ಪೆರಡಾಲ ಶಾಲೆಯಲ್ಲಿ ಕ್ರಿಸ್ಮಸ್ ಆಚರಣೆ
0
ಡಿಸೆಂಬರ್ 28, 2018
ಬದಿಯಡ್ಕ: ಶಾಂತಿದೂತ ಏಸುಕ್ರಿಸ್ತನ ಜನ್ಮದಿನ ಕ್ರಿಸ್ಮಸ್ ಹಬ್ಬವನ್ನು ಪೆಡಾಲ ಶಾಲೆಯಲ್ಲಿ ವಿವಿಧ ಕಾರ್ಯಕ್ರಮಗಳೊಂದಿಗೆ ಆಚರಿಸಲಾಯಿತು.
ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಅಬ್ದುಲ್ ರಹಿಮಾನ್ ಅನ್ನಡ್ಕ ಉದ್ಘಾಟಿಸಿದರು. ಶಿಕ್ಷಕರಾದ ಪ್ರಮೋದ್ ಕುಮಾರ್, ಚಂದ್ರಶೇಖರ, ಜಯಲತಾ, ಸಿಜಿಥಾಮಸ್ ಸಹಕರಿಸಿದರು. ಬ್ಲೆಸನ್ ಮೇಥ್ಯು ಸಾಂತಾಕ್ಲೂಸ್‍ನಾಗಿ ರಂಜಿಸಿದರು. ಕೇಕ್ ಕತ್ತರಿಸಿ ವಿತರಿಸಲಾಯಿತು. ಕ್ರಿಸ್ಮಸ್ ಗೋದಲಿ ರಚಿಸಲಾಯಿತು.
ಮುಖ್ಯ ಶಿಕ್ಷಕ ರಾಜಗೋಪಾಲ ಸ್ವಾಗತಿಸಿ, ರೀಶಾದ್ ವಂದಿಸಿದರು.





