HEALTH TIPS

ಪಂಚರಾಜ್ಯ ಚುನಾವಣಾ ಫಲಿತಾಂಶ: ಕೈಗೆ ಬಂತು ಶಕ್ತಿ; ಮುದುಡಿತು ಕಮಲ

ಹೊಸದಿಲ್ಲಿ: 2019ರ ಲೋಕಸಭಾ ಚುನಾವಣೆಯ ಸೆಮಿಫೈನಲ್ ಎಂದೇ ಪರಿಗಣಿತವಾದ ಪಂಚ ರಾಜ್ಯ ಚುನಾವಣೆಯಲ್ಲಿ ಕಾಂಗ್ರೆಸ್ ಫೀನಿಕ್ಸ್‍ನಂತೆ ಎದ್ದು ನಿಂತು ಬಿಜೆಪಿಗೆ ಎಚ್ಚರಿಕೆ ನೀಡಿದೆ. ದೇಶದ ಹೃದಯ ಎಂದೇ ಪರಿಗಣಿತವಾದ ರಾಜಸ್ಥಾನ, ಮಧ್ಯಪ್ರದೇಶ, ಛತ್ತೀಸ್‍ಗಢದಲ್ಲಿ ಬಿಜೆಪಿ ಸರಕಾರ ಪತನಗೊಂಡು ಕಾಂಗ್ರೆಸ್ ವಿಜೃಂಭಿಸಿದೆ. ತ್ಥೆಲಂಗಾಣದಲ್ಲಿ ಕೆ. ಚಂದ್ರಶೇಖರ ರಾವ್ ಅವರ ಟಿಆರ್‍ಎಸ್ ಭರ್ಜರಿ ಬಹುಮತದೊಂದಿಗೆ ಮರಳಿ ಚುಕ್ಕಾಣಿ ಹಿಡಿದಿದೆ. ಮಿಜೋರಾಂನಲ್ಲಿ ಎಂಎನ್‍ಎಫ್ ಗೆಲುವು ಸಾಧಿಸಿದ್ದು, ಕಾಂಗ್ರೆಸ್ ಪಾಲಿಗೆ ಈಶಾನ್ಯದ ಕೊನೆಯ ಬಾಗಿಲು ಮುಚ್ಚಿದಂತಾಗಿದೆ. ನರೇಂದ್ರ ಮೋದಿ-ಅಮಿತ್ ಶಾ ಸಾರಥ್ಯದಲ್ಲಿ ನಾಲ್ಕು ವರ್ಷಗಳಲ್ಲಿ ವಿಜೃಂಭಿಸಿದ ಜೈತ್ರಯಾತ್ರೆಗೆ ಈ ಫಲಿತಾಂಶ ತಡೆ ಒಡ್ಡಿದೆ. ಜತೆಗೆ ಎನ್‍ಡಿಎಯನ್ನು ಮಣಿಸಲು ರೂಪುಗೊಳ್ಳುತ್ತಿರುವ ಕಾಂಗ್ರೆಸ್ ನೇತೃತ್ವದ ಮಹಾಘಟಬಂಧನ್‍ಗೆ ಮಹಾ ಬಲ ತುಂಬಿದೆ. ಮೋದಿಗೆ ಮಹಾ ಸವಾಲು: 2019ರ ಲೋಕಸಭಾ ಚುನಾವಣೆಯನ್ನು ಸರಾಗವಾಗಿ ಗೆಲ್ಲುವ ಮೋದಿ-ಶಾ ಕನಸಿಗೆ ಪಂಚ ರಾಜ್ಯ ಫಲಿತಾಂಶ ಬಹುದೊಡ್ಡ ಸವಾಲು. 2014ರಲ್ಲಿ ಮಧ್ಯಪ್ರದೇಶ, ರಾಜಸ್ಥಾನ, ಛತ್ತೀಸ್‍ಗಢದ 65 ಕ್ಷೇತ್ರಗಳ ಪೈಕಿ ಬಿಜೆಪಿ 62ನ್ನು ಗೆದ್ದಿತ್ತು. ಈ ಬಾರಿ ಸಮಬಲದ ಹೋರಾಟ ಕಮಲ ಪಾಳಯಕ್ಕೆ ನಡುಕ ಹುಟ್ಟಿಸಿದೆ. 