರ್ತಿಮೂಲೆ ಗೀತಾ ಅವರ ಸ್ವಗೃಹದಲ್ಲಿ ಆಯೋಜಿಸಲಾಗಿದೆ.
ಸಿರಿಚಂದನ ಕನ್ನಡ ಯುವ ಬಳಗದ ಕೋಶಾಧಿಕಾರಿ ವಿನೋದ್ ಕುಮಾರ್ ಸಿ.ಎಚ್. ಅವರ ಅಧ್ಯಕ್ಷತೆಯಲ್ಲಿ ನಡೆಯುವ ಕಾರ್ಯಕ್ರಮವನ್ನು ಸಾರ್ವಜನಿಕ ಶಿಕ್ಷಣ ಇಲಾಖೆಯ ನಿವೃತ್ತ ಅಧೀಕ್ಷಕ ಕೇಶವಪ್ರಸಾದ್ ಕುಳಮರ್ವ ಉದ್ಘಾಟಿಸುವರು. ಸಿರಿಚಂದನ ಯುವ ಬಳಗದಸದಸ್ಯೆ, ಆದೂರು ಸರಕಾರಿ ಹೈಯರ್ ಸೆಕೆಂಡರಿ ಶಾಲಾ ಶಿಕ್ಷಕಿ ತಾಹಿರಾ ಎಂ. ಕನ್ನಡ ಜಾಗೃತಿ ಉಪನ್ಯಾಸ ನೀಡುವರು. ಯಕ್ಷಗಾನ ನಾಟ್ಯಗುರು ರಾಮ ಸಾಲ್ಯಾನ್ ಮಂಗಲ್ಪಾಡಿ, ಅಗರ್ತಿಮೂಲೆ ಶ್ರೀಅಯ್ಯಪ್ಪ ಭಜನಾ ಮಂದಿರದ ಗೌರವಾಧ್ಯಕ್ಷ ಸಿದ್ದಪ್ಪ ಅಗರ್ತಿಮೂಲೆ, ಮುಖ್ಯ ಅತಿಥಿಗಳಾಗಿ ಉಪಸ್ಥಿತರಿರುವರು. ಗೀತಾ ಅಗರ್ತಿಮೇಲೆ, ಸಿರಿಚಂದನ ಕನ್ನಡ ಯುವ ಬಳಗದ ಅಧ್ಯಕ್ಷ ರಕ್ಷಿತ್ ಪಿ.ಎಸ್.ಉಪಸ್ಥಿತರಿರುವರು. ಸಿರಿಚಂದನ ಕನ್ನಡ ಯುವ ಬಳಗದ ಮಾರ್ಗದರ್ಶಕ, ಕಾಸರಗೋಡು ಸರಕಾರಿ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಡಾ.ರತ್ನಾಕರ ಮಲ್ಲಮೂಲೆ ಪ್ರಾಸ್ತಾವಿಕವಾಗಿ ಮಾತನಾಡುವರು. ಹರೀಶ್ ಮಂಗಲ್ಪಾಡಿ, ಸುಜಾತಾ ಸಿ.ಎಚ್, ಶಿವಕುಮಾರ್ ಅಗರ್ತಿಮೂಲೆ, ಕಾವ್ಯಾ, ಯಕ್ಷಿತಾ, ಸುಜಿತ್ ಕುಮಾರ್ ಉಪ್ಪಳ ಮೊದಲಾದವರು ಸಹಕರಿಸುವರು.
ಉದ್ಘಾಟನಾ ಸಮಾರಂಭದ ಬಳಿಕ ಬಳಗದ ಕಲಾವಿದರಿಂದ ಭೀಷ್ಮ ವಿಜಯ ಪ್ರಸಂಗದಯಕ್ಷಗಾನ ತಾಳಮದ್ದಳೆ ಪ್ರಸ್ತುತಿಗೊಳ್ಳಲಿದೆ. ಸಂದೇಶ್ ಪಂಜತ್ತೊಟ್ಟಿ, ಶಂಕರ ಕಾಮತ್ ಚೇವಾರು, ಶಿವರಾಮ ಆಚಾರ್ಯ ಧರ್ಮತ್ತಡ್ಕ ಹಿಮ್ಮೇಳದಲ್ಲಿ ಸಹಕರಿಸುವರು. ಮುಮ್ಮೇಳದಲ್ಲಿ ಡಾ.ರತ್ನಾಕರ ಮಲ್ಲಮೂಲೆ, ನವೀನ ಕುಂಟಾರು, ಶ್ರದ್ದಾ ಭಟ್ ನಾಯರ್ಪಳ್ಳ, ಮಣಿಕಂಠ ಪಾಂಡಿಬಯಲು, ಕಾರ್ತಿಕ್ ಪಡ್ರೆ ಮೊದಲಾದವರು ಭಾಗವಹಿಸುವರು.

