ವಿಜಯ್ ಮಲ್ಯ ಗಡಿಪಾರು ಆದೇಶದಿಂದ ಸಾಲ ವಾಪಸ್ ಪ್ರಕ್ರಿಯೆ ಚುರುಕು: ಎಸ್ ಬಿಐ
0
ಡಿಸೆಂಬರ್ 11, 2018
ಮುಂಬೈ: ಬ್ಯಾಂಕ್ ಗಳಿಂದ ಪಡೆದ ಸಾಲ ಮರುಪಾವತಿ ಮಾಡದೇ ಬ್ರಿಟನ್ ಗೆ ಪರಾರಿಯಾಗಿದ್ದ ವಿಜಯ್ ಮಲ್ಯ ಅವರ ಗಡಿ ಪಾರು ಆದೇಶದಿಂದ ಸಾಲ ವಾಪಸ್ ಪ್ರಕ್ರಿಯೆ ಚುರುಕು ಪಡೆಯಲಿದೆ ಎಂದು ಎಸ್ ಬಿಐ ಹೇಳಿದೆ.
ವಿಜಯ್ ಮಲ್ಯ ಬ್ಯಾಂಕ್ ಗಳಿಗೆ ಸುಮಾರು 9,000 ಕೋಟಿ ರೂಪಾಯಿ ಸಾಲ ವಾಪಸ್ ನೀಡಬೇಕಿದ್ದು, ಈ ಸಂಬಂಧ ತಲೆ ಮರೆಸಿಕೊಂಡು ವಿದೇಶದಲ್ಲಿರುವ ಗಡಿ ಪಾರಿಗೆ ಬ್ರಿಟನ್ ಮ್ಯಾಜಿಸ್ಟ್ರೇಟ್ ಕೋರ್ಟ್ ಡಿ.10 ರಂದು ಆದೇಶ ನೀಡಿತ್ತು. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಎಸ್ ಬಿಐ, ಸಾಲ ವಾಪಸ್ ಪಡೆಯುವುದು ಸಾಧ್ಯವಿದೆ, ಮಲ್ಯ ಗಡಿಪಾರು ಆದೇಶದಿಂದ ಸಿಕ್ಕಿರುವ ಸಂದೇಶ ಸ್ಪಷ್ಟವಾಗಿದ್ದು, ಯಾರು ಬೇಕಾದರೂ ಸಾಲ ವಾಪಸ್ ಮಾಡದೇ ವಿದೇಶಕ್ಕೆ ಪರಾರಿಯಾಗಲು ಸಾಧ್ಯವಿಲ್ಲ ಎಂಬ ಸ್ಪಷ್ಟ ಸಂದೇಶ ರವಾನೆಯಾಗಿದೆ, ಗಡಿಪಾರು ಆದೇಶದಿಂದ ಸಾಲ ವಾಪಸ್ ಪಡೆಯುವ ಪ್ರಕ್ರಿಯೆ ಚುರುಕಾಗಿದೆ ಎಂದು ಎಸ್ ಬಿಐ ಅಧ್ಯಕ್ಷ ರಜನೀಶ್ ಕುಮಾರ್ ಹೇಳಿದ್ದಾರೆ.




