HEALTH TIPS

ಹವಾಮಾನ ಬದವಾವಣೆ ಬಗ್ಗೆ ಜಾಗೃತಿ ಮೂಡಿಸಿದ 16ರ ಬಾಲಕಿ ಹೆಸರು ನೊಬೆಲ್ ಶಾಂತಿ ಪ್ರಶಸ್ತಿಗೆ ಶಿಫಾರಸು

ಕೋಪೆನ್ ಹೇಗನ್: ಹದಿನಾರರ ಹರೆಯದ ಪರಿಸರ ಹೋರಾಟಗಾರ್ತಿ, ಜಾಗತಿಕ ಹವಾಮಾನ ಬದಲಾವಣೆಯ ವಿರುದ್ಧ ಅಭಿಯಾನವನ್ನೇ ಆರಂಭಿಸಿರುವ ಸ್ವೀಡನ್ ದೇಶದ ಬಾಲಕಿ ಗ್ರೇಟಾ ತುಂಬರ್ಗ್ ಹೆಸರು ಈ ಸಾಲಿನ ನೋಬೆಲ್ ಶಾಂತಿ ಪುರಸ್ಕಾರಕ್ಕೆ ನಾಮನಿರ್ದೇಶನಗೊಂಡಿದೆ. ನಾರ್ವೆ ದೇಶದ ಸಂಸದರು ಆಕೆಯ ಉತ್ತಮ ಕೆಲಸಗಳನ್ನು ಮನ್ನಿಸಿ ಅವಳ ಹೆಸರನ್ನು ಪ್ರತಿಷ್ಠಿತ ಪ್ರಶಸ್ತಿಗೆ ಶಿಪಾರಸು ಮಾಡಿದ್ದಾರೆ. 2018ರ ಆಗಸ್ಟ್ ನಲ್ಲಿ ಏಕಾಂಗಿಯಾಗಿ ಹೋರಾಟ ಪ್ರಾರಂಭಿಸಿದ ತುಂಬರ್ಗ್ ಇಂದು ಅನೇಕ ರಾಷ್ಟ್ರಗಳ ವಿದ್ಯಾರ್ಥಿಗಳಿಗೆ ಪ್ರೇರಣೆಯಾಗಿದ್ದಾಳೆ. ಕಳೆದ ವರ್ಷ ಸ್ವೀಡನ್ ಸಂಸತ್ತಿನ ಎದುರೇ "ಸ್ಕೂಲ್ ಸ್ಟ್ರೈಕ್" ನಡೆಸಿ ಸುದ್ದಿಯಾಗಿದ್ದ ತುಂಬರ್ಗ್ ಹವಾಮಾನಕ್ಕಾಗಿ ಶಾಲಾ ಮುಷ್ಕರ ಎಂಬ ಘೋಷಣೆ ಮೊಳಗಿಸಿದ್ದರು. 2019 ಮಾರ್ಚ್ ನಲ್ಲಿ 105 ರಾಷ್ಟ್ರಗಳಲ್ಲಿ 1600 ನಗರಗಳಲ್ಲಿ ಸಾವಿರಾರು ವಿದ್ಯಾರ್ಥಿಗಳಿಗೆ 16 ವರ್ಷ ಪ್ರಾಯದ ಬಾಲಕಿಯಿಂದ ಪ್ರೇರಿತರಾಗಿ ಹವಾಮಾನ ಬದಲಾವಣೆಯ ಮೇಲೆ ತುರ್ತು ಕ್ರಮ ತೆಗೆದುಕೊಳ್ಳಬೇಕೆಂದು ಒತ್ತಾಯಿಸಿ ಪ್ರತಿಭಟನೆಗಿಳಿದಿದ್ದರು. ಪೋಲೆಂಡ್ ಹಾಗೂ ದಾವೋಸ್ ನಲ್ಲಿನ ವಿಶ್ವಸಂಸ್ಥೆಯ ಹವಾಮಾನ ಬದಲಾವಣೆ ಶೃಂಗಸಭೆಯಲಿ ಭಾಗವಹಿಸಿ ಮಾಡಿದ್ದ ಭಾಷಣಗಳು ತುಂಬರ್ಗ್ ಅವರನ್ನು ವಿಶ್ವದಾದ್ಯಂತ ಪ್ರಸಿದ್ದಿಯಾಗುವಂತೆ ಮಾಡಿವೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries