HEALTH TIPS

ಓಂಕಾರ್ ಕೊಟ್ಟಂಗುಳಿ ರಾಷ್ಟ್ರೀಯ ಯೋಗ ಚಾಂಪಿಯನ್ ಸ್ಪರ್ಧೆಗೆ ಆಯ್ಕೆ


         ಮುಳ್ಳೇರಿಯ: ಕಾಸರಗೋಡು ಜಿಲ್ಲಾ ಯೋಗ ಸ್ಪರ್ಧೆಯಲ್ಲಿ ಮತ್ತು ಇತ್ತೀಚೆಗೆ ತಿರುವನಂತಪುರದಲ್ಲಿ ನಡೆದ ಕೇರಳ ರಾಜ್ಯ 62ನೇ ಶಾಲಾ ಸೀನಿಯರ್ ಯೋಗ ಚಾಂಪಿಯನ್ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನಗಳಿಸಿ ರಾಷ್ಟ್ರೀಯ ಸ್ಪರ್ಧೆಗೆ ಯೋಗಪಟು ಓಂಕಾರ್ ಕೊಟ್ಟಂಗುಳಿ ಆಯ್ಕೆಯಾಗಿದ್ದಾರೆ.
        ದೆಹಲಿಯಲ್ಲಿ ಜ.3 ರಿಂದ 9 ರ ವರೆಗೆ ಈ ಸ್ಪರ್ಧೆಗಳು ನಡೆಯಲಿವೆ. ಈತ ವೈಯುಕ್ತಿಕ ವಿಭಾಗದಲ್ಲಿ ಮತ್ತು ತಂಡದಲ್ಲಿ ಸ್ಥಾನ ಪಡೆದಿದ್ದಾನೆ. ಹುಡುಗರು ಮತ್ತು ಹುಡುಗಿಯರು  ಸೇರಿ ಒಟ್ಟು 14 ಮಂದಿ ಕೇರಳ ರಾಜ್ಯವನ್ನು ಪ್ರತಿನಿಧಿಸಿ ತಂಡದಲ್ಲಿದ್ದಾರೆ.
  ಪ್ರಾಥಮಿಕ ಯೋಗ ವಿದ್ಯಾಭ್ಯಾಸವನ್ನು ತಂದೆಯಿಂದ ಕಲಿತು, ಶಾಲಾ ಹಂತದಲ್ಲಿ ವಿದ್ಯಾಶ್ರೀ ಶಿಕ್ಷಣ ಕೇಂದ್ರದ ಶಿಕ್ಷಕಿಯಾದ ಕಾವ್ಯಶ್ರೀಯವರ ಗರಡಿಯಲ್ಲಿ ಪಳಗಿದ ಇವನು ಮುಂದೆ ಅಗಲ್ಪಾಡಿಯ ಅನ್ನಪೂರ್ಣೇಶ್ವರಿ ಶಾಲೆಯ ಕ್ರೀಡಾ ಶಿಕ್ಷಕ ಶಶಿಕಾಂತ ಬಲ್ಲಾಳ್ ಇವರ ಬೆಂಬಲದಿಂದ ಉತ್ತಮ ಯೋಗಪಟುವಾಗಿ ಬೆಳೆದಿದ್ದಾನೆ.
ಕಳೆದ ವರ್ಷ ಬೆಂಗಳೂರಿನ ರಾಮನಗರದಲ್ಲಿ ನಡೆದ ರಾಷ್ಟ್ರೀಯ ಸ್ಪರ್ಧೆಯಲ್ಲಿ ಚಿನ್ನದ ಪದಕ ಪಡೆದಿದ್ದಾನೆ. ಅಗಲ್ಪಾಡಿಯ ಅನ್ನಪೂರ್ಣೇಶ್ವರಿ ಶಾಲೆಯ ಪ್ಲಸ್‍ಟು ವಿದ್ಯಾರ್ಥಿಯಾದ ಈತ ಮುಳ್ಳೇರಿಯ ಸಮೀಪದ ಕೊಟ್ಟಂಗುಳಿ ಸುಬ್ರಹ್ಮಣ್ಯ ಭಟ್ ಮತ್ತು ಅನ್ನಪೂರ್ಣ ದಂಪತಿ ಪುತ್ರ.
ಯೋಗಾಸನವನ್ನು ಲೋಕಕ್ಕೆ ಪರಿಚಯಿಸಿದ ಭಾರತದಲ್ಲೀಗ ಯೋಗ ಶಿಕ್ಷಣದತ್ತ ಯುವಕರು ಆಕರ್ಷಿತರಾಗಿದ್ದಾರೆ. ಕೇರಳದ ಶಾಲೆ ಮತ್ತು ಕಾಲೇಜುಗಳಲ್ಲಿ ಉತ್ತಮ ಯೋಗ ಶಿಕ್ಷಕರಿಲ್ಲದೆ ಅರ್ಹತೆ ಇರುವ ವಿದ್ಯಾರ್ಥಿಗಳು ವಂಚಿತರಾಗಿದ್ದಾರೆ. ಆದಷ್ಟು ಶೀಘ್ರದಲ್ಲಿ ಯೋಗ ಶಿಕ್ಷಕರನ್ನು ನಿಯಮಿಸಿ ವಿದ್ಯಾರ್ಥಿಗಳನ್ನು ಉತ್ತಮ ಯೋಗಪಟುಗಳನ್ನಾಗಿಸಲು ಕ್ರೀಡಾ ಸಚಿವರು   ಪ್ರಯತ್ನಿಸಬೇಕು ಎಂಬುದು ಎಲ್ಲಾ ಯೋಗಾಸನ ಪ್ರೇಮಿಗಳ ವಿನಂತಿ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries