ಮುಳಿಯಾರು ಶ್ರೀ ಸುಬ್ರಹ್ಮಣ್ಯ ಸ್ವಾಮೀ ಕ್ಷೇತ್ರದಲ್ಲಿ ಷಷ್ಠಿ ಉತ್ಸವ
0
ಡಿಸೆಂಬರ್ 13, 2018
ಮುಳ್ಳೇರಿಯ: ಮುಳಿಯಾರು ಶ್ರೀ ಸುಬ್ರಹ್ಮಣ್ಯ ಸ್ವಾಮೀ ಕ್ಷೇತ್ರದಲ್ಲಿ ಷಷ್ಠಿ ಉತ್ಸವವು ಬ್ರಹ್ಮಶ್ರೀ ಅರವತ್ ದಾಮೋದರ ತಂತ್ರಿಯವರ ನೇತೃತ್ವದಲ್ಲಿ ವಿವಿಧ ಧಾರ್ಮಿಕ ಸಾಂಸ್ಕೃತಿಕ ಸಮಾರಂಭಗಳೊಂದಿಗೆ ಗುರುವಾರ ನಡೆಯಿತು.
ಪೂರ್ವಾಹ್ನದಿಂದ ಅಭಿಷೇಕ ಪೂಜೆ, ಗಣಹೋಮ, ನವಕಾಭಿಷೇಕ, ಭಕ್ತರಿಂದ ತುಲಾಭಾರ ಸೇವೆ ಜರಗಿದವು. ಸಂಗೀತ ಉಪಾಸನಾ ಸೇವೆಯ ಅಂಗವಾಗಿ ವಿದ್ವಾನ್ ನಟರಾಜ ಶರ್ಮಾ ಇವರ ಶಿಷ್ಯೆ ಸ್ಮಿತಾ ಉದಯಪ್ರಕಾಶ್ ಮತ್ತು ಬಳಗವದರಿಂದ ಭಕ್ತಿಗಾನ ಸುಧಾ ಕಾರ್ಯಕ್ರಮವು ಜರಗಿತು. ಸಹಗಾಯನದಲ್ಲಿ ಗಡಿನಾಡ ಕೋಗಿಲೆ ವಿಠಲ ಶೆಟ್ಟಿ ಕಾಸರಗೋಡು ಮತ್ತು ಪ್ರಸನ್ನಕುಮಾರ್ ಬೆಳ್ಳಾರೆ ಭಾಗವಹಿಸಿದರು. ಕೀಬೋರ್ಡಿನಲ್ಲಿ ಅಮ್ಮು ಮಾಸ್ಟರ್ ಕಾಸರಗೋಡು ಮತ್ತು ತಬಲಾ ವಾದನದಲ್ಲಿ ಅಶೋಕ್ ಕಾಸರಗೋಡು ಇವರು ಸಹಕರಿಸಿದರು. ಮಧ್ಯಾಹ್ನ ಮಾಹಾಪೂಜೆ, ಪ್ರಸಾದ , ಅನ್ನದಾನ ನಡೆಯಿತು. ಕ್ಷೇತ್ರದ ಪಾರಂಪರಿಕ ಆಡಳಿತ ಮೊಕ್ತೇಸರ ಯನ್. ಸುಬ್ರಾಯ ಬಳ್ಳುಳ್ಳಾಯ ನೇತೃತ್ವವಹಿಸಿದರು. ಸೀತಾರಾಮ ಬಳ್ಳುಳ್ಳಾಯ ಸಮಾರಂಭ ನಿರ್ವಹಣೆ ಮಾಡಿದರು.



