ಗುತ್ತು ಚಾವಡಿಯಲ್ಲಿ ದೈವಗಳ ನೇಮೋತ್ಸವ ವೈಭವ
0
ಡಿಸೆಂಬರ್ 13, 2018
ಮುಳ್ಳೇರಿಯ: ಕುಂಬಳೆ ಸೀಮೆಯಲ್ಲಿ ಪ್ರಸಿದ್ಧಿವೆತ್ತ ಉಜಂಪಾಡಿ ಗುತ್ತು ಚಾವಡಿಯಲ್ಲಿ ಉಳ್ಳಾಗುಳು - ಧೂಮಾವತಿ ಹಾಗೂ ಪರಿವಾರ ದೈವಗಳ ನೇಮೋತ್ಸವ ವೈಭವದಿಂದ ನೆರವೇರಿತು.
ಉಜಂಪಾಡಿ ಮಣಿಯೂರು ಶ್ರೀ ಶಾಸ್ತಾರ ದೇವಸ್ಥಾನದ ಪವಿತ್ರಪಾಣಿ ಮುಗೇರು ಗೋಪಾಲರಾವ್, ಆಡಳಿತ ಮೊಕ್ತೇಸರ ಅರಿಯಡ್ಕ ಏಳ್ನಾಡುಗುತ್ತು ಚಿಕ್ಕಪ್ಪ ನಾೈಕ್, ಬೆಳ್ಳಿಪ್ಪಾಡಿ ಸದಾಶಿವ ರೈ, ಕರ್ನೂರು ಗುತ್ತು ರಾಮರತನ್ ನಾೈಕ್ ಉಪಸ್ಥಿತರಿದ್ದು ನೇತೃತ್ವ ವಹಿಸಿದರು.
ಉತ್ಸವ ಕಾರ್ಯಕ್ರಮವನ್ನು ಶಾಂತಿಮಲೆ ಜಗನ್ನಾಥ್ ರೈ, ಉಜಂಪಾಡಿ ವಿಶ್ವನಾಥ ರೈ, ವಾಲ್ತಾಜೆ ದುಗ್ಗಪ್ಪ ಗೌಡ ಎಂ, ಗೋಪಾಲ ಮಣಿಯಾಣಿ, ಹೇಮಂತ ಕುಮಾರ್‍ಉಜಂಪಾಡಿ, ದೈವಿಕ ಕಾರ್ಯಕ್ರಮಗಳ ವ್ಯವಸ್ಥೆಗೆ ನೇತೃತ್ವ ನೀಡಿದರು. ಕಾರ್ಯಕ್ರಮದಂಗವಾಗಿ ಅನ್ನಸಂತರ್ಪಣೆ ಜರಗಿತು. ಮೊಕ್ತೇಸರ ಎ. ನಾರಾಯಣ ನಾೈಕ್ ಉಜಂಪಾಡಿ ಸ್ವಾಗತಿಸಿದರು.


