ಬದಿಯಡ್ಕ: ಶ್ರೀಭಾರತೀ ವಿದ್ಯಾಪೀಠ ಬದಿಯಡ್ಕ ಹಾಗೂ ಕಲ್ಕೂರ ಪ್ರತಿಷ್ಠಾನ ಮಂಗಳೂರು ಇವುಗಳ ಜಂಟಿ ಆಶ್ರಯದಲ್ಲಿ ಜ.12 ರಂದು ಶನಿವಾರ ಅಪರಾಹ್ನ 2 ರಿಂದ ಸಂಜೆ 5.30ರ ವರೆಗೆ ಬದಿಯಡ್ಕದ ಶ್ರೀಭಾರತೀ ವಿದ್ಯಾಪೀಠದಲ್ಲಿ ಅಷ್ಟಾವಧಾನ ಕಲಾ ಪ್ರಸ್ತುತಿ ನಡೆಯಲಿದೆ.
ಸಮಾರಂಭದಲ್ಲಿ ಅವಧಾನಿಗಳಾಗಿ ಸಂಸ್ಕøತ ಭಾರತಿಯ ಪರಿಯೋಜನಾ ಸಹಾಯಕ ಸೂರ್ಯ ಹೆಬ್ಬಾರ್ ಭಾಗವಹಿಸುವರು. ರವಿಶಂಕರ ಭಟ್ ಕೆ.ಎಸ್(ನಿಷೇಧಾಕ್ಷರ), ಶರಣ್ಯ ಪಿ(ಸಮಸ್ಯಾ ಪೂರಣಂ), ಗಣೇಶ ಕೃಷ್ಣ ಭಟ್(ದತ್ತಪದೀ), ಜಯಪ್ರಕಾಶ ಶೆಟ್ಟಿ ಬೇಳ(ಚಿತ್ರಕ್ಕೆ ಪದ್ಯ), ಶ್ಯಾಮ ಭಟ್ ಕೆ(ಸಂಖ್ಯಾಬಂಧಿ), ಗಣೇಶಪ್ರಸಾದ ನಾಯಕ್(ಆಶುಕವಿತೆ), ಶಾಲಿನಿ ಹೆಬ್ಬಾರ್(ಕಾವ್ಯ ವಾಚನ), ಜಿ.ವೀರೇಶ್ವರ ಕರ್ಮರ್ಕರ್(ಅಪ್ರಸ್ತುತ ಪ್ರಸಂಗ) ದಲ್ಲಿ ಭಾಗವಹಿಸುವರು.





