HEALTH TIPS

ಶತಂ ಸಮರ್ಪಯಾಮಿಗೆಹರಿದು ಬರುತ್ತಿದೆ ಸಮರ್ಪಣೆ

   
    ಕಾಸರಗೋಡು: ಶಬರಿಮಲೆ ಆಚಾರ ಅನುಷ್ಠಾನಗಳನ್ನು ಸಂರಕ್ಷಿಸುವ ನಿಟ್ಟಿನಲ್ಲಿ ಜೈಲಿನಲ್ಲಿ ಕಳೆಯುತ್ತಿರುವ ಸಹಸ್ರಾರು ಅಯ್ಯಪ್ಪ ಭಕ್ತರ ವಿಮೋಚನೆಗಾಗಿ ಶಬರಿಮಲೆ ಕ್ರಿಯಾ ಸಮಿತಿ ಮುಂದಿರಿಸಿದ `ಶತಂ ಸಮರ್ಪಯಾ"' ಅಭಿಯಾನವು ಸಾಮಾಜಿಕ ಜಾಲತಾಣದಲ್ಲಿ ಸಂಚಲವನ್ನು ಮೂಡಿಸಿ ಸಹಸ್ರಾರು ಮಂದಿ ತಮ್ಮ ದೇಣಿಗೆಯನ್ನು ನೀಡುತ್ತಿದ್ದಾರೆ.
ಇತ್ತೀಚೆಗೆ ಮಲಯಾಳಂ ಚಿತ್ರನಟ ಸಂತೋಷ್ ಪಂಡಿತ್ 51,000 (ಐವತ್ತೊಂದು ಸಾವಿರ) ರೂಪಾಯನ್ನು ನೀಡಿದ ದಾಖಲೆಯನ್ನು ತನ್ನ ಫೇಸ್‍ಬುಕ್ ಪುಟದಲ್ಲಿ ಹರಿಯಬಿಟ್ಟಿದ್ದು ಈ ಅಭಿಯಾನವು ವ್ಯಾಪಕ ಪ್ರಚಾರವನ್ನು ಪಡೆದುಕೊಂಡಿತ್ತು. ಜ.20ರಂದು ತಿರುವನಂತಪುರದ ಪುತ್ತರಿಕಂಡಂ ಮೈದಾನಲ್ಲಿ ಅಯ್ಯಪ್ಪ ಕ್ರೀಯಾಸಮಿತಿಯ ಲಕ್ಷಾಂತರ ಮಂದಿ ಪಾಲ್ಗೊಂಡ `ಅಯ್ಯಪ್ಪ ಭಕ್ತ ಸಂಗಮ' ದಲ್ಲಿ ಕೆ.ಪಿ. ಶಶಿಕಲಾ ಟೀಚರ್ `ಶತಂ ಸಮರ್ಪಯಾ"' ಅಭಿಯಾನಕ್ಕೆ ಚಾಲನೆಯನ್ನು ನೀಡಿದ್ದರು. ವಾಟ್ಸಪ್, ಫೇಸ್ ಬುಕ್, ಟ್ವಟ್ಟರ್ ಮೂಲಕ "ಶ್ವದಾದ್ಯಂತ ಈ ಅಭಿಯಾನವುಪ್ರಚಾರವನ್ನು ಪಡೆದುಕೊಂಡಿತು.
ಬದಿಯಡ್ಕದಲ್ಲಿ `ದಿಶಾ' ವಾಟ್ಸಪ್ ಗುಂಪಿನ ವತಿಯಿಂದ ಸಂಗ್ರಹಿಸಿದ 20,200 (ಇಪ್ಪತ್ತು ಸಾವಿರದ ಇನ್ನೂರು) ರೂಪಾಯನ್ನು ವಿಜಯಾ ಬ್ಯಾಂಕ್ ಮುಖಾಂತರ ಶಬರಿಮಲೆ ಕರ್ಮಸಮಿತಿಯ ಖಾತೆಗೆ ಶುಕ್ರವಾರ ವರ್ಗಾಸಲಾಯಿತು.
ಶಬರಿಮಲೆ ಆಚಾರ ಸಂರಕ್ಷಣೆಗಾಗಿ ನಡೆದ ಹೋರಾಟದಲ್ಲಿ ಸಾವಿರಾರು ಮಂದಿಯ ವಿರುದ್ದ ಪಿಣರಾ ಪೊಲೀಸ್ ಜಾಮೀನು ರಹಿತ ಪ್ರಕರಣ ದಾಖಲಿಸಿದೆ. ಸಾವಿರಾರು ಮಂದಿ ಇದೀಗ ರಿಮಾಂಡ್ ಶಿಕ್ಷೆ ಅನುಭವಿಸುತ್ತಿದ್ದಾರೆ. ಇನ್ನು ಹಲವರು ನಿರೀಕ್ಷಣಾ ಜಾಮೀನು ಪಡೆಯಲು ನ್ಯಾಯಾಲಯಗಳಿಗೆ ಅಲೆಯುತ್ತಿದ್ದಾರೆ. ಜೈಲು ಸೇರಿದವರ ಬಿಡುಗಡೆ ಹಾಗೂ ಅವರ ಕುಟುಂಬ, ಮಕ್ಕಳ ಶಾಲೆ, ಮನೆಯಲ್ಲಿರುವ ರೋಗಿಗಳಿಗೆ ಔಷಧ, ದಿನ ನಿತ್ಯದ ಖರ್ಚು ಸಹಿತ ಲಕ್ಷಾಂತರ ರೂಗಳ ಅಗತ್ಯವಿದೆ.
       `ಶತಂ ಸಮರ್ಪಯಾ"' ಅಭಿಯಾನಕ್ಕೆ ಬೆಂಬಲಿಸಿ ಶಬರಿಮಲೆಯಲ್ಲಿ ನಾಮಜಪಗೈದು ಜೈಲು ಸೇರಿದ ಅಯ್ಯಪ್ಪ ಭಕ್ತರ ಸಂರಕ್ಷಣೆಗಾಗಿ ನೀವೂ ಕೈಜೋಡಿಸಬಹುದು :
      Name of A/c. : SABARIMALA KARMA SAMITHI,
A/c. No. : : 014805300019067,
Bank : DHANALAXMI Bank Ltd.
Branch : KALOOR, Ernakulam, Kochi – 682017
IFSC Code : DLXB0000148 
 
   ಶಬರಿಮಲೆ ವಿಚಾರದಲ್ಲಿ ಜೈಲು ಸೇರಿದ ಭಕ್ತಾದಿಗಳ ಸಂರಕ್ಷಣೆಗಾಗಿ ಆರಂಭಗೊಂಡ `ಶತಂ ಸಮರ್ಪಯಾ"' ಅಭಿಯಾನಕ್ಕೆ ಹಲವು ವಾಟ್ಸಪ್ ಗ್ರೂಪುಗಳ ಮಧ್ಯೆ ಸಾಮಾಜಿಕ ಕಳಕಳಿಂದ ಉತ್ತಮವಾದ ಬೆಂಬಲವನ್ನು ನೀಡಿ ಬದಿಯಡ್ಕ ಆಸುಪಾಸಿನ ಸದಸ್ಯರ `ದಿಶಾ' ವಾಟ್ಸಪ್ ಗ್ರೂಪ್ ಇತರರಿಗೆ ಮಾದರಿಯಾಗಿದೆ.
     - ಪ್ರಶಾಂತ್ ಕುಣಿಕುಳ್ಳಾಯ ಉಬ್ರಂಗಳ, ವಿಹಿಂಪ ಕೋಶಾಧ್ಯಕ್ಷರು, ಮಂಗಳೂರು ಜಿಲ್ಲೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries