HEALTH TIPS

ದಾದಾ ಸಾಹೇಬ್ ಫಾಲ್ಕೆ ಪುರಸ್ಕೃತ ಮೃಣಾಲ್ ಸೇನ್ ಇನ್ನಿಲ್ಲ

         
         ದೆಹಲಿ: ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಪುರಸ್ಕೃತ ಚಿತ್ರ ನಿರ್ದೇಶಕ ಮೃಣಾಲ್ ಸೇನ್(95) ಭಾನುವಾರ ನಿಧನರಾದರು.
            "ಏಕ್ ದಿನ್ ಅಚಾನಕ್", "ಪದಾತಿಕ್", "ಮೃಗಯಾ " ದಂತಹಾ ಪ್ರಸಿದ್ದ ಚಿತ್ರಗಳನ್ನು ನೀಡಿದ್ದ ಸೇನ್ ಭೌನಿಪೋರ್ ನಿವಾಸದಲ್ಲಿ ನಿಧನರಾದರು ಎಂದು ಎ ಎನ್ ಐ ಸುದ್ದಿಸಂಸ್ಥೆ ವರದಿ ಮಾಡಿದೆ.
       ಕಳೆದ ವರ್ಷವಷ್ಟೇ  ಅವರ ಪತ್ನಿ ನಿಧನರಾಗಿದ್ದÀರು. ಮತ್ತು ಅವರ ಏಕೈಕ ಪುತ್ರ ಕುನಾಲ್ ಸೇನ್ ಅವರು ಚಿಕಾಗೋದಲ್ಲಿ ನೆಲೆಸಿದ್ದಾರೆ.  2003 ರಲ್ಲಿ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿತ್ತು.
      ಅವರ ಸಮಕಾಲೀನರಾದ ಸತ್ಯಜಿತ್ ರೇ ಮತ್ತು ರಿತ್ವಿಕ್ ಘಾಟಕ್ ಅವರೊಂದಿಗೆ, ಅವರು ಜಾಗತಿಕ ಹಂತದಲ್ಲಿ ಬಂಗಾಳಿ ಸಮಾನಾಂತರ ಸಿನಿಮಾದ ಮಹಾನ್ ರಾಯಭಾರಿಗಳಲ್ಲಿ ಒಬ್ಬರಾಗಿ ಗುರುತಿಸಿಕೊಂಡಿದ್ದರು.
    ಚಿತ್ರನಿರ್ದೇಶಕ ಮೃಣಾಲ್ ಸೇನ್ ಇನ್ನಿಲ್ಲ
ಭಾರತದ ಹೊಸ ಅಲೆಯ ಸಿನಿಮಾಗಳ ಸಂದರ್ಭದಲ್ಲಿ ಸತ್ಯಜಿತ್ ರೇ, ಋತ್ವಿಕ್ ಘಟಕ್ ಅವರೊಂದಿಗೆ ಗುರುತಿಸಬಹುದಾದ ಮತ್ತೊಬ್ಬ ಪ್ರಮುಖ ಬೆಂಗಾಲಿ ನಿರ್ದೇಶಕ ಮೃಣಾಲ್ ಸೇನ್. ಇಂದು ಅವರು (95 ವರ್ಷ) ಅಗಲಿದ್ದಾರೆ. ಉತ್ತಮ್ ಕುಮಾರ್ ನಟಿಸಿದ್ದ 'ರಾತ್ ಭೋರೆ’ (1955) ಮೃಣಾಲ್ ಸೇನ್ ನಿರ್ದೇಶನದ ಚೊಚ್ಚಲ ಬೆಂಗಾಲಿ ಸಿನಿಮಾ. ಆಗಿನ್ನೂ ಸ್ಟಾರ್ ಆಗಿರದ ಉತ್ತಮ್ ಕುಮಾರ್ ಅಭಿನಯದ ಚಿತ್ರ ಬಾಕ್ಸ್ ಆಫೀಸ್‌ನಲ್ಲಿ ವಿಫಲವಾಗಿತ್ತು. ನಿರ್ದೇಶನದ ಎರಡನೇ ಸಿನಿಮಾದಲ್ಲಿ (ನೀಲ್ ಅಕಶೇರ್ ನೀಛೇ) ಪ್ರೇಕ್ಷಕರು ಮೃಣಾಲ್‌ರನ್ನು ಗುರುತಿಸಿದರು. ನಿರ್ದೇಶನದ ಮೂರನೇ ಸಿನಿಮಾ 'ಬೈಶೇ ಶ್ರಾವಣ್' ಅವರಿಗೆ ಅಂತಾರಾಷ್ಟ್ರೀಯ ಮನ್ನಣೆ ದೊರಕಿಸಿಕೊಟ್ಟಿತು. ನಂತರ ಅವರು ನಿರ್ದೇಶಿಸಿದ 'ಭುವನ್ ಶೋಮ್’ ಭಾರತೀಯ ಹೊಸ ಅಲೆಯ ಸಿನಿಮಾಗಳ ಯಾದಿಯಲ್ಲಿ ಅತ್ಯಂತ ಪ್ರಮುಖ ಚಿತ್ರವೆಂದು ಗುರುತಿಸಿಕೊಂಡಿತು. ಬೆಂಗಾಲಿ ನಿರ್ದೇಶಕರಾದ ಸತ್ಯಜಿತ್ ರೇ ಮತ್ತು ಋತ್ವಿಕ್ ಘಟಕ್ ಅವರ ಜೊತೆ ಮೃಣಾಲ್ ಅವರೂ ಭಾರತೀಯ ಹೊಸ ಅಲೆಯ ಪ್ರಮುಖ ನಿರ್ದೇಶಕರಾಗಿ ಗುರುತಿಸಿಕೊಂಡರು.
ಅಂತಾರಾಷ್ಟ್ರೀಯ ಮಟ್ಟದಲ್ಲಿ ಮೃಣಾಲ್ ಸಿನಿಮಾಗಳು ಭಾರತೀಯ ಚಿತ್ರರಂಗವನ್ನು ಪ್ರತಿನಿಧಿಸತೊಡಗಿದವು. ಸಮಾಜದ ವಾಸ್ತವಗಳನ್ನು ತೆರೆಯ ಮೇಲೆ ಕಲಾತ್ಮಕವಾಗಿ ಕಟ್ಟಿಕೊಡುವ ನಿರ್ದೇಶಕನೆಂದು ಅವರು ಹೆಸರಾದರು. ಮಾರ್ಕ್ಸ್ ಸಿದ್ಧಾಂತವನ್ನು ಪ್ರತಿಪಾದಿಸುವ ಮೃಣಾಲ್ ಸೇನ್ ತಮ್ಮ ಚಿತ್ರಗಳಲ್ಲೂ ಈ ನಿಲುವುಗಳನ್ನು ದಾಟಿಸಿದರು. ತಮ್ಮ ಬಹುಪಾಲು ಸಿನಿಮಾಗಳಲ್ಲಿ ಮೃಣಾಲ್ ಕೊಲ್ಕೊತ್ತಾವನ್ನು ಒಂದು ಪಾತ್ರ, ಪ್ರೇರಣೆಯಂತೆ ತೋರಿಸಿದರು. ಭಾರತದಲ್ಲಿ ರಾಜಕೀಯ ಸ್ಥಿತ್ಯಂತರಗಳು ನಡೆಯುತ್ತಿದ್ದ ಸಂದರ್ಭದಲ್ಲಿ ಮೃಣಾಲ್ ಸೇನ್ ಸಿನಿಮಾಗಳು ಜನಸಾಮಾನ್ಯರ ಮೇಲೆ ದೊಡ್ಡ ಪರಿಣಾಮ ಉಂಟುಮಾಡಿದ್ದು ಹೌದು. ಅವರ ಹಲವಾರು ಸಿನಿಮಾಗಳಿಗೆ ರಾಷ್ಟ್ರಪ್ರಶಸ್ತಿ ಗೌರವ ಸಿಕ್ಕಿದೆ. ಪದ್ಮಭೂಷಣ ದಾದಾ ಸಾಹೇಬ್ ಫಾಲ್ಕೆ ಸೇರಿದಂತೆ ಹಲವಾರು ಅಂತಾರಾಷ್ಟ್ರೀಯ ಪ್ರಶಸ್ತಿಗಳಿಗೆ ಮೃಣಾಲ್ ಸೇನ್ ಪಾತ್ರರಾಗಿದ್ದಾರೆ.

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries