HEALTH TIPS

ಎಡನೀರು ವಿಷ್ಣುಮಂಗಲ ದೇವಾಲಯದ ವಾರ್ಷಿಕೋತ್ಸವ- ಗಮನ ಸೆಳೆದ ಜೋಡಿ ದೇವರ ಬಲಿ

ಬದಿಯಡ್ಕ: ಶ್ರೀಮದ್ ಎಡನೀರು ಮಠದ ಎಡನೀರು ಶ್ರೀವಿಷ್ಣುಮಂಗಲ ದೇವಾಲಯದ ವಾರ್ಷಿಕೋತ್ಸವ ಬುಧವಾರದಿಂದ ಆರಂಭಗೊಂಡಿದ್ದು, ಉತ್ಸವದ ಎರಡನೇ ದಿನವಾದ ಗುರುವಾರ ಬೆಳಿಗ್ಗೆ 9 ರಿಂದ ಶ್ರೀಭೂತಬಲಿ ನಡೆಯಿತು. ಶ್ರೀಮಹಾವಿಷ್ಣು ಹಾಗೂ ಶ್ರೀದಕ್ಷಿಣಾಮೂರ್ತಿ ದೇವರ ದರ್ಶನಬಲಿ ಈ ಸಂದರ್ಭ ನಡೆಯಿತು. ಸಂಜೆ 6ರಿಂದ ದೀಪೋತ್ಸವ, ಭಜನಾ ಸಂಕೀರ್ತನೆ ನಡೆಯಿತು. ಸಾಂಸ್ಕøತಿಕ ಕಾರ್ಯಕ್ರಮದ ಅಂಗವಾಗಿ ರಾತ್ರಿ 8 ರಿಂದ ವಿದ್ವಾನ್ ಟಿ.ಪಿ.ಶ್ರೀನಿವಾಸ್ ಕಾಂಞÂಂಗಾಡ್ ಹಾಗೂ ಬಳಗದವರಿಂದ ಶಾಸ್ತ್ರೀಯ ಸಂಗೀತ ಕಚೇರಿ ನಡೆಯಿತು. ಇಂದಿನ ಕಾರ್ಯಕ್ರಮ: ಫೆ.15 ರಂದು ಸಂಜೆ 6.30ರಿಂದ ಮುಂಬೈಯ ಶ್ರೀರಾಜರಾಜೇಶ್ವರಿ ಕಲಾ ಮಂಡಳಿಯವರಿಂದ ಕಲೈಮಾಣಿ ಗುರು ಕೆ.ಕಲ್ಯಾಣ ಸುಂದರಂ ಮುಂಬೈ ಅವರ ನೇತೃತ್ವದಲ್ಲಿ ಭರತನಾಟ್ಯ ಪ್ರದರ್ಶನ ನಡೆಯಲಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries