ಕಂಬಳ ಸಂಸ್ಕøತಿಯ ದ್ಯೋತಕವಾಗಿ ಭದ್ರ ನೆಲೆಯೊದಗಿಸಲಿ-ಎಂ.ಉಮೇಶ ಸಾಲ್ಯಾನ್ ಪೈವಳಿಕೆ ಬೋಳಂಗಳೋತ್ಸವಕ್ಕೆ ವೈಭವೋಪೇತ ಚಾಲನೆ
0
ಡಿಸೆಂಬರ್ 13, 2018
ಉಪ್ಪಳ: ಜಾಗತಿಕ ಮಟ್ಟದಲ್ಲಿ ತುಳು ಭಾಷೆ, ಅದಕ್ಕಿರುವ ಪ್ರಾಚೀನ ಲಿಪಿಯನ್ನು ಶೋಧಿಸಿ ಬೆಳಕಿಗೆತಂದ ದಿ. ವೆಂಕಟರಾಜ ಪುಣಿಚಿತ್ತಾಯರಿಗೆಜನ್ಮ ನೀಡಿದ ಅವರ ಕರ್ಮಭೂಮಿಯಾದ ಕಾಸರಗೋಡಿನಲ್ಲಿ ಕಂಬಳದಂತಹ ತೌಳವ ಸಾಂಸ್ಕøತಿಕತೆಯ ದ್ಯೋತಕಗಳು ಮತ್ತೆ ಬಲಗೊಳ್ಳುತ್ತಿರುವುದು ಹೆಮ್ಮೆಯ ವಿಷಯವಾಗಿದೆ. ಹೊಸ ತಲೆಮಾರಿಗೆ ತೌಳವ ಕಲೆ, ಕ್ರೀಡೆಗಳ ಪರಿಚಯಿಸುವ ಯತ್ನಗಳು ಭಾಷೆ, ಸಂಸ್ಕøತಿಯ ಬೆಳವಣಿಗೆಗೆ ಪೂರಕವಾಗಿ ಇನ್ನಷ್ಟು ಶಕ್ತಿ ನೀಡಲಿ. ಆ ಮೂಲಕ ಮಣ್ಣಿನ ಸತ್ವದ ಸತ್ಪಲ ನೆಮ್ಮದಿಗೆ ಕಾರಣವಾಗಲಿ ಎಂದು ಕೇರಳ ತುಳು ಅಕಾಡೆಮಿ ಅಧ್ಯಕ್ಷ ಎಂ.ಉಮೇಶ್ ಸಾಲ್ಯಾನ್ ಕಾಸರಗೋಡು ಅಭಿಪ್ರಾಯ ವ್ಯಕ್ತಪಡಿಸಿದರು.
ಪೈವಳಿಕೆ ಬೋಳಂಗಳದಲ್ಲಿ ಜಿಲ್ಲಾ ಜನಜಾಗೃತಿ ವೇದಿಕೆ, ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ, ದಕ್ಷಿಣಕನ್ನಡ, ಉಡುಪಿ, ಕಾಸರಗೋಡು ಜಿಲ್ಲಾ ಕಂಬಳ ಸಮಿತಿ ಸಹಿತ ವಿವಿಧ ಸಂಘಸಂಸ್ಥೆಗಳ ನೇತೃತ್ವದಲ್ಲಿ ಗುರುವಾರದಿಂದ ಡಿ.16 ರ ವರೆಗೆ ನಡೆಯಲಿರುವ ಬೋಳಂಗಳೋತ್ಸವಕ್ಕೆ ಗುರುವಾರ ಬೆಳಿಗ್ಗೆ ಜಾನಪದ ಕ್ರೀಡೆ-ಗ್ರಾಮೀಣ ಮೇಳಕ್ಕೆ ಅದ್ದೂರಿಯ ಚಾಲನೆ ನೀಡಿ ದೀಪ ಬೆಳಗಿಸಿ ಅವರು ಮಾತನಾಡಿದರು.
ಕಾರ್ಯಕ್ರಮದಂಗವಾಗಿ ಬೆಳಿಗ್ಗೆ ಪೈವಳಿಕೆಯಿಂದ ಬೋಳಂಗಳಕ್ಕೆ ಚೆಂಡೆ ವಾದ್ಯಮೇಳದಲ್ಲಿ ತುಳುನಾಡಿನ ವೈಭವದ ಮೆರವಣಿಗೆ ನಡೆಯಿತು.
ಕಂಬಳ ಸಮಿತಿ ಗೌರವಾಧ್ಯಕ್ಷ ಡಿ.ಭಾಸ್ಕರ ರೈ ಮಂಜಲ್ತೋಡಿ ಅಧ್ಯಕ್ಷತೆ ವಹಿಸಿದರು.ಗಣ್ಯರಾದ ಸೀತಾರಾಮ ಬಲ್ಲಾಳ್ ಚಿಪ್ಪಾರು, ಅಚ್ಯುತ ಚೇವಾರ್, ಗೋಲ್ಡನ್ ಕೆ.ಎಚ್.ಖಾದರ್, ಪ್ರಸಾದ್ ರೈ ಕಯ್ಯಾರ್, ಅಂದುಞÂ ಹಾಜಿ ಚಿಪ್ಪಾರ್, ಸದಾನಂದ ಕೊಮ್ಮಂಡ, ಹನೀಫ್ ಹಾಜಿ ಪೈವಳಿಕೆ, ಶೀನ ಮಾಸ್ಟರ್ ಕೋರಿಕ್ಕಾರ್, ಜನಾರ್ಧನ ಶೆಟ್ಟಿ ಕಳಾಯಿ,ಲಾರೆನ್ಸ್ ಡಿ.ಸೋಜ, ಜಗದೀಶ ಶೆಟ್ಟಿ ಉರ್ಮಿ, ಶಾಫಿ ಪೈವಳಿಕೆ, ಸದಾನಂದ ಕೋರಿಕ್ಕಾರ್ ಉಪಸ್ಥಿತರಿದ್ದರು. ಕಂಬಳ ಸಮಿತಿ ಅಧ್ಯಕ್ಷ ಅಜಿತ್ ಎಂ.ಸಿ.ಲಾಲ್‍ಬಾಗ್ ಸ್ವಾಗತಿಸಿ, ಪ್ರಧಾನ ಕಾರ್ಯದರ್ಶಿ ಹರೀಶ್ ಶೆಟ್ಟಿ ಕಡಂಬಾರ್ ವಂದಿಸಿದರು. ಪ್ರಧಾನ ಸಂಚಾಲಕ ಅಶ್ವಥ್ ಪೂಜಾರಿ ಲಾಲ್‍ಬಾಗ್ ನಿರೂಪಿಸಿದರು. ಸಮಾರಂಭದ ಬಳಿಕ ಗ್ರಾಮೀಣ ಜಾನಪದ ಕ್ರೀಡೆಗಳು, ಕೇರಳ ಕರ್ನಾಟಕದ ಖ್ಯಾತ ಗಾಯಕರಿಂದ ಮ್ಯೂಸಿಕಲ್ ನೈಟ್ ಮತ್ತು ಮಂಗಳೂರು ತಂಡದಿಂದ ನೃತ್ಯವೈಭವ ನಡೆಯಿತು.ಅಣ್ಣತಮ್ಮ ಜೋಡುಕರೆ ಕಂಬಳವು ಡಿ.15 ರಂದು ಜರಗಲಿರುವುದು.
ಹೇಗೆ ತಲಪಬಹುದು-ದಾರಿ: ರಾ.ಹೆದ್ದಾರಿಯ ಮೂಲಕ ಕಾಸರಗೋಡು ಮತ್ತು ಮಂಗಳೂರಿನಿಂದ ಆಗಮಿಸುವವರು ಉಪ್ಪಳ ಅಥವಾ ಕೈಕಂಬದಿಂದ ಪೈವಳಿಕೆ ಬಾಯಾರು ರಸ್ತೆಯಲ್ಲಿ ಪೈವಳಿಕೆಯಿಂದ ಒಂದು ಕಿಲೋಮೀಟರ್ ದೂರದಲ್ಲಿರುವ ಲಾಲ್‍ಬಾಗ್ ಎಂಬಲ್ಲಿ ಅರ್ಧ ಕಿಲೋಮೀಟರ್ ಚಿಪ್ಪಾರು ರಸ್ತೆಯಲ್ಲಿ ಸಂಚರಿಸಿದಾಗ ಬೋಳಂಗಳ ತಲಪಬಹುದು. ಪುತ್ತೂರು-ವಿಟ್ಲ, ಪೆರುವಾಯಿ ಕಡೆಯಿಂದ ಆಗಮಿಸುವವರು ಬಾಯಾರು ಮುಳಿಗದ್ದೆ, ಲಾಲ್‍ಬಾಗ್ ಮೂಲಕ ಬೋಳಂಗಳ ತಲಪಬಹುದು.




