HEALTH TIPS

ಅರುಣಾಚಲವನ್ನು ದಕ್ಷಿಣ ಟಿಬೆಟ್ ಎಂದ ಚೀನಾ; 30,000 ವಿಶ್ವ ಭೂಪಟಗಳ ನಾಶ!

ಬೀಜಿಂಗ್: ಚೀನಾದಲ್ಲಿ ಮುದ್ರಿಸಲಾಗಿದ್ದ 30,000 ವಿಶ್ವ ಭೂಪಟಗಳನ್ನು ನಾಶ ಮಾಡಲಾಗಿದ್ದು, ಭಾರತದ ಭೂ ಪ್ರದೇಶವಾಗಿರುವ ಅರುಣಾಚಲ ದೇಶವನ್ನು ದಕ್ಷಿಣ ಟಿಬೆಟ್ ಎಂದು ಕರೆದುಕೊಂಡಿದೆ. ಅರುಣಾಚಲ ಪ್ರದೇಶ ಹಾಗೂ ತೈವಾನ್ ನ್ನು ಚೀನಾದಿಂದ ಬೇರ್ಪಡಿಸಿ ರಚಿಸಲಾಗಿದ್ದ ಭೂಪಟಗಳನ್ನು ಚೀನಾ ಅಧಿಕಾರಿಗಳು ನಾಶ ಮಾಡಿದ್ದಾರೆ. ಅರುಣಾಚಲ ಪ್ರದೇಶವನ್ನು ಚೀನಾ ಲಗಾಯ್ತಿನಿಂದ ದಕ್ಷಿಣ ಟಿಬೆಟ್ ಎಂದೇ ಪರಿಗಣಿಸುತ್ತಿದೆ. ಅರುಣಾಚಲ ಪ್ರದೇಶಕ್ಕೆ ಭಾರತದ ಯಾವುದೇ ನಾಯಕರು ಭೇಟಿ ನೀಡಿದರೂ ಸಹ ಅದನ್ನು ಚೀನಾ ವಿರೋಧಿಸುತ್ತದೆ. ಇದಷ್ಟೆ ಅಲ್ಲದೇ ತೈವಾನ್ ನ್ನೂ ಸಹ ತನ್ನದೇ ಭೂ ಪ್ರದೇಶವೆಂದು ಪ್ರತಿಪಾದನೆ ಮಾಡುತ್ತದೆ. ಚೀನಾ ಈಗ ನಾಶಪಡಿಸಿರುವ ಭೂಪಟಗಳನ್ನು ರಫ್ತು ಮಾಡುವುದಕ್ಕಾಗಿಯೇ ತಯಾರಿಸಿತ್ತು. ಆದರೆ ಅರುಣಾಚಲ ಪ್ರದೇಶ ಹಾಗೂ ತೈವಾನ್ ಭೂಪಟದಲ್ಲಿಲ್ಲದ ಕಾರಣ ಅದನ್ನು ನಾಶಪಡಿಸಲಾಗಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries