ತಿರುವನಂತಪುರ: 50 ವರ್ಷದೊಳಗಿನ ಮಹಿಳೆಯರಿಬ್ಬರು ಶಬರಿಮಲೆ ಪ್ರವೇಶಿಸಿದ ಹಿನ್ನೆಲೆಯಲ್ಲಿ ಕೇರಳದ ಶಬರಿಮಲೆಯಲ್ಲಿ ಉದ್ವಿಗ್ನ ಪರಿಸ್ಥಿತಿ ಎದುರಾಗಿದ್ದು, ಪ್ರತಿಭಟನೆ ಹತ್ತಿಕ್ಕಲು ಪೊಲೀಸರು ಸ್ಟನ್ ಗ್ರೆನೇಡ್ (ಭಾರೀ ಸದ್ದು, ಮಿಂಚಿನಂತಹ ಬೆಳಕಿನೊಂದಿಗೆ ಸ್ಫೋಟಿಸುವ ಆದರೆ, ಯಾವುದೇ ಹಾನಿ ಎಸಗದ ಗುಂಡು), ಅಶ್ರುವಾಯು ಪ್ರಯೋಗಿಸಿದ್ದಾರೆಂದು ಬುಧವಾರ ತಿಳಿದುಬಂದಿದೆ.
ದೇಗುಲಕ್ಕೆ ಮಹಿಳೆಯರು ಪ್ರವೇಶಿಸಿದ್ದಕೆಕ ಅಯ್ಯಪ್ಪ ಭಕ್ತರು, ವಿವಿಧ ಸಂಘಟನೆಗಳು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದು, ಹಲವೆಡೆ ಘರ್ಷಣೆಗಳು ಏರ್ಪಟ್ಟಿವೆ. ಈ ನಡುವೆ ಕೆಲ ಸಂಘಟನೆಗಳು ಗುರುವಾರ ರಾಜ್ಯ ಬಂದ್'ಗೆ ಕರೆ ನೀಡಿವೆ.
ಕೇರಳ ರಾಜಧಾನಿ ತಿರುವನಂತಪುರದಲ್ಲಿ ಬಿಜೆಪಿ ಹಾಗೂ ಸಿಪಿಎಂ ಕಾರ್ಯಕರ್ತರ ನಡುವೆ ಮಾರಾಮಾರಿ ನಡೆದಿದೆ.
ಈ ನಡುವೆ ಹೇಳಿಗೆ ನೀಡಿರುವ ಸಿಪಿಐ ರಾಜ್ಯ ಕಾರ್ಯದರ್ಶಿ ಕೊಡಿಯೆರಿ ಬಾಲಕೃಷ್ಣನ್ ಅವರು, ದೇಗುಲದ ಬಾಗಿಲು ಮುಚ್ಚುವ ಮೂಲಕ ಅರ್ಚಕರು ಸಂವಿಧಾನ ಹಾಗೂ ಸುಪ್ರೀಂಕೋರ್ಟ್ ತೀರ್ಪವನ್ನು ಉಲ್ಲಂಘನೆ ಮಾಡಿದ್ದಾರೆಂದು ಹೇಳಿದ್ದಾರೆ.
ಮಹಿಳೆಯರಿಗೆ ಪ್ರವೇಶ ನೀಡಲು ಸರ್ಕಾರ ಹಾಗೂ ಪೊಲೀಸರು ಸಹಕಾರ ನೀಡಿರುವುದನ್ನು ಖಂಡಿಸಿ ಶಬರಿಮಲೆ ಕರ್ಮ ಸ ಮಿತಿ ಗುರುವಾರ ಬೆಳಿಗ್ಗೆ 6 ಗಂಟೆಯಿಂದ ಸಂಜೆ 6ರವರೆಗೆ ಕೇರಳ ರಾಜ್ಯದಾದ್ಯಂತ ಹರತಾಳಕ್ಕೆ ಕರೆ ನೀಡಿದೆ. ಮತ್ತೊಂದೆಡೆ ಬಿಜೆಪಿ ಕಾರ್ಯಕರ್ತರು ಬೀದಿಗಿಳಿದಿದ್ದು, ಭಾರೀ ಪ್ರತಿಭಡಟನೆ ನಡೆಸುತ್ತಿದ್ದಾರೆ. ರಾಜ್ಯದೆಲ್ಲೆಡೆ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿರುವ ಹಿನ್ನಲೆಯಲ್ಲಿ ಭದ್ರತೆಯನ್ನು ಹೆಚ್ಚಿಸಲಾಗಿದೆ ಎಂದು ವರದಿಗಳು ತಿಳಿಸಿವೆ.
ಇಂದು ಬೆಳಿಗಿನ ಮುಂಜಾನೆ 3.45ರ ಸುಮಾರಿಗೆ ವಕೀಲೆ ಬಿಂದು ಹಾಗೂ ಸರ್ಕಾರಿ ಉದ್ಯೋಗಿಯಾಗಿರುವ ಕನಕದುರ್ಗಾ ಎನ್ನುವ ಇಬ್ಬರು 50 ವರ್ಷದ ಮಹಿಳೆಯರು ಶಬರಿಮಲೆ ಪ್ರವೇಶಿಸಿದ್ದರು.





