ಮುಳಿಯಾರಿನಲ್ಲಿ ಇಂದು-ನಾಳೆ ಷಷ್ಠೀ ಉತ್ಸವ
0
ಡಿಸೆಂಬರ್ 12, 2018
ಮುಳ್ಳೇರಿಯ: ಮುಳಿಯಾರು ಶ್ರೀ ಸುಬ್ರಹ್ಮಣ್ಯ ಸ್ವಾಮೀ ಕ್ಷೇತ್ರದಲ್ಲಿ ಇಂದು ಹಾಗೂ ನಾಳೆ ವಿವಿಧ ಕಾರ್ಯಕ್ರಮಗಳೊಂದಿಗೆ ಷಷ್ಠೀ ಮಹೋತ್ಸವ ಜರಗಲಿದೆ.
ಇಂದು ಬೆಳಿಗ್ಗೆ ಅಭಿಷೇಕ, ಗಣಹೋಮ, ನವಕಾಭಿಷೇಕ, 10 ರಿಂದ ಭಕ್ತಿಗಾನ ಸುಧಾ ಕಾರ್ಯಕ್ರಮ, 10.30 ರಿಂದ ತುಲಾಭಾರ ಸೇವೆ, ಮಧ್ಯಾಹ್ನ 12 ರಿಂದ ಮಹಾಪೂಜೆ, ಅನ್ನದಾನ, ಸಂಜೆ 6 ರಿಂದ ತಾಯಂಬಕ, ರಾತ್ರಿ 7 ಕ್ಕೆ ಮಹಾಪೂಜೆ, ಶ್ರೀ ಭೂತಬಲಿ, ಕೋಟೂರು ಕಟ್ಟೆ ಸವಾರಿ, 9 ರಿಂದ ಯಕ್ಷಗಾನ ಬಯಲಾಟ, ಡಿ.14 ರಂದು ಬೆಳಗ್ಗೆ 10 ರಿಂದ ದರ್ಶನ ಬಲಿ, ಬಟ್ಟಲು ಕಾಣಿಕೆ, ಮಹಾಪೂಜೆ, ಮಂತ್ರಾಕ್ಷತೆ, ಅನ್ನದಾನ, ಶ್ರೀವಿಷ್ಣುಮೂರ್ತಿ ದೈವದ ಕೋಲ, ರಾತ್ರಿ 7 ರಿಂದ ಶ್ರೀರಂಗ ಪೂಜೆ, 9.30 ರಿಂದ ಯಕ್ಷಗಾನ ಬಯಲಾಟ ಜರಗಲಿದೆ.

