HEALTH TIPS

ಮಂಜಿನಲ್ಲಿ ವರಾಹಾವತಾರ ಸೃಷ್ಟಿ: ಅಂತರಾಷ್ಟ್ರೀಯ ಸ್ಪರ್ಧೆಯಲ್ಲಿ ಭಾರತೀಯರಿಗೆ ಮೊದಲ ಬಹುಮಾನ!

ನಯೋರೋ(ಜಪಾನ್): ಜಪಾನ್ ನ ನಯೋರೋದಲ್ಲಿ ನಡೆದ ಅಂತರಾಷ್ಟ್ರೀಯ ಸ್ನೋ ಸ್ಕಲ್ಪ್‍ಟಿಂಗ್ ಕಾಂಪಿಟೀಷನ್‍ನಲ್ಲಿ ಮೂವರು ಭಾರತೀಯರು ಪ್ರಥಮ ಬಹುಮಾನ ಗಳಿಸಿದ್ದಾರೆ. ಭಾರತ ಮೂಲದ ರವಿ ಪ್ರಕಾಶ್, ಸುನೀಲ್ ಕುಮಾರ್ ಕುಶ್ವಾಹ ಮತ್ತು ರಜನೀಶ್ ವರ್ಮಾ ಈ ಸಾಧನೆ ಮಾಡಿದ್ದು ಇವರು ಮಂಜಿನಲ್ಲಿ ವಿಷ್ಣುವಿನ ವರಾಹಾವತಾರ ಕಲಾಕೃತಿಗೆ ಮೊದಲ ಬಹುಮಾನ ಗಿಟ್ಟಿಸಿಕೊಂಡಿದ್ದಾರೆ. ಫೆಬ್ರವರಿ 6-9ರಂದು ನಡೆದಿದ್ದ ಈ ಸ್ಪರ್ಧೆಯಲ್ಲಿ ಈ ಮೂವರೂ ಮೈನಸ್ 25 ಡಿಗ್ರಿ ಉಷ್ಣಾಂಶದ ನಡುವೆ 4 ಮೀಟರ್ ಎತ್ತರದ ವರಾಹ ಮೂರ್ತಿಯನ್ನು ನಿರ್ಮಿಸಿದ್ದರು. ಅಭ್ಯುದಯ ತಂಡದ ಸದಸ್ಯರಾಗಿರುವ ಈ ಸಾಧಕ ತ್ರಯರು ಇದೇ ಮೊದಲ ಬಾರಿಗೆ ರಾಷ್ಟ್ರಕ್ಕೆ ಮೊದಲ ಬಹುಮಾನ ಸಿಗುವಂತೆ ಮಾಡಿದ್ದು ದೇಶವಾಸಿಗ ಹೆಮ್ಮೆಗೆ ಇನ್ನೊಂದು ಗರಿ ಮೂಡಿಸಿದ್ದಾರೆ. ಅಂದಹಾಗೆಯೇ ಅಂತರಾಷ್ಟ್ರೀಯ ಸ್ನೋ ಸ್ಕಲ್ಪ್‍ಟಿಂಗ್ ಕಾಂಪಿಟೀಷನ್‍ನಲ್ಲಿ ಭಾಗವಹಿಸಿದ ಮೊದಲ ಭಾರತೀಯ ತಂಡ ಸಹ ಇದಾಗಿದೆ. ಕಳೆದ 19 ವರ್ಷಗಳಿಂದ ನಡೆಯುತ್ತಿರುವ ಈ ಸ್ಪರ್ಧೆಯಲ್ಲಿ ಈ ಸಾಲಿನಲ್ಲಿ ರಷ್ಯಾ, ಥಾಯ್ ಲ್ಯಾಂಡ್, ಕ್ರಮವಾಗಿ ದ್ವಿತೀಯ ಹಾಗೂ ತೃತೀಯ ಸ್ಥಾನ ಲಭಿಸಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries