HEALTH TIPS

ವಿದ್ಯಾಲಯಗಳು ಸಂಸ್ಕಾರ ರೂಪಿಸುವ ಕೇಂದ್ರಗಳಾಗಬೇಕು : ಡಾ.ಪ್ರಭಾಕರ ರೈ

ಉಪ್ಪಳ: ಜಿಲ್ಲಾ ಬಂಟರ ಸಂಘದ ಆಶ್ರಯದಲ್ಲಿ ಉಪ್ಪಳದಲ್ಲಿ ನಡೆಸಲಾಗುತ್ತಿರುವ ಕೇಂದ್ರ ಸರಕಾರದ ಮಾನವ ಸಂಪನ್ಮೂಲ ಇಲಾಖೆಯ ಅಂಗೀಕೃತ ಶಾಲೆಯಾದ ಶ್ರೀ ರಾಮಕೃಷ್ಣ ವಿದ್ಯಾಲಯದ 29 ನೇ ವರ್ಧಂತ್ಯುತ್ಸವ ಶಾಲಾ ಪರಿಸರದಲ್ಲಿ ಜರಗಿತು. ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಮೀಂಜ ಸರಕಾರಿ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಪ್ರಭಾಕರ ರೈ ಅವರು ಶಿಕ್ಷಣದ ಜತೆಗೆ ಸಂಸ್ಕಾರಗಳನ್ನು ರೂಪಿಸುವ ಕೇಂದ್ರಗಳಾಗಿ ವಿದ್ಯಾಲಯಗಳು ಬದಲಾಗಬೇಕು. ಮಕ್ಕಳಲ್ಲಿ ಅಶಿಸ್ತು ಬೆಳೆಯಲು ಭಾರತೀಯ ಸಂಸ್ಕøತಿಯ ಅಧ್ಯಯನದಲ್ಲಿ ಉಂಟಾಗಿರುವ ಕೊರತೆ ಕಾರಣವೆಂದು ಅವರು ಹೇಳಿದರು. ಜಿಲ್ಲಾ ಬಂಟರ ಸಂಘದ ಅಧ್ಯಕ್ಷ ನ್ಯಾಯವಾದಿ ಸದಾನಂದ ರೈ ಅವರ ಅಧ್ಯಕ್ಷತೆಯಲ್ಲಿ ಜರಗಿದ ಸಭಾ ಕಾರ್ಯಕ್ರಮದಲ್ಲಿ ನ್ಯಾಯವಾದಿ ಶೇಕ್ ಅಹಮ್ಮದ್ ಹನೀಫ್ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು. ಶಾಲಾಡಳಿತ ಸಮಿತಿ ಕಾರ್ಯದರ್ಶಿ ನ್ಯಾಯವಾದಿ ಎಂ.ದಾಮೋದರ ಶೆಟ್ಟಿ, ಜಿಲ್ಲಾ ಬಂಟರ ಸಂಘದ ಉಪಾಧ್ಯಕ್ಷ ಸದಾಶಿವ ರೈ ಬೆಳ್ಳಿಪ್ಪಾಡಿ, ಶಾಲಾಡಳಿತ ಸಮಿತಿ ಸದಸ್ಯರಾದ ಕೆ.ಸುಬ್ಬಣ್ಣ ಶೆಟ್ಟಿ, ಅರವಿಂದಾಕ್ಷ ಭಂಡಾರಿ ಮೊದಲಾದವರು ಮಾತನಾಡಿದರು. ಶಾಲಾ ಮುಖ್ಯ ಶಿಕ್ಷಕಿ ಕಸ್ತೂರಿ ವರದಿ ಮಂಡಿಸಿದರು. ಶಾಲಾ ರಕ್ಷಕನ ಶಿಕ್ಷಕ ಸಂಘದ ಅಧ್ಯಕ್ಷ ದಿನೇಶ್ ಭಂಡಾರಿ, ಮಾತೃ ಸಂಘದ ಅಧ್ಯಕ್ಷೆ ಖೆರುನ್ನೀಸಾ ಉಪಸ್ಥಿತರಿದ್ದರು. ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿ - ವಿದ್ಯಾರ್ಥಿನಿಯರಿಗೆ ಮುಖ್ಯ ಅತಿಥಿಗಳು ಬಹುಮಾನಗಳನ್ನು ವಿತರಿಸಿದರು. ಬಳಿಕ ಮಕ್ಕಳಿಂದ ವಿವಿಧ ಮನೋರಂಜನಾ ಕಾರ್ಯಕ್ರಮಗಳು ಜರಗಿತು. ಶಿಕ್ಷಕಿ ಹಿತಾಕ್ಷಿ ಸ್ವಾಗತಿಸಿ, ಫೈರೂಶ ವಂದಿಸಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries