HEALTH TIPS

ಕೊಂಡೆವೂರಿನಲ್ಲಿ 16ನೇ ವರ್ಷದ ಅಖಂಡ ಭಜನಾ ಸಪ್ತಾಹಕ್ಕೆ ಚಾಲನೆ

ಉಪ್ಪಳ: ಕೊಂಡೆವೂರಿನ ಶ್ರೀ ನಿತ್ಯಾನಂದ ಯೋಗಾಶ್ರಮದಲ್ಲಿ 16ನೇ ವರುಷದ ಅಖಂಡ ಭಜನಾ ಸಪ್ತಾಹಕ್ಕೆ ಮಾಣಿಲ ಶ್ರೀಧಾಮದ ಪರಮಪೂಜ್ಯ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಮತ್ತು ಕೊಂಡೆವೂರಿನ ಪರಮಪೂಜ್ಯ ಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿಯವರು ಸೋಮವಾರ ಸೂರ್ಯಾಸ್ತಮಾನದ ವೇಳೆ ದೀಪ ಪ್ರಜ್ವಲಿಸುವುದರೊಂದಿಗೆ ಚಾಲನೆ ನೀಡಿದರು. ನಂತರ ಕೊಂಡೆವೂರು ಶ್ರೀಗಳು ಜಾಮಪೂಜೆ ನೆರವೇರಿಸಿದರು. ಈ ಸಂದರ್ಭ ಮಾತನಾಡಿದ ಕೊಂಡೆವೂರು ಶ್ರೀಗಳು ಸದ್ಬಕ್ತರ ಸಂಘಟಿತ ಸಂಕಲ್ಪದ ಫಲವಾಗಿ ಈಗಾಗಲೇ ಅತಿರಾತ್ರ ಸೋಮಯಾಗ ಯಶಸ್ವಿಯಾಗಿ ನೆರವೇರಿದ್ದು, ವೈದಿಕ, ಆಧ್ಯಾತ್ಮಿಕ ಶಕ್ತಿ ಸಂಚಯನದೊಂದಿಗೆ ನಮ್ಮೊಳಗಿನ ಅಂತರ್ಬೋಧೆಗೆ ಬಲ ನೀಡುವ ನಿಟ್ಟಿನಲ್ಲಿ ಅಖಂಡ ಭಜನಾ ಸಪ್ತಾಹ ಯಶಸ್ವಿಯಾಗಲಿ ಎಂದು ತಿಳಿಸಿದರು. ಸೋಮವಾರ ಆರಂಭಗೊಂಡಿರುವ ಅಖಂಡ ಭಜನಾ ಸಪ್ತಾಹ ಮಾರ್ಚ್ 04 ಸೂರ್ಯಾಸ್ತದವರೆಗೆ ನಡೆಯಲಿದ್ದು ವಿವಿಧೆಡೆಗಳ ಭಜನಾ ಮಂದಿರಗಳು, ಸಂಘಗಳು ಭಜನಾ ಸೇವೆ ನಡೆಸಿಕೊಡಲಿದ್ದಾರೆ. ತಮಗೆ ಕೊಟ್ಟ ಸಮಯಕ್ಕಿಂತ ಮುಂಚೆಯೇ ತಲಪುವುದಲ್ಲದೆ, ಭಜನಾ ಪರಿಕರಗಳನ್ನು ತಂದು ಸಹಕರಿಸಬೇಕಾಗಿ ಆಯೋಜಕರು ವಿನಂತಿಸಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries