ಸುದ್ದಿ ಆಗದ ಚಿತ್ರಗಳು
0
ಡಿಸೆಂಬರ್ 14, 2018
ಕೆಲವೊಂದು ಘಟನೆಗಳು ಕೆಲವರಿಗೆ ದುಃಖಕರವಾಗಿದ್ದರೆ, ಮತ್ತೆ ಹಲವರಿಗೆ ಪರೋಕ್ಷವಾದ ಖುಷಿಯನ್ನು ನೀಡುತ್ತಿರುವುದನ್ನು ಕಂಡಿರುತ್ತೇವೆ. ಮೊನ್ನೆ ಡಿ.7ರಂದು ಹೀಗೊಂದು ಘಟನೆ ನಡೆದಿತ್ತು. ಪೈವಳಿಕೆ ಸಮೀಪದ ಅಟ್ಟೆಗೋಳಿ ಎಂಬ ರಸ್ತೆ ತಿರುವಿನಲ್ಲಿ ಕಲ್ಲಂಗಡಿ ಹೇರಿಕೊಂಡು ಸಾಗುತ್ತಿದ್ದ ಟೆಂಪೋ ಮುಗುಚಿ ಹಾನಿಯುಂಟಾಯಿತು. ಜೀವಾಪಾಯಗಳು ಸಂಭವಿಸದಿದ್ದರೂ, ಟೆಂಪೋದಲ್ಲಿದ್ದ ಕಲ್ಲಂಗಡಿಗಳು ರಸ್ತೆಯಲ್ಲಿ ತುಂಡರಿಸಲ್ಪಟ್ಟು ಹರಡಿ ಬಿದ್ದಿದ್ದವು. ಮೊದಲೇ ಸುಡು ಬಿಸಿಲ ಬೇಸಗೆ. ಇನ್ನು ರಸ್ತೆಯಲ್ಲಿ ಚೆಲ್ಲಿದ್ದ ಹೊಟ್ಟೆ ತಂಪಾಗಿಸುವ ಕಲ್ಲಂಗಡಿ ಅನಾಥವಾಗಿಡಲು ಜನರು ಬಯಸಿಯಾರೇ!? ಎತ್ಕೊಂಡು ಒಯ್ದದ್ದೇ ಒಯ್ದದ್ದು ಮಾರ್ರೆ....ಅರ್ಧಗಂಟೆಯಲ್ಲಿ ಅಲ್ಲಿ ಕಲ್ಲಂಗಡಿ ಟೆಂಪೋ ಮಗುಚಿತ್ತೆಂಬುದರ ಕುರುಹೂ ಇರಲಿಲ್ಲವಂತೆ!