80ರಲ್ಲಿ 72 ಸ್ಥಾನಗಳನ್ನು ಗೆದ್ದ ಉತ್ತರ ಪ್ರದೇಶದಲ್ಲೂ ಎಸ್‍ಪಿ-ಬಿಎಸ್‍ಪಿ ಮೈತ್ರಿಕೂಟ ಬಿಜೆಪಿಗೆ ಪ್ರಬಲ ಎದುರಾಳಿಯಾಗಲಿದೆ. ಕೆಲವು ಪಕ್ಷಗಳು ಬಿಜೆಪಿಯಿಂದ ದೂರಾಗುವ ಆತಂಕವಿದೆ. ರಾಹುಲ್ ನಾಯಕತ್ವಕ್ಕೆ ಬಲ: 2017ರ ಅಂತ್ಯದಲ್ಲಿ ನಡೆದ ಗುಜರಾತ್ ಚುನಾವಣೆಯಲ್ಲೇ ಬಿಜೆಪಿಗೆ ಎಚ್ಚರಿಕೆ ಕರೆಗಂಟೆಯಾಗಿದ್ದ ಕಾಂಗ್ರೆಸ್ ಬಲವರ್ಧನೆ 2018ರ ಅಂತ್ಯಕ್ಕೆ ಮೂರು ರಾಜ್ಯಗಳನ್ನು ಗೆದ್ದುಕೊಳ್ಳುವಷ್ಟು ಶಕ್ತಿಶಾಲಿಯಾಗಿದೆ. ಇದು ಸರಿಯಾಗಿ ವರ್ಷದ ಹಿಂದೆ ಕಾಂಗ್ರೆಸ್ ಚುಕ್ಕಾಣಿ ಹಿಡಿದ ರಾಹುಲ್ ಗಾಂಧಿ ಸಾರಥ್ಯಕ್ಕೆ ಬಲ ತುಂಬಿದೆ. ಜತೆಗೆ ಸಂಪೂರ್ಣವಾಗಿ ಕುಗ್ಗಿ ಹೋಗಿದ್ದ ರಾಷ್ಟ್ರೀಯ ಪಕ್ಷಕ್ಕೆ ಮಹಾಮೈತ್ರಿಕೂಟದ ನಾಯಕತ್ವ ವಹಿಸುವ ತಾಕತ್ತನ್ನೂ ತುಂಬಿದೆ. ಜತೆಗೆ ಹಲವು ಪಕ್ಷಗಳು ಕೂಟವನ್ನು ಸೇರುವ ಸಾಧ್ಯತೆ ಇದೆ. *ನಾಲ್ಕು ರಾಜ್ಯಗಳಲ್ಲಿ ಆಡಳಿತ ವಿರೋಧಿ ಅಲೆ *ಅವಧಿಪೂರ್ವ ಚುನಾವಣೆ ಘೋಷಿಸಿದರೂ ಮಹಾ ವಿಕ್ರಮ ಮೆರೆದ ಕೆಸಿಆರ್ *ಛತ್ತೀಸ್‍ಗಢದಲ್ಲಿ ಕಾಂಗ್ರೆಸ್‍ಗೆ 75% ಸ್ಥಾನ, 15 ವರ್ಷಗಳ ಬಿಜೆಪಿ ಅಧಿಕಾರಕ್ಕೆ ತೆರೆ *ದಿನವಿಡೀ ಉಸಿರು ಬಿಗಿಹಿಡಿದು ತುದಿಗಾಲಲ್ಲಿ ನಿಲ್ಲಿಸಿದ ಮ.