HEALTH TIPS

ಮಿನಿ ಸಮರ ಮುಗಿಯಿತು- ಆತ್ಮಾವಲೋಕನಕ್ಕಿಳಿದ ಕಮಲ ಪಡೆ

ಹೊಸದಿಲ್ಲಿ: ಪಂಚ ರಾಜ್ಯ ಚುನಾವಣೆಯಲ್ಲಿ ಭಾರಿ ಹಿನ್ನಡೆ ಅನುಭವಿಸಿದ ಬಿಜೆಪಿ ಗುರುವಾರ ಎರಡು ಸುತ್ತಿನಲ್ಲಿ ಸೋಲಿನ ಆತ್ಮಾವಲೋಕನ ನಡೆಸಿದೆ ಮತ್ತು 2019ರ ಲೋಕಸಭಾ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಇಡಬೇಕಾದ ಹೆಜ್ಜೆಗಳ ಬಗ್ಗೆ ಚರ್ಚಿಸಿದೆ. ಗುರುವಾರ ಬೆಳಿಗ್ಗೆ ಸಂಸತ್ ಭವನದಲ್ಲಿ ಸಂಸದೀಯ ಪಕ್ಷ ಸಭೆ ನಡೆದರೆ, ಬಳಿಕ ಬಿಜೆಪಿ ರಾಜ್ಯ ಮುಖ್ಯಸ್ಥರ ಸಭೆ ನಡೆಯಿತು. ಎರಡೂ ಸಭೆಗಳಲ್ಲಿ ಗ್ರಾಮೀಣ ಭಾರತದ ಕಡೆಗೆ ಪಕ್ಷ ಫೋಕಸ್ ಮಾಡಬೇಕೆಂಬ ಬೇಡಿಕೆ ಕೇಳಿಬಂತು. ಸಂಸದೀಯ ಪಕ್ಷ ಸಭೆಯಲ್ಲಿ ನರೇಂದ್ರ ಮೋದಿ, ಅಮಿತ್ ಶಾ, ಎಲ್.ಕೆ. ಆಡ್ವಾಣಿ ಸಹಿತ ಹಿರಿಯ ಸಂಸದರು ಭಾಗವಹಿಸಿದ್ದರು. ರಾಜ್ಯಗಳ ಅಧ್ಯಕ್ಷರು ಮತ್ತು ರಾಜ್ಯಗಳ ಉಸ್ತುವಾರಿಗಳ ಸಭೆಯ ನೇತೃತ್ವವನ್ನು ಅಮಿತ್ ಶಾ ವಹಿಸಿದ್ದರು. ಧೈರ್ಯ ತುಂಬಿದ ಮೋದಿ: ಸಂಸದೀಯ ಪಕ್ಷ ಸಭೆಯಲ್ಲಿ ಮಾತನಾಡಿದ ಪ್ರಧಾನಿ ಮೋದಿ ಅವರು, ಮೂರು ರಾಜ್ಯಗಳ ಸೋಲಿನಿಂದ ಕಂಗೆಡಬೇಕಾಗಿಲ್ಲ ಎಂದು ಧೈರ್ಯ ತುಂಬಿದರು. ಜತೆಗೆ 2019ರ ಚುನಾವಣೆಗೆ ಪಕ್ಷ ಇನ್ನಷ್ಟು ಹುರುಪಿನಿಂದ ಕೆಲಸ ಮಾಡಬೇಕು ಎಂದು ಸಲಹೆ ನೀಡಿದರು. ರಾಜೀನಾಮೆ ಒಪ್ಪದ ಶಾ: ಮಧ್ಯಪ್ರದೇಶದಲ್ಲಿ ಪಕ್ಷದ ಸೋಲಿಗೆ ಹೊಣೆ ಹೊತ್ತು ಪದತ್ಯಾಗ ಮಾಡಿದ ಬಿಜೆಪಿ ರಾಜ್ಯಾಧ್ಯಕ್ಷ ರಾಕೇಶ್ ಸಿಂಗ್ ಅವರ ರಾಜೀನಾಮೆಯನ್ನು ಅಮಿತ್ ಶಾ ಸ್ವೀಕರಿಸಲಿಲ್ಲ. ಇನ್ನಷ್ಟು ಪರಿಶ್ರಮದಿಂದ ದುಡಿಯೋಣ ಎಂದು ಹುರಿದುಂಬಿಸಿ ಕಳುಹಿಸಿದರು. ತಂತ್ರಗಳೇನು? ಸೋಲಿನಿಂದ ಕಂಗೆಡದಂತೆ ಬಿಜೆಪಿ ಕಾರ್ಯಕರ್ತರಲ್ಲಿ ಧೈರ್ಯ ತುಂಬುವುದು., ಗ್ರಾಮೀಣ ಭಾಗದಲ್ಲಿ ಪಕ್ಷವನ್ನು ಇನ್ನಷ್ಟು ಶಕ್ತಿಶಾಲಿಯಾಗಿ ಬೆಳೆಸುವುದು, ರೈತರ ಸಾಲ ಮನ್ನಾ ಸೇರಿದಂತೆ ಜನಪ್ರಿಯ ಕಾರ್ಯಕ್ರಮ ಘೋಷಣೆ ಚರ್ಚೆ. ಜ.11ಕ್ಕೆ ಕಾರ್ಯಕಾರಿಣಿ: ಲೋಕಸಭಾ ಚುನಾವಣೆಯ ರೂಪುರೇಷೆ, ಕಾರ್ಯತಂತ್ರಗಳ ಬಗ್ಗೆ ಚರ್ಚಿಸಲು 2019ರ ಜನವರಿ 11ರಂದು ಬಿಜೆಪಿ ಕಾರ್ಯಕಾರಿಣಿ ಸಭೆ ಆಯೋಜಿಸಲಾಗಿದೆ. ಅಮಿತ್ ಶಾ ನೇತೃತ್ವದ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries