ಇಂದು ಸಂಘಟಕ ಸಮಿತಿ ಸಭೆ
0
ಡಿಸೆಂಬರ್ 12, 2018
ಉಪ್ಪಳ: ಜಿಲ್ಲೆಯಲ್ಲಿ ನೂತನವಾಗಿ ರಚಿಸಿದ ಮಂಜೇಶ್ವರ ತಾಲೂಕು ಮಟ್ಟದ ಲೀಗಲ್ ಮೆಟ್ರೋಲಜಿ ಇನ್ಸ್ಪೆಕ್ಟರ್ ಅವರ ಕಚೇರಿಯ ಉದ್ಘಾಟನೆ ಡಿ.22ರಂದು ನಡೆಯಲಿದೆ. ರಾಜ್ಯ ನಾಗರೀಕ ಪೂರೈಕೆ ಸಚಿವ ಪಿ.ತಿಲೋತ್ತಮನ್ ಉದ್ಘಾಟಿಸುವರು. ಕಂದಾಯ ಸಚಿವ ಇ.ಚಂದ್ರಶೇಖರನ್ ಅಧ್ಯಕ್ಷತೆ ವಹಿಸುವರು. ಈ ಸಂಬಂಧ ಸಂಘಟಕ ಸಮಿತಿ ಸಭೆ ಗುರುವಾರ(ಡಿ.13ರಂದು) ಮಧ್ಯಾಹ್ನ 2 ಗಂಟೆಗೆ ಮಂಗಲ್ಪಾಡಿ ಗ್ರಾಮಪಂಚಾಯತ್ ಸಭಾಂಗಣದಲ್ಲಿ ನಡೆಯಲಿದ ಎಂದು ಕಾಸರಗೋಡು ಲೀಗಲ್ ಮೆಟ್ರೋಲಜಿ ಸಹಾಯಕ ನಿಯಂತ್ರಣಾಧಿಕಾರಿ ತಿಳಿಸಿದರು.


