ಸುದ್ದಿಯಾಗದ ಚಿತ್ರಗಳು
0
ಡಿಸೆಂಬರ್ 17, 2018
ಹಿಂದೆಲ್ಲ ಕುಳಿತಿರಲು ಮರದ ಕುರ್ಚಿ-ಸುಲಭಾಸನಗಳನ್ನು ಬಳಸುತ್ತಿದ್ದರು. ಆದರೆ ಆಧುನಿಕತೆಯ ವೇಗ ಮತ್ತು ಲಭ್ಯತೆಯ ಕೊರತೆಯ ಕಳೆದಶತಮಾನದ ಕೊನೆಯ ದಶಕದಲ್ಲಿ ಮರದ ಬಳಕೆಗೆ ತೊಡರುಗಳು ಎದುರಾಗಿ ಬಹುತೇಕ ಜನಸಾಮಾನ್ಯರ ಅಗತ್ಯದ ಬಳಕೆಯಲ್ಲಿ ಜಾಗರೂಕತೆ ಮೈಗೂಡಿತು. ಇದೇ ಸಂದರ್ಭ ಆಧುನಿಕ ತಂತ್ರಜ್ಞಾನ ಆಗಷ್ಟೆ ಕಿಟಕಿಯಾಚೆ ತಲೆ ಇರಿಸಿತ್ತು. ಪ್ಲಾಸ್ಟಿಕ್ ಗಳ ಬಳಕೆ ಆರಂಭವಾದುದಷ್ಟೆ. ಈ ವೇಳೆ ಮರದ ಕುರ್ಚಿಗಳ ಬದಲಿಗೆ ಪರ್ಯಾಯವಾಗಿ ಅಗ್ಗದಲ್ಲಿ ಕಬ್ಬಿಣದ ಸರಳುಗಳಿಗೆ ಪ್ಲಾಸ್ಟಿಕ್ ನಾರುಗಳನ್ನು ಹಗ್ಗ ಅಥವಾ ಬೆತ್ತದ ಬಳ್ಳಿಗಳಂತೆ ನೇಯ್ದು ಬಳಸುವ ಕುರ್ಚಿಗಳ ಬಳಕೆ ವ್ಯಾಪಿಸಿತು.
ಆಟ, ಆಯನ, ಮದುವೆ, ಮುಂಜಿ, ಸಹಿತ ಗೃಹ ಬಳಕೆಗೂ ಇದೇ ಪ್ಲಾಸ್ಟಿಕ್ ಬಳ್ಳಿಗಳ ಕುರ್ಚಿ ಭಾರೀ ಸದ್ದು ಮಾಡಿತ್ತು. ಆದರೆ ಇಂದು ಪೈಬರ್,ಇತರ ವಿದೇಶಿ ಮರಗಳ ಕುರ್ಚಿ ಬಳಕೆ ವಿಫುಲಗೊಂಡಿರುವಾಗ ಹಿಂದೊಂದು ತಲೆಮಾರಿನ ಇಂತಹ ಕುರ್ಚಿಗಳು ಇಂದು ಬೆರಗುಮೂಡಿಸಿ ನವಿರಾದ ಹಿಂದಿನ ನೆನಪು ಮೂಡಿಸುತ್ತದೆ.