ಪ್ರದೇಶ ಥ್ರಿಲ್ಲರ್ * ಬಹುತೇಕ ನಿಜವಾದ ಮತಗಟ್ಟೆ ಸಮೀಕ್ಷೆ ಪಂಚ ರಾಜ್ಯ ಚುನಾವಣಾ ಫಲಿತಾಂಶಗಳು: ಮುಖ್ಯಾಂಶಗಳು *ರಾಜಸ್ಥಾನ ಕಾಂಗ್ರೆಸ್ ಅಧ್ಯಕ್ಷ ಸಚಿನ್ ಪೈಲಟ್ ಟೋಂಕ್ ಕ್ಷೇತ್ರದಲ್ಲಿ ಗೆಲುವು ಸಾಧಿಸಿದ್ದು, ಸಮೀಪದ ಎದುರಾಳಿ ಬಿಜೆಪಿಯ ಯೂನುಸ್ ಖಾನ್ ಅವರನ್ನು 54,179 ಮತಗಳಿಂದ ಸೋಲಿಸಿದ್ದಾರೆ. *ಹಾಲಿ ಸಿಎಂ ವಸುಂಧರಾ ರಾಜೇ ಗೆಲುವು ದಾಖಲಿಸಿದ್ದಾರೆ. *ಕಾಂಗ್ರೆಸ್‍ನ ಅಶೋಕ್ ಗೆಹ್ಲೋಟ್ ಸರ್ದಾರ್‍ಪುರದಿಂದ ಸ್ಪರ್ಧಿಸಿದ್ದು ಗೆಲುವಿನ ನಗೆ ಬೀರಿದ್ದಾರೆ. ರಾಜಸ್ಥಾನ: ಪಕ್ಷೇತರರೊಂದಿಗೆ ಸಚಿನ್ ಪೈಲಟ್ ಮಾತುಕತೆ ಅಭಿವೃದ್ಧಿ ಕೆಲಸ ಸೋಲಿಗೆ ಕಾರಣವಾಯ್ತು: ಬಿಜೆಪಿ ನಾಯಕ ಸಂಜಯ್ ಕಾಕಡೆ ತೆಲಂಗಾಣ: ಮುಖ್ಯಾಂಶಗಳು: ತೆಲಂಗಾಣ ಮುಖ್ಯಮಂತ್ರಿಯಾಗಿ ಕೆಸಿಆರ್ ಬುಧವಾರ ಪ್ರಮಾಣ ವಚನ ಸ್ವೀಕರಿಸುವ ಸಾಧ್ಯತೆಗಳಿವೆ. ಹೈದರಾಬಾದ್: ಎಐಎಂಐಎ ನಾಯಕ ಅಕ್ಬರುದ್ದೀನ್ ಓವೈಸಿ ಚಂದ್ರಯಾನಗುಟ್ಟಾ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಗೆಲುವು ದಾಖಲಿಸಿದ್ದಾರೆ. ಮಧ್ಯಪ್ರದೇಶ ಮುಖ್ಯಾಂಶಗಳು: *ಮಧ್ಯಪ್ರದೇಶದಲ್ಲಿ ಒಟ್ಟು ಮತದಾನದ ಶೇ. 1.5ರಷ್ಟು ಅಂದರೆ 1.5 ಲಕ್ಷ ನೋಟಾ ಮತಗಳ ಚಲಾವಣೆಗೊಂಡಿದೆ. ಮಧ್ಯಪ್ರದೇಶ ಸಿಎಂ ಶಿವರಾಜ್ ಸಿಂಗ್ ಚೌಹಾಣ್ ಬುಧ್ನಿ ಕ್ಷೇತ್ರದಲ್ಲಿ ಗೆಲುವು ದಾಖಲಿಸಿದ್ದಾರೆ. ಮಧ್ಯಪ್ರದೇಶ ಅತಂತ್ರ ಸ್ಥಿತಿಯತ್ತ: ಎಲ್ಲರ ಚಿತ್ತ ರಾಜ್ಯಪಾಲರರತ್ತ ಮಧ್ಯಪ್ರದೇಶ ಕಾಂಗ್ರೆಸ್ ಸಿಎಂ ಅಭ್ಯರ್ಥಿ ಬಗ್ಗೆ ಹಾರಿಕೆಯ ಉತ್ತರ ಕೊಟ್ಟ ಜ್ಯೋತಿರಾದಿತ್ಯ ಸಿಂಧಿಯಾ ಛತ್ತೀಸ್‍ಗಢ ಮುಖ್ಯಾಂಶಗಳು: *ಛತ್ತೀಸಗಢದಲ್ಲಿ ಜಿದ್ದಾಜಿದ್ದಿನ ಪೈಪೋಟಿ; ಹಾಲಿ ಸಿಎಂ ಅಜಿತ್ ಜೋಗಿ ಗೆಲುವು. * ಅಕಲ್‍ತಾರಾ ಕ್ಷೇತ್ರದಲ್ಲಿ ಮಾಜಿ ಸಿಎಂ ಅಜಿತ್ ಜೋಗಿ ಸೊಸೆ ರಿಚಾ ಜೋಗಿ (ಬಿಎಸ್‍ಪಿ) ಮುನ್ನಡೆ. *ರಾಮ್‍ಪುರ (ಎಸ್‍ಟಿ) ಕ್ಷೇತ್ರದಲ್ಲಿ ಹಿರಿಯ ಬುಡಕಟ್ಟು ನಾಯಕ ನಾಂಕಿರಾಮ್ ಕನ್ವರ್ ಮುನ್ನಡೆ. *ವಾಜಪೇಯಿ ಅವರ ಅಣ್ಣನ ಮಗಳು ಕರುಣಾ ಶುಕ್ಲಾ ವಿರುದ್ಧ 3700 ಮತಗಳ ಅಂತರದಿಂದ ಮುನ್ನಡೆ ಕಾಯ್ದುಕೊಂಡಿರುವ ಮುಖ್ಯಮಂತ್ರಿ ರಮಣ್ ಸಿಂಗ್. "ಛತ್ತೀಸ್‍ಗಢದ ಜನತೆ ಹೋರಾಟವನ್ನು ಕೈಗೆತ್ತಿಕೊಂಡಿದ್ದಾರೆ. ರಾಹುಲ್ ಗಾಂಧಿ ಅವರಿಗೆ ನಾವು ಕೃತಜ್ಞರಾಗಿದ್ದೇವೆ. ನಾವು ಜನರಿಗಾಗಿ ಹೋರಾಟ ಮಾಡಿದ್ದೇವೆ. ನಿರೀಕ್ಷೆಗಿಂತಲೂ ಹೆಚ್ಚಿನ ಸೀಟುಗಳನ್ನು ಗೆದ್ದಿದ್ದೇವೆ. ಯಾರು ಮುಖ್ಯಮಂತ್ರಿಯಾಗಬೇಕು ಎಂಬುದನ್ನು ಹೈಕಮಾಂಡ್ ನಿರ್ಧರಿಸುತ್ತದೆ" - ಛತ್ತೀಸ್‍ಗಢ ಕಾಂಗ್ರೆಸ್ ಅಧ್ಯಕ್ಷ ಭೂಪೇಶ್ ಬಾಘೆಲ್ ಮಿಜೋರಾಂ ಮಿಜೋರಾಂ ಫಲಿತಾಂಶ ಮುಖ್ಯಾಂಶಗಳು: ''ಮಿಜೋರಾಂನಲ್ಲಿ ನಾವು ಹೊಸ ಸರಕಾರ ರಚಿಸಲಿದ್ದು, ಮದ್ಯಪಾನ ನಿಷೇಧ, ರಸ್ತೆಗಳ ದುರಸ್ತಿ ಮತ್ತು ಸಾಮಾಜಿಕ ಆರ್ಥಿಕ ಅಭಿವೃದ್ಧಿ ಕಾರ್ಯಕ್ರಮಗಳ ಅನುಷ್ಠಾನ ನಮ್ಮ ಆದ್ಯತೆಯಾಗಿರುತ್ತದೆ" - ಝೊರಾಮ್‍ತಂಗಾ, ಮಿಜೋ ನ್ಯಾಷನಲ್ ಫ್ರಂಟ್ ಅಧ್ಯಕ್ಷರು. *ಮುಖ್ಯಮಂತ್ರಿ ಲಾಲ್ ಥನ್ ಹವ್ಲಾ ಎರಡು ಕ್ಷೇತ್ರಗಳಲ್ಲಿ ಸೋಲುಂಡಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries